newsfirstkannada.com

‘ಪಂಚ’ ರಾಜ್ಯ ಗೆಲ್ಲಲು ಮೋದಿ, ಅಮಿತ್​ ಶಾ ಮಾಸ್ಟರ್‌ ಪ್ಲಾನ್; ‘ಕೇಸರಿ’ ನಾಯಕರ ಮಿಡ್‌ನೈಟ್ ಮೀಟಿಂಗ್ ಆಗಿದ್ದೇನು?

Share :

02-07-2023

    ಐದು ಗಂಟೆಗಳ ಕಾಲ ‘ಕೇಸರಿ’ ನಾಯಕರ ಮೀಟಿಂಗ್‌

    ಗೆಲುವಿನ ಭದ್ರಕೋಟೆ ಕಾಪಾಡಿಕೊಳ್ಳಲು ರಣತಂತ್ರ

    ಐದು ರಾಜ್ಯಗಳ ಅಧಿಪತ್ಯಕ್ಕಾಗಿ ವಿಸ್ತಾರಕರ ರವಾನೆ

ಕರುನಾಡನ್ನ ಜಯಿಸಲಾಗದೇ ಕಮಲ ಪಾಳಯ ಮಂಡಿಯೂರಿದೆ. ಹಲವಾರು ಸ್ಟ್ರಾಟಜಿ ಮಾಡಿದ್ರೂ ಮತದಾರ ಕೊಟ್ಟ ತೀರ್ಪಿಗೆ ತಲೆಬಾಗಿದೆ. ಈ ಸೋಲಿನಿಂದ ಪಾಠ ಕಲಿತಿರೋ ಬಿಜೆಪಿ ದೇಶದಲ್ಲಿ ಮತ್ತೆ ಪುಟಿದೇಳಲು ವರ್ಕೌಟ್‌ ಮಾಡುತ್ತಿದೆ. ಈ ವರ್ಷದ ಅಂತ್ಯದಲ್ಲಿ ಪಂಚ ರಾಜ್ಯಗಳ ಚುನಾವಣೆ ಎದುರಾಗಿದ್ದು, ಈ ರಾಜ್ಯಗಳಲ್ಲಿ ಕೇಸರಿ ಪತಾಕೆ ಹಾರಿಸಲು ಮಹತ್ವದ ಸಭೆ ನಡೆಸಿದೆ. ಸೋಲು ಹಾಗಂದ್ರೇನು ಅಂತಾ ಕೇಳುತ್ತಿದ್ದ ಕೇಸರಿ ಕಲಿಗಳಿಗೆ ಕರುನಾಡು ಕೊಟ್ಟ ಪೆಟ್ಟಿನ ಗಾಯ ಇನ್ನೂ ಹಸಿ ಹಸಿಯಾಗೇ ಉಳಿದಿದೆ. ದೇಶವನ್ನೇ ಕಬ್ಜ ಮಾಡಲು ಸಜ್ಜಾಗಿದ್ದ ಕಮಲ ಪಾಳಯಕ್ಕೆ ಕರುನಾಡ ಸೋಲು ಎಚ್ಚರಿಕೆಯ ಸಂದೇಶ ರವಾನಿಸಿದೆ. ಹೀಗಾಗಿ ಮುಂಬರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನ ಗೆಲ್ಲಲೇ ಬೇಕು ಅಂತಾ ಬಿಜೆಪಿ ನಾಯಕರು ಭರ್ಜರಿ ಶಸ್ತ್ರಾಭ್ಯಾಸದಲ್ಲಿ ತೊಡಗಿದ್ದಾರೆ.

‘ಪಂಚ’ ರಾಜ್ಯ ಗೆಲ್ಲಲು ಮೋದಿ, ಅಮಿತ್​ ಶಾ ಮಾಸ್ಚರ್‌ ಪ್ಲಾನ್!
5 ಗಂಟೆಗಳ ಕಾಲ ‘ಕೇಸರಿ’ ನಾಯಕರ ಮಿಡ್‌ನೈಟ್ ಮೀಟಿಂಗ್

ಭಾರತದಲ್ಲಿ ಕಟ್ಟಿದ್ದ ಗೆಲುವಿನ ಭದ್ರಕೋಟೆಯನ್ನ ಕಾಪಾಡಿಕೊಳ್ಳಲು ಕೇಸರಿ ಸೇನೆ ಮಿಡ್‌ನೈಟ್ ಸಭೆ ನಡೆಸಿದೆ. ಕರುನಾಡು ಕೈ ತಪ್ಪಿದ ಬಳಿಕ ಪಂಚ ರಾಜ್ಯಗಳಲ್ಲಿ ಅಧಿಪತ್ಯ ಸ್ಥಾಪಿಸಲು ಮಾಸ್ಟರ್ ಪ್ಲಾನ್ ಮಾಡಿದೆ.. ಹೀಗಾಗಿ ಜೂನ್​ 28ನೇ ತಾರೀಖಿನ ಗುರುವಾರದ ರಾತ್ರಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ಹೈಕಮಾಂಡ್​ ನಾಯಕರು ದೆಹಲಿಯಲ್ಲಿ ದಿಢೀರ್ ಅಂತಾ ಸಭೆ ನಡೆಸಿದ್ರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್ ಸೇರಿ ಘಟಾನುಘಟಿ ಲೀಡರ್ಸ್​ ರಾತ್ರೋ ರಾತ್ರಿ ಸಭೆಗೆ ಕೂತಿದ್ರು. ಮಧ್ಯರಾತ್ರಿ ಬರೋಬ್ಬರಿ 5 ಗಂಟೆಗಳಿಗೂ ಹೆಚ್ಚು ಕಾಲ ಪಂಚ ರಾಜ್ಯ ಚುನಾವಣಾ ಫೈಟ್‌ ಬಗ್ಗೆ ಮಹತ್ವದ ಚರ್ಚೆ ಮಾಡಿದ್ದಾರೆಂದು ತಿಳಿದುಬಂದಿದೆ. ಈ ವರ್ಷಾಂತ್ಯದಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಎಲೆಕ್ಷನ್​ ನಡೆಯಲಿರೋ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನ, ಮಿಜೋರಾಂ ರಾಜ್ಯಗಳಿಗೆ ವಿಸ್ತಾರಕರನ್ನ ಕಳುಹಿಸಿ ವರದ ಪಡೆಯಲು ಬಿಜೆಪಿ ಹೈಕಮಾಂಡ್​ ತೀರ್ಮಾನಿಸಿದೆ.

ಅಷ್ಟೇ ಅಲ್ಲ, ಪಂಚ ರಾಜ್ಯದ 2600 ಮಂಡಲಗಳಿಗೆ, 2600 ವಿಸ್ತಾರಕರನ್ನ ರವಾನೆ ಮಾಡಲಾಗುತ್ತೆ. 1 ವಾರಕಾಲ ಅವ್ರು ಮಂಡಲಗಳಲ್ಲೇ ಇರಲಿದ್ದು, ತಳಮಟ್ಟದ ಸ್ಥಿತಿ ಬಗ್ಗೆ ವರದಿ ತಯಾರಿಸಲಿದ್ದಾರೆ. ಬಳಿಕ ಚುನಾವಣಾ ಕಾರ್ಯತಂತ್ರ ಹೇಗಿರಬೇಕು ಎಂಬುದರ ಬಗ್ಗೆ ವಿಸ್ತಾರಕರು ವರದಿ ನೀಡಲಿದ್ದಾರೆ. ಕರ್ನಾಟಕವನ್ನ ಗೆದ್ದ ಬಳಿಕ ಕಾಂಗ್ರೆಸ್ ಗ್ಯಾರಂಟಿ ಬಿಜೆಪಿಯನ್ನ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಸಿದೆ. ಬರೀ ಗ್ಯಾರಂಟಿಗಳನ್ನೇ ಇಟ್ಕೊಂಡು ಪ್ರಚಾರ ಮಾಡಿ ಕಾಂಗ್ರೆಸ್​ ಭರ್ಜರಿ ಬಹುಮತದ ಜೊತೆಗೆ ಇವತ್ತು ದಕ್ಷಿಣದ ಹೆಬ್ಬಾಗಿಲಿನಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಣಾಳಿಕೆಯಾಗ್ಲಿ, ಹಾಗೂ ಪ್ರಚಾರದ ರೀತಿ, ನೀತಿಗಳಾಗಲಿ ಯಾವುದೂ ವರ್ಕೌಟ್ ಆಗಿಲ್ಲ. ಹೀಗಾಗಿ ಇದಕ್ಕೂ ಟಕ್ಕರ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಮುಂದೆ ಚುನಾವಣೆಗಳಲ್ಲಿ ಪ್ರಚಾರದ ವೈಖರಿ ಹೇಗಿರಬೇಕು ಅನ್ನೋದರ ಬಗ್ಗೆಯೂ ಮೋದಿ- ಅಮಿತ್‌ ಶಾ ರಣತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಚುನಾವಣಾ ಪ್ರಚಾರಗಳ ಸ್ಟೈಲ್​ ಕೂಡ ಬದಲಾಗಲಿದೆಯಂತೆ. ಕರ್ನಾಟಕ ಸೋಲಿನಿಂದ ಪಾಠ ಕಲಿತ ಹೈಕಮಾಂಡ್​, ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಪ್ರಚಾರದ ಪ್ಲಾನ್ ಮಾಡಲಿದೆಯಂತೆ. ಅದ್ರಲ್ಲಿ ಮುಖ್ಯವಾಗಿ ಪ್ರಬಲ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡುವುದು ಮುಖ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣೆಗಳಲ್ಲಿ ಸ್ಥಳೀಯ ನಾಯಕತ್ವ ಪ್ರಬಲವಾಗಿರದೇ ಇದ್ದರೆ, ಸೋಲು ಕಟ್ಟಿಟ್ಟಬುತ್ತಿ ಎಂಬುದನ್ನೂ ಮನಗಂಡಿದ್ದಾರೆ. ಇದೇ ಕಾರಣಕ್ಕೆ ಇನ್ಮುಂದೆ ಪ್ರಬಲ ಸ್ಥಳೀಐ ನಾಯಕತ್ವಕ್ಕೆ ಆದ್ಯತೆ ನೀಡ್ಬೇಕು ಅನ್ನೋದನ್ನ ಅರಿತಿರುವ ಹೈಕಮಾಂಡ್​, ಕರ್ನಾಟಕ, ಹಿಮಾಚಲ ಸೋಲಿನಿಂದ ಧೃತಿಗೆಡಬಾರದು ಎಂಬ ಸಂದೇಶವನ್ನೂ ರವಾನಿಸಿದೆ. ಒಟ್ಟಾರೆ, ಅಪರೂಪಕ್ಕೆ ನಡೆಯೋ ಮಿಡ್‌ನೈಟ್‌ ಮೀಟಿಂಗ್‌ ಇದೀಗ ಪಂಚ ರಾಜ್ಯಗಳ ಚುನಾವಣೆಗಾಗಿ ನಡೆದಿದೆ.. ಇದ್ನೆಲ್ಲಾ ನೋಡ್ತಿದ್ರೆ, ಸೋಲನ್ನೇ ಬಿಜೆಪಿ ನಾಯಕರು ಸವಾಲಾಗಿ ಸ್ವೀಕರಿಸಿದಂತೆ ಕಾಣ್ತಿದೆ.. ಆದ್ರೆ, ಬಿಜೆಪಿ ನಾಯಕರ ಈ ಮಾಸ್ಟರ್ ಪ್ಲಾನ್‌ ಪಂಚ ರಾಜ್ಯಗಳಲ್ಲಿ ವರ್ಕೌಟ್ ಆಗುತ್ತಾ? ಇಲ್ವಾ? ಅನ್ನೋದೆ ಮುಂದಿರೋ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪಂಚ’ ರಾಜ್ಯ ಗೆಲ್ಲಲು ಮೋದಿ, ಅಮಿತ್​ ಶಾ ಮಾಸ್ಟರ್‌ ಪ್ಲಾನ್; ‘ಕೇಸರಿ’ ನಾಯಕರ ಮಿಡ್‌ನೈಟ್ ಮೀಟಿಂಗ್ ಆಗಿದ್ದೇನು?

https://newsfirstlive.com/wp-content/uploads/2023/07/bjp-2023-2.jpg

Load More