newsfirstkannada.com

ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಗ್ರ್ಯಾಂಡ್ ವೆಲ್​​​ಕಮ್ -USನಲ್ಲಿ ಇವತ್ತು ಏನೆಲ್ಲ ಮಾಡ್ತಾರೆ..?

Share :

21-06-2023

  ಪ್ರಧಾನಿ ಮೋದಿಯವರನ್ನು ಭೇಟಿಯಾದ ವಿಶ್ವದ ನಂ.1 ಶ್ರೀಮಂತ

  ನ್ಯೂಯಾರ್ಕ್​ಗೆ ಬಂದಿಳಿಯುತ್ತಿದ್ದಂತೆ ಪ್ರಧಾನಿಗೆ ಅದ್ಧೂರಿ ಸ್ವಾಗತ

  3 ದಿನದ ಅಮೆರಿಕ ಪ್ರವಾಸದ ಬಳಿಕ ಅಲ್ಲಿಂದ 2 ದಿನ ಈಜಿಪ್ಟ್​ ಪ್ರವಾಸ

ಪ್ರಧಾನಿಯಾಗಿ ಗದ್ದುಗೆ ಏರಿದ ಬಳಿಕ ದೇಶದ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಛಾಪು ಮೂಡಿಸಿರೋ ಮೋದಿ ಈಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಅಣಿಯಾಗಿದ್ದಾರೆ. ಇಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನ ಮೋದಿ ಮುನ್ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 3 ದಿನ ಅಮೆರಿಕ ಮತ್ತು 2 ದಿನ ಈಜಿಪ್ಟ್‌ ಪ್ರವಾಸ ಕೈಗೊಂಡಿದ್ದಾರೆ. ಇದು ಐತಿಹಾಸಿಕ ಪ್ರವಾಸವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಅಮೆರಿಕ ಸರ್ಕಾರವೇ ಈ ಸಲ ಮೋದಿಗೆ ಆಹ್ವಾನ ನೀಡಿದ್ದು, ಅಮೆರಿಕದ ಆಹ್ವಾನಿತರಾಗಿ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಿಂದ ಆಹ್ವಾನ ಪಡೆದು ಅಮೆರಿಕಕ್ಕೆ ಭೇಟಿ ನೀಡುತ್ತಿರುವ 3ನೇ ವಿಶ್ವ ನಾಯಕ ಎನ್ನಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ಅಮೆರಿಕ ಸಂಸತ್ತನ್ನು ಉದ್ದೇಶಿಸಿ 2ನೇ ಸಲ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಲಿದ್ದಾರೆ.

ದೆಹಲಿಯಿಂದ 14 ಗಂಟೆ 37 ನಿಮಿಷದ ಪ್ರಯಾಣ 

ಪ್ರಧಾನಿ ಮೋದಿ 3 ದಿನಗಳ ಅಮೆರಿಕ ಪ್ರವಾಸ ಆರಂಭಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಹ್ವಾನದ ಮೇರೆ ಅಮೆರಿಕ ಪ್ರವಾಸ ಕೈಗೊಂಡಿರುವ ಮೋದಿ ನ್ಯೂಯಾರ್ಕ್‌ನ ಜಾನ್ ಆಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದಾರೆ. ಮೋದಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯ್ತು.

ದೆಹಲಿಯಿಂದ ಸತತ 14 ಗಂಟೆ 37 ನಿಮಿಷದ ಪ್ರಯಾಣ ಮಾಡಿದ ಮೋದಿ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಅನಿವಾಸಿ ಭಾರತೀಯರಿಂದ ಗ್ರಾಂಡ್ ವೆಲ್​ಕಮ್ ಸಿಕ್ಕಿದೆ. ಇಂದು ವಿಶ್ವಸಂಸ್ಥೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿಗೆ 180 ದೇಶಗಳ ಪ್ರಮುಖರು ಸಾಥ್‌ ನೀಡಲಿದ್ದಾರೆ.

ಅಮೆರಿಕದಲ್ಲಿ ಮೋದಿ ‘ಯೋಗ’!

 • ಇವತ್ತು ನೋಬೆಲ್ ವಿಜೇತರ ಕಾರ್ಯಕ್ರಮದಲ್ಲಿ ಮೋದಿ ಭಾಗಿ
 • ವಸುದೈವ ಕುಟುಂಬಕಮ್ ಘೋಷಾವಾಕ್ಯದೊಂದಿಗೆ ಯೋಗದಿನ
 • ಅಮೆರಿಕ ಕಾಲಮಾನ ಬೆಳಗ್ಗೆ 8 ಗಂಟೆಯಿಂದ 9 ಗಂಟೆವೆರೆಗೆ ಯೋಗ
 • ಐತಿಹಾಸಿಕ ಯೋಗ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿ
 • ರಾತ್ರಿ ವಾಷಿಂಗ್ಟನ್‌ನಲ್ಲಿ ಮೋದಿಗೆ ಬೈಡೆನ್‌ ದಂಪತಿಯ ಔತಣ
 • ಜೂ.22ರಂದು ಅಮೆರಿಕದ ಜಂಟಿ ಸಂಸತ್ತನ್ನು ಉದ್ದೇಶಿಸಿ ಭಾಷಣ
 • ಜೂ.23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಔತಣ
 • ವಿವಿಧ ಕಂಪನಿಗಳ ಸಿಇಒ, ಉದ್ಯಮಿಗಳ ಜತೆ ಮೋದಿ ಭೇಟಿ
 • ಅದೇ ದಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮೋದಿ ಭಾಷಣ

ಪ್ರಧಾನಿ ನರೆಂದ್ರ ಮೋದಿಯನ್ನ ನ್ಯೂಯಾರ್ಕ್​ನಲ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ. ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಭೇಟಿಯಾಗಿದ್ದಾರೆ. ಇನ್ನು ಪ್ರಧಾನಿ ಮೋದಿಯೊಂದಿಗೆ ಭೇಟಿ ಬಳಿಕ ಮಾತನಾಡಿದ ಮಸ್ಕ್, ಐ ಆಮ್ ಫ್ಯಾನ್ ಆಫ್ ಮೋದಿ ಎಂದಿದ್ದಾರೆ. ಯೋಗ ದಿನದ ಮೂಲಕ ಹೊಸ ಮೈಲಿಗಲ್ಲನ್ನ ಸೃಷ್ಟಿಸಲು ಸಜ್ಜಾಗಿರೋ ನಮೋ ವಸುದೈವ ಕುಟುಂಬಕಮ್‌ ಘೋಷವಾಕ್ಯವನ್ನ ವಿಶ್ವಕ್ಕೆ ಸಾರಲು ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಗ್ರ್ಯಾಂಡ್ ವೆಲ್​​​ಕಮ್ -USನಲ್ಲಿ ಇವತ್ತು ಏನೆಲ್ಲ ಮಾಡ್ತಾರೆ..?

https://newsfirstlive.com/wp-content/uploads/2023/06/PM_MODI_US3.jpg

Load More