ನಥಾನ್ ಲಿಯಾನ್ ಕಾಲಲ್ಲಿ ರಕ್ತ ಹರಿಯುತ್ತಿದ್ದರು ಬ್ಯಾಟಿಂಗ್
ಅನಿಲ್ ಕುಂಬ್ಳೆ ದವಡೆಗೆ ಗಾಯವಾದ್ರೂ ಬಿಡಲಿಲ್ಲ ಪಂದ್ಯ
ಆಸ್ಟ್ರೇಲಿಯಾ ಆಟಗಾರನಿಗೆ ಕೈ ಮುರಿದ್ರೂ ಬ್ಯಾಟಿಂಗ್..!
ಒಂದು ಸಣ್ಣ ಇಂಜುರಿ ಆದ್ರೂ ಸಾಕು ಡಕೌಟ್ನಲ್ಲಿ ಹೋಗಿ ಕೂರುವವರಿದ್ದಾರೆ. ಆದರೆ ಆಡಲಾಗದಂತಹ ಸ್ಥಿತಿ ಇದ್ರೂ ನೋವನ್ನ ನುಂಗಿ ಫ್ಯಾನ್ಸ್ಗೆ ಮನರಂಜನೆ ಉಣಬಿಡಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇವರೆಲ್ಲ ನಿಜಕ್ಕೂ ಅಲ್ಟಿಮೇಟ್ ಕರೇಜ್ ಪ್ಲೇಯರ್ಸ್. ಇಂಜುರಿ ನೆಕ್ಸ್ಟ್, ಟೀಮ್ ಫಸ್ಟ್ ಅನ್ನೋ ಆಟಗಾರರ ಕಹಾನಿ ಇಲ್ಲಿದೆ ನೋಡಿ.
ಜಂಟಲ್ಮ್ಯಾನ್ ಗೇಮ್ ಅಂತ ಕರೆಸಿಕೊಳ್ಳುವ ಕ್ರಿಕೆಟ್ ಪ್ರೇಕ್ಷಕರನ್ನ ವಿಸ್ಮಯಗೊಳಿಸುವುದನ್ನ ಎಂದು ನಿಲ್ಲಿಸುವುದಿಲ್ಲ. ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಒಂದು ಘಟನೆ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ನಥಾನ್ ಲಿಯಾನ್ ಅಂತಹದೊಂದು ಅಲ್ಟಿಮೇಟ್ ಕರೇಜ್ ತೋರಿಸಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಕುಂಟುತ್ತಾ ಬ್ಯಾಟಿಂಗ್ಗೆ ಬಂದ ಧೈರ್ಯಶಾಲಿ ಲಿಯಾನ್
ಇಂಗ್ಲೆಂಡ್ ಎದುರಿನ 2ನೇ ಆ್ಯಷಸ್ ಟೆಸ್ಟ್ನಲ್ಲಿ ಲಿಯಾನ್ಗೆ ಕಾಫ್ ಇಂಜುರಿಯಾಗಿತ್ತು. ಗಂಭೀರ ಗಾಯ ಆಗಿದ್ದರಿಂದ ಲಿಯಾನ್ ಉಳಿದ ಪಂದ್ಯಗಳಿಗೆ ಅಲಭ್ಯ ಅನ್ನೋ ಸುದ್ದಿಯು ಕೇಳಿ ಬಂದಿತ್ತು. ಆದರೆ ಆಸಿಸ್ ಸ್ಪಿನ್ನರ್ ಮಿರಾಕಲ್ ರೀತಿಯಲ್ಲಿ ಸುಳ್ಳಾಗಿಸಿದ್ರು.
11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿಯಾನ್ ಇಂಜುರಿಯನ್ನೇ ಲೆಕ್ಕಸದೇ ಅಲ್ಟಿಮೇಟ್ ಧೈರ್ಯ ತೋರಿಸಿದ್ರು. ನೋವಿನಲ್ಲೂ ತಂಡಕ್ಕಾಗಿ ಆಡುವ ಮನಸ್ಸು ಮಾಡಿದ ಲಿಯಾನ್ರ ಕೆಚ್ಚದೆಯ ಹೋರಾಟಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನಥಾನ್ ಲಿಯಾನ್ರಂತೆ ಗಾಯದಿಂದ ರಕ್ತ ಹರಿಯುತ್ತಿದ್ರೂ ತಂಡದ ಗೆಲುವಿಗಾಗಿ ಹೋರಾಡಿದ ಅನೇಕ ಧೈರ್ಯಶಾಲಿ ಆಟಗಾರರಿದ್ದಾರೆ. ಇವರ ಡೆಡಿಕೇಶನ್ ಬಗ್ಗೆ ಎಷ್ಟು ಹೊಗಳಿದ್ರೂ ಕಮ್ಮಿನೇ.
ದವಡೆಗೆ ಬ್ಯಾಂಡೇಜ್ ಕಟ್ಟಿಕೊಂಡು ಆಡಿದ್ದ ಛಲವಾದಿ ಕುಂಬ್ಳೆ..!
ವೆಸ್ಟ್ಇಂಡೀಸ್ ಎದುರಿನ ಟೆಸ್ಟ್ ಪಂದ್ಯದಲ್ಲಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ, ಮೆರ್ವ್ ದಿಲ್ಲಾನ್ ಬೌಲಿಂಗ್ನಲ್ಲಿ ದವಡೆಗೆ ಗಾಯ ಮಾಡಿಕೊಂಡಿದ್ರು. ಯಾರೊಬ್ಬರು ಕುಂಬ್ಳೆ ಮತ್ತೆ ಮೈದಾನಕ್ಕಿಳಿಯಲ್ಲ ಎಂದು ಭಾವಿಸಿದ್ರು. ಆದರೆ ಛಲವಾದಿ ಕನ್ನಡಿಗ ದವಡೆಯಿಂದ ರಕ್ತ ಹರಿಯುತ್ತಿದ್ರು 20 ನಿಮಿಷ ಬ್ಯಾಟಿಂಗ್ ಮಾಡಿ ಅಪ್ಪಟ ದೇಶಪ್ರೇಮ ಮೆರೆದಿದ್ರು.
ಕೈ ಮುರಿದ್ರೂ ಸೋಲಿನಿಂದ ಕಾಪಾಡಿದ ಗ್ರೇಮ್ ಸ್ಮಿತ್
2009 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸಿಡ್ನಿ ಟೆಸ್ಟ್ನಲ್ಲಿ ಕೈ ಮುರಿದುಕೊಂಡ ಗ್ರೇಮ್ ಸ್ಮಿತ್ ಅಂಗಳ ತೊರೆದಿದ್ರು. ಇದಕ್ಕೆ ಹೆದರದ ಸ್ಮಿತ್ ಪೇನ್ ಕಿಲ್ಲರ್ ಮತ್ತು ಇಂಜೆಕ್ಷನ್ ತೆಗೆದುಕೊಂಡು ಮತ್ತೆ ಬಂದು ಪಂದ್ಯವನ್ನ ಡ್ರಾ ಮಾಡಿದ್ರು.
ಒಂದೇ ಕೈಯಲ್ಲಿ ಬ್ಯಾಟಿಂಗ್.. ವಿಹಾರಿ ಕೆಚ್ಚದೆಯ ಹೋರಾಟ..
ಕಳೆದ ರಣಜಿ ಟ್ರೋಫಿ ವೇಳೆ ಮುಂಗೈ ಮುರಿದುಕೊಂಡಿದ್ದ ಹನುಮ ವಿಹಾರಿ ಒಂದೇ ಕೈಯಲ್ಲಿ ಬ್ಯಾಟಿಂಗ್ ನಡೆಸಿ ತಮಗೆ ಆಟದ ಮೇಲಿನ ಶ್ರದ್ಧೆ ಎಂತಹದು ಅನ್ನೋದನ್ನ ತೋರಿಸಿದ್ರು.
ನೋವು ನುಂಗಿ, ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ ಇಕ್ಬಾಲ್
2018 ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಎಡಗೈ ಮುಷ್ಠಿಗೆ ಗಾಯ ಮಾಡಿಕೊಂಡಿದ್ರು.ಇದಕ್ಕೆ ಜಗ್ಗದ ಇಕ್ಬಾಲ್ 4 ಬೆರಳಿನಲ್ಲಿ ಬ್ಯಾಟಿಂಗ್ ನಡೆಸಿ ಮಾದರಿಯಾಗಿದ್ರು. ಇದಿಷ್ಟೇ ಅಲ್ಲ, 2019 ರ ಒನ್ಡೇ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿಗೆ ಬೌನ್ಸರ್ ಬಡಿದು ದವಡೆಗೆ ಗಾಯವಾಗಿತ್ತು. ರಕ್ತ ಸುರಿಯುತ್ತಿದ್ರೂ ಬ್ಯಾಂಡೆಜ್ ಕಟ್ಟಿಕೊಂಡೇ ಆಟ ಮುಂದುವರಿಸಿದ್ರು. ಫೈನಲಿ ಸಣ್ಣ ಗಾಯವಾದ್ರು ಅಂಗಳ ತೊರೆಯುವ ಅದೆಷ್ಟೋ ಆಟಗಾರರನ್ನ ನೋಡಿದ್ದೇವೆ.. ಅಂತ್ರದಲ್ಲಿ ಗಂಭೀರ ಗಾಯವನ್ನೂ ಲೆಕ್ಕಿಸದೇ ತಂಡದ ಗೆಲುವಿಗಾಗಿ ಹೋರಾಡಿದ ಈ ಧೈರ್ಯಶಾಲಿ ಆಟಗಾರರು ರಿಯಲಿ ಎಲ್ಲರಿಗೂ ಮಾದರಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Gautam Gambhir was right, Aussie play for their nation, they are not individual obessed team ,Hats off to this guy👏 #Ashes23 #ENGvsAUS #NathanLyon #BenStokes pic.twitter.com/TDgiqS3BYh
— ɢᴀᴜʀᴀᴠ (@Gaurav59147864) July 2, 2023