newsfirstkannada.com

ಏಲಿಯನ್​ಗಳ ಕುರಿತು ಬೆಚ್ಚಿಬೀಳಿಸುವ ಸಂಗತಿ ರಿವೀಲ್ ಮಾಡಿದ NASA.. ಹಾರುವ ತಟ್ಟೆಗಳ ಬಗ್ಗೆ ಏನು ಹೇಳುತ್ತೆ?

Share :

15-09-2023

    ಅನ್ಯಗ್ರಹ ಜೀವಿಯ ಅಸ್ತಿತ್ವದ ಬಗ್ಗೆ ಚರ್ಚೆ, ಸಂಶೋಧನೆಗಳು

    ಅಮೆರಿಕದ ನಾಸಾದ ಆ 33 ಪುಟಗಳಲ್ಲಿ ಇರುವುದಾದರೇನು?

    ಭೂಮಿ ಹೊರತುಪಡಿಸಿ ಬೇರೆಡೆ ಏಲಿಯನ್​ಗಳಿವೆ- ನಾಸಾ

ಅನ್ಯಗ್ರಹ ಜೀವಿಯ ಅಸ್ತಿತ್ವದ ಕುರಿತು ಇನ್ನೂ ಸಾಕಷ್ಟು ಚರ್ಚೆ, ಸಂಶೋಧನೆಗಳು ನಡೆಯುತ್ತಲಿವೆ. ಈ ಹಿಂದೆ, ಎಷ್ಟೋ ಜನರಿಗೆ ಏಲಿಯನ್​ನಂತ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡಿದ್ದು ಭೂಮಿಗೆ ಬಂದು ಹೋಗಿದ್ದಾವೆ. ಅದರ ಗುರುತುಗಳು ಸಿಕ್ಕಿವೆ ಅಂತ ಹಲವರು ಹೇಳಿದ್ದರು. ಇದರ ಕುರಿತಾದ ಸುದೀರ್ಘ ಸಂಶೋಧನೆ ಮಾಡಿರುವ ನಾನಾ ಸಂಸ್ಥೆ ಈದೀಗ 33 ಪುಟಗಳ ವರದಿ ಒಂದನ್ನ ಬಿಡುಗಡೆ ಮಾಡಿದೆ.

ಏಲಿಯನ್​ ಅನ್ಯಗ್ರಹ ಜೀವಿಗಳು ನಿಜಕ್ಕೂ ಇವೆಯ ಅಥವಾ ಇಲ್ಲವ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿ ಉಳಿದಿದೆ. ಹಲವು ವಿಜ್ಞಾನಿಗಳು ಸೇರಿದಂತೆ ಅನೇಕರು ಏಲಿಯನ್​ಗಳು ಇವೆ.. ಅದು ಫ್ಲೈಯಿಂಗ್ ಸೌಸರ್ ಅಂದ್ರೆ ಹಾರುವ ತಟ್ಟೆ ಯಂತ್ರದ ಮೂಲಕ ಭೂಮಿಗೆ ಬಂದ್ಹೋಗಿದೆ ಅಂತ ವಾದಿಸುತ್ತಾರೆ. ಆದ್ರೆ ಇನ್ನೂ ಕೆಲವರು ಹಾಗೆಲ್ಲ ಎನು ಇಲ್ಲ ಏಲಿಯನ್​ ಅನ್ನೋದು ಒಂದು ಇಮ್ಯಾಜಿನೇಷನ್​ ಅಷ್ಟೆ ಅಂತಾ ವಾದಿಸುತ್ತಾರೆ.. ಅನ್ಯಗ್ರಹ ಜೀವಿಯ ಅಸ್ತಿತ್ವದ ಕುರಿತು ಇನ್ನೂ ಸಾಕಷ್ಟು ಚರ್ಚೆ, ಸಂಶೋಧನೆಗಳು ನಡೆಯುತ್ತಲಿವೆ.

ಬೇರೆ ಗ್ರಹದ ಚಿತ್ರ

ಮೆಕ್ಸಿಕೋ ಸಂಸತ್ತಿನಲ್ಲಿ ಏಲಿಯನ್‌ ಶವಗಳ ಪ್ರದರ್ಶನ

ಏಲಿಯನ್​ಗಳ ಅಸ್ತಿತ್ವದ ಕುರಿತು ಇನ್ನೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇದೆ. ಆದರೆ ಈ ಕುರಿತು ಇಲ್ಲಿಯವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಮೆಕ್ಸಿಕೋದಲ್ಲಿ ಸಾವಿರಕ್ಕೂ ಹಳೆಯದಾದ ಎರಡು ಏಲಿಯನ್ ಕಳೇಬರಗಳನ್ನು ಅನಾವರಣಗೊಳಿಸಿತ್ತು. ಇದರ ಬೆನ್ನಲ್ಲೇ ನಾಸಾ ಹಾರುವ ತಟ್ಟೆಗಳ ಬಗ್ಗೆ ಅಚ್ಚರಿಯ ಸಂಗತಿಯೊಂದನ್ನ ರಿವೀಲ್ ಮಾಡಿದೆ.

ಏಲಿಯನ್​ ಕುರಿತಾದ ವರದಿಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ UFO ಅಂದ್ರೆ ಹಾರುವ ತಟ್ಟೆಗಳನ್ನ ಆಧರಿಸಿ ಕಳೆದ 1 ವರ್ಷದಿಂದ ನಾಸಾ ಅಧ್ಯಯನ ನಡೆಸ್ತಿತ್ತು. ಇದೀಗ ಅನ್​ ಐಡೆಂಟಿಫೈಡ್​ ಫ್ಲೈಯಿಂಗ್ ಆಬ್ಜೆಕ್ಟ್ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ನಂತರ NASA ಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡಿದೆ. ನಾಸಾದ ಈ 33 ಪುಟಗಳ ವರದಿಯಲ್ಲಿ, ಅನ್​ ಐಡೆಂಟಿಫೈಡ್​ ಫ್ಲೈಯಿಂಗ್ ಆಬ್ಜೆಕ್ಟ್​ಗಳನ್ನು, ನಮ್ಮ ಗ್ರಹದ ಅತಿದೊಡ್ಡ ರಹಸ್ಯಗಳಲ್ಲಿ ಒಂದು ಎಂದು ಹೇಳಲಾಗಿದೆ. ಈ ವರದಿಯನ್ನು ಬಿಡುಗಡೆ ಮಾಡಿದ ಅಮೆರಿಕನ್ ಸ್ಪೇಸ್ ಏಜೆನ್ಸಿಯ ವ್ಯವಸ್ಥಾಪಕ ಬಿಲ್ ನೆಲ್ಸನ್, ಭೂಮಿಯನ್ನು ಹೊರತುಪಡಿಸಿ ಕೂಡ ಜೀವನ ಇದೆ ಎಂಬುದನ್ನು ತಾವು ನಂಬುವುದಾಗಿ ಹೇಳಿದ್ದಾರೆ.

ಭೂಮಿ ಹೊರತುಪಡಿಸಿ ಬೇರೆಡೆ ಏಲಿಯನ್​ಗಳಿವೆ ಎಂದ ನಾಸಾ

ವರ್ಷಗಟ್ಟಲೇ ನಡೆದ ಅಧ್ಯಯನಕ್ಕಾಗಿ ನಾಸಾ ಸಂಸ್ಥೆ ಸುಮಾರು 16 ಮಂದಿ ಸದಸ್ಯರನ್ನೊಳಗೊಂಡ ಸ್ವತಂತ್ರ ತಂಡವೊಂದನ್ನ ರಚಿಸಿತ್ತು. ಹಾರುವ ತಟ್ಟೆಗಳ ಕುರಿತು ಗ್ರಹಿಕೆಯನ್ನು ಬದಲಿಸುವ ಅಗತ್ಯವೂ ಇದೆ. ಇವುಗಳ ಕುರಿತಂತೆ ಇರುವ ನಕಾರಾತ್ಮಕ ಗ್ರಹಿಕೆಯು ದತ್ತಾಂಶ ಸಂಗ್ರಹಕ್ಕೆ ದೊಡ್ಡ ಅಡ್ಡಿಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ನಾಸಾ ಅಧ್ಯಯನದ ಪ್ರಕಾರ ಅನ್​ ಐಡೆಂಟಿಫೈಡ್​ ಫ್ಲೈಯಿಂಗ್ ಆಬ್ಜೆಕ್ಟ್​ಗಳು ಅಥವಾ ಹಾರುವ ತಟ್ಟೆಗಳ ಅಧ್ಯಯನಕ್ಕೆ ಹೊಸ ವೈಜ್ಞಾನಿಕ ತಂತ್ರಗಳು ಬೇಕಾಗುತ್ತವೆ. ಅನ್​ ಐಡೆಂಟಿಫೈಡ್​ ಫ್ಲೈಯಿಂಗ್ ಆಬ್ಜೆಕ್ಟ್​ಗಳನ್ನು ಗುರುತಿಸುವಿದಕ್ಕೆ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್​ ನೆರವು ಅವಶ್ಯವಾಗಿದ್ದು, ಈ ವಿಚಾರದಲ್ಲಿ ನಾಸಾ ಸಂಸ್ಥೆ ಮಹತ್ವದ ಪಾತ್ರ ವಹಿಸಬಲ್ಲದು ಎಂದೂ ತಂಡವು ಹೇಳಿದೆ.

ಹಾರುವ ತಟ್ಟೆ

ಹಾರುವ ತಟ್ಟೆಗಳ ವಿಚಾರವಾಗಿ ಅನೇಕ ಅಭಿಪ್ರಾಯಗಳಿದ್ದು, ಯಾವುದೇ ವೈಜ್ಞಾನಿಕ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ ಎಂದು ನಾಸಾ ತಿಳಿಸಿದೆ. ಗ್ರಹಗಳ ಮೇಲ್ಮೈಗಳಲ್ಲಿ ಅಥವಾ ಭೂಮಿಯ ಸಮೀಪದ ಬಾಹ್ಯಾಕಾಶದಲ್ಲಿ ಅನ್ಯಲೋಕದ ಜೀವಿಗಳು ಮತ್ತು ತಂತ್ರಜ್ಞಾನ ಪತ್ತೆಹಚ್ಚಲು ಪ್ರಯತ್ನಿಸುತ್ತವೆ ಎಂದು ದೃಢೀಕರಿಸಿದೆ. ಭೂಮಿಯನ್ನು ಹೊರತುಪಡಿಸಿ ಬೇರೆ ಕಡೆಯೂ ಅನ್ಯಲೋಕದ ಜೀವಿಗಳಿವೆ ಬದುಕುತ್ತಿವೆ ಎಂದ ನಾಸಾ ಹೇಳಿದ್ದು, ಆದ್ರೆ.. ಈಗ ಅದು ಧೃಡಪಟ್ಟಿಲ್ಲ ಎಂದು ಹೇಳಿ ಹಲವರನ್ನ ಆಲೋಚನೆಗೆ ತಳ್ಳಿದೆ.

ಅಷ್ಟೇ ಅಲ್ಲದೆ, ಇದೆಲ್ಲ ಸುಳ್ಳು ಎಂದ ತಜ್ಞರು ಮೆಕ್ಸಿಕೋದಲ್ಲಿ ಪ್ರದರ್ಶನ ಮಾಡಲಾದ ಏಲಿಯನ್ ಕಳೇಬರ ಪೇಕ್​ ಎಂದು ಕೆಲ ತಜ್ಞರು ವಿಮರ್ಶೆ ಮಾಡಿದ್ದಾರೆ. ರಕ್ಷಿತ ಕಳೇಬರ ಮಗುವಿನದ್ದು, ಉದ್ದನೆಯ ತಲೆಬುರುಡೆಗಳು ಕೃತಕ ಕಪಾಲದ ವಿರೂಪತೆಯ ಪುರಾತನ ಅಭ್ಯಾಸದ ಪರಿಣಾಮವಾಗಿದೆ ಎಂದು ಮಾನವಶಾಸ್ತ್ರಜ್ಞರು ವ್ಯಕ್ತಪಡಿಸಿದ್ದಾರೆ. ಏಲಿಯನ್‌ಗಳು ಇವೆಯಾ.. ಇಲ್ಲವಾ.. ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಯಾವಾಗ ಸಿಗುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಲಿಯನ್​ಗಳ ಕುರಿತು ಬೆಚ್ಚಿಬೀಳಿಸುವ ಸಂಗತಿ ರಿವೀಲ್ ಮಾಡಿದ NASA.. ಹಾರುವ ತಟ್ಟೆಗಳ ಬಗ್ಗೆ ಏನು ಹೇಳುತ್ತೆ?

https://newsfirstlive.com/wp-content/uploads/2023/09/NASA_Alien.jpg

Load More