ಇದು ಬಾಹ್ಯಾಕಾಶ ಕ್ಷೇತ್ರದಲ್ಲೇ ಮಹತ್ತರ ಸಾಧನೆ
ಜಗತ್ತಿನಲ್ಲಿ ಭಾರತದ ಹೆಸರು ಮತ್ತಷ್ಟು ಪ್ರಜ್ವಲಿಸಲಿದೆ
ಚಂದ್ರಯಾನ-3 ಸೇಫ್ ಲ್ಯಾಂಡಿಂಗ್ ಬಗ್ಗೆ ಮೋದಿ ಮಾತು
ಬೆಂಗಳೂರು: ಕೊನೆಗೂ ಎಲ್ಲವೂ ಅಂದುಕೊಂಡಂತೆ ಆಗಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲೇ ಮಾಡಿದ ಗಮನಾರ್ಹ ಸಾಧನೆಯಷ್ಟೇ ಅಲ್ಲ, ಬದಲಿಗೆ ಜಗತ್ತಿನಲ್ಲೆಡೆ ಭಾರತದ ಹೆಸರನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚಂದ್ರಯಾನ 3 ಯಶಸ್ವಿಗಾಗಿ ಇಡೀ ದೇಶವೇ ಎದುರು ನೋಡುತ್ತಿತ್ತು. ಈಗ ಯಾವುದೇ ಅಡೆತಡೆಗಳು ಬಾರದಂತೆ ನಿರ್ವಿಘ್ನವಾಗಿ ಚಂದ್ರಯಾನಕ್ಕೆ ಯಶಸ್ಸು ಸಿಕ್ಕಿದೆ. ಇಂದು 140 ಕೋಟಿ ಭಾರತೀಯರ ಕನಸು ನನಸಾದ ಕ್ಷಣ. ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿ ಆಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ಜಗತ್ತಿನ ಮೊದಲ ದೇಶ ಭಾರತ ಆಗಿದ್ದು, ಇದಕ್ಕೆ ಕಾರಣರಾದ ವಿಜ್ಞಾನಿಗಳಿಗೆ ಮತ್ತು ಇಸ್ರೋಗೆ ಅಭಿನಂದನೆಗಳು ಎಂದರು.
ಇನ್ನು, ವಿದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಲ್ಲದೇ ಒಂದು ಕ್ಷಣ ಭಾವುಕರಾದರು. ಬೆಂಗಳೂರಿನಲ್ಲಿರೋ ಇಸ್ರೋ ಕೇಂದ್ರಕ್ಕೂ ಹಲವು ಗಣ್ಯರು ಆಗಮಿಸಿ ವೀಕ್ಷಣೆ ಮಾಡುತ್ತಿದ್ದಾರೆ. ಇಸ್ರೋ ಸಂಸ್ಥೆಯ ಕಾರ್ಯಕ್ಕೆ ಇಡೀ ದೇಶವೇ ಹೆಮ್ಮೆಪಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ