newsfirstkannada.com

ನಟಿ ಶ್ರೀಲೀಲಾ ಮುಂದೆ ಡಮ್ಮಿ ಆದ್ರಾ ನ್ಯಾಷನಲ್​ ಕ್ರಶ್​​? ರಶ್ಮಿಕಾ ಮಂದಣ್ಣ ಮುಂದಿನ ಕಥೆಯೇನು?

Share :

07-08-2023

  ಬರ್ತಾ ಬರ್ತಾ ಕಡಿಮೆ ಆಗುತ್ತಿದೆ ನ್ಯಾಷನಲ್ ಕ್ರಶ್​​​​​ ಹವಾ?

  ಮತ್ತೊಂದು ದೊಡ್ಡ ಸಿನಿಮಾಗೆ ರಶ್ಮಿಕಾ ಹೀರೋಯಿನ್!

  2018 ನಿರ್ದೇಶಕ ಜುಡಾ ಸ್ಯಾಂಡಿ ಜೊತೆ ರಶ್ಮಿಕಾ ಸಿನಿಮಾ!

ಕಿಸ್​ ಬೆಡಗಿ ಶ್ರೀಲೀಲಾ ಕ್ರೇಜ್​​ ಮುಂದೆ ರಶ್ಮಿಕಾ ಮಂದಣ್ಣ ಹವಾ ಕಮ್ಮಿ ಆಗೋಯ್ತು ಅಂತಿದ್ದಾರೆ. ರಶ್ಮಿಕಾ ಮಾಡಬೇಕಿದ್ದ ಸಿನಿಮಾಗಳು ಶ್ರೀಲೀಲಾ ಪಾಲಾಗುತ್ತಿದೆ ಅಂತಿದ್ದಾರೆ. ರಶ್ಮಿಕಾ ಕ್ರೇಜ್ ಕಮ್ಮಿ ಆಗಿಲ್ಲ. ರಶ್ಮಿಕಾ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ರಶ್ಮಿಕಾ ಮಂದಣ್ಣ ಈಗಲೂ ಬಹುಬೇಡಿಕೆಯ ನಟಿ ಆಗಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್​ ಸಿನಿಮಾಗಳನ್ನ ಮಾಡೋಕೆ ಸ್ಟಾರ್ಟ್ ಆದ್ಮೇಲೆ ಸೌತ್​ನಲ್ಲಿ ಸ್ವಲ್ಪ ಮಂಕು ಆದ್ರು ಅನಿಸುತ್ತಿದೆ. ಅಲ್ಲು ಅರ್ಜುನ್ ಜೊತೆ ಪುಷ್ಪ ಹಾಗೂ ವಿಜಯ್ ಜೊತೆ ಮಾಡಿದ ‘ವಾರಿಸು’ ಚಿತ್ರಗಳೇ ಕೊನೆ. ಇದಾದ ನಂತರ ನಿರೀಕ್ಷೆಯಂತೆ ರಶ್ಮಿಕಾಗೆ ಸೌತ್ ಸಿನಿಮಾಗಳು ಸಿಕ್ಕಿಲ್ಲ ಅನ್ನೋದು ಅಂಕಿ ಅಂಶಗಳು ಹೇಳುತ್ತಿವೆ. ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ಮುಂದುವರಿದಿದ್ದಾರೆ. ಇದನ್ನ ಬಿಟ್ಟರೆ ರಶ್ಮಿಕಾಗೆ ಸೌತ್​ನಲ್ಲಿ ಸಿನಿಮಾ ಇಲ್ಲ. ನಿತಿನ್ ಹಾಗೂ ವೆಂಕಿ ಕುಡುಮುಲ ಜೊತೆ ಒಂದು ಸಿನಿಮಾಗೆ ನಾಯಕಿಯಾಗಿ ಫಿಕ್ಸ್​ ಆಗಿದ್ದರೂ ಕೊನೆ ಕ್ಷಣದಲ್ಲಿ ಈ ಚಿತ್ರದಿಂದ ಹೊರಬಂದರು. ರಶ್ಮಿಕಾ ಬದಲು ಈ ಚಿತ್ರಕ್ಕೀಗ ಶ್ರೀಲೀಲಾ ಕರೆತರುವ ಪ್ಲಾನ್​ನಲ್ಲಿದೆಯಂತೆ ಚಿತ್ರತಂಡ. ಅಲ್ಲಿಗೆ ರಶ್ಮಿಕಾ ಬೇಡಿಕೆ ಕುಸಿದಿದೆ ಅನ್ನೋದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿತ್ತು.

ಸೌತ್​ನಲ್ಲಿ ಮತ್ತೆ ರೂಲ್ ಮಾಡೋಕೆ ನಿಂತ್ರಾ ರಶ್ಮಿಕಾ?

ದಕ್ಷಿಣ ಚಿತ್ರರಂಗದಲ್ಲಿ ಇನ್ಮುಂದೆ ರಶ್ಮಿಕಾ ಮಂದಣ್ಣ ಮೊದಲಿನಂತೆ ಹವಾ ಮಾಡೋದು ಕಷ್ಟ ಅನ್ನುತ್ತಿರುವಾಗಲೇ ಈಗ ಸೂಪರ್​ಸ್ಟಾರ್​ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಸುದ್ದಿ ಹೊರಬಿದ್ದಿದೆ. ಹೌದು, ‘ಐ’, ‘ಪೊನ್ನಿಯೆನ್ ಸೆಲ್ವನ್’ ಅಂತಹ ಸೂಪರ್​ ಹಿಟ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಟ್ರೆಂಡ್ ಸೃಷ್ಟಿಸಿರುವ ಚಿಯಾನ್ ವಿಕ್ರಮ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ರಶ್ಮಿಕಾ ಫ್ಯಾನ್ಸ್​ ಫುಲ್ ಥ್ರಿಲ್ ಆಗಿದ್ದಾರೆ. ಚಿಯಾನ್ ವಿಕ್ರಮ್ ಸದ್ಯ ‘ಕಬಾಲಿ’ ಡೈರೆಕ್ಟರ್ ಪಾ ರಂಜಿತ್ ಜೊತೆ ‘ತಂಗಳನ್’ ಎನ್ನುವ ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ಮೇಕಿಂಗ್ ಹಾಗೂ ಲುಕ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ತಂಗಳನ್ ತಮಿಳು ಇಂಡಸ್ಟ್ರಿ ಪಾಲಿನ ಕೆಜಿಎಫ್ ಅಂತಾನೇ ಬಿಂಬಿಸಿಕೊಳ್ತಿದೆ. ಈ ಚಿತ್ರದ ಬೆನ್ನಲ್ಲೇ ಮಲಯಾಳಂ ಯುವ ನಿರ್ದೇಶಕನ ಜೊತೆ ಹೊಸ ಚಿತ್ರಕ್ಕೆ ಕಮಿಟ್​ ಆಗ್ತಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆಯಂತೆ.

ಹೌದು, ರೀಸೆಂಟ್​ ಆಗಿ ಮಲಯಾಳಂಲ್ಲಿ ‘2018’ ಎನ್ನುವ ಸಿನಿಮಾ ರಿಲೀಸ್ ಆಗಿತ್ತು. ಕೇರಳ ಪ್ರವಾಹದ ಕುರಿತು ತಯಾರಾಗಿದ್ದ ಈ ಚಿತ್ರ ಸೂಪರ್​ ಹಿಟ್ ಆಗಿತ್ತು. 200 ಕೋಟಿ ಕಲೆಕ್ಷನ್ ಮಾಡುವ ಮೂಲಕ 200 ಕೋಟಿ ಬಾಚಿಕೊಂಡ ಮೊದಲ ಮಲಯಾಳಂ ಸಿನಿಮಾ ಎನಿಸಿಕೊಂಡಿತ್ತು. ಈ ಚಿತ್ರದ ನಿರ್ದೇಶಕ ಜೂಡ್ ಆಂಟೋನಿ ಜೋಸೆಫ್ ಜೊತೆ ವಿಕ್ರಮ್ ಸಿನಿಮಾ ಮಾಡೋಕೆ ಹೊರಟಿದ್ದು, ರಶ್ಮಿಕಾ ಜೋಡಿಯಾಗಲಿದ್ದಾರಂತೆ. ವಿಶೇಷ ಅಂದರೆ ಈ ಚಿತ್ರದಲ್ಲಿ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಸೇತುಪತಿ ಸಹ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಸಾಧ್ಯತೆ ಇದೆಯಂತೆ.

ಅಂದ್ಹಾಗೆ, ರಶ್ಮಿಕಾ ಮಂದಣ್ಣಗೆ ತಮಿಳು ಚಿತ್ರರಂಗ ಹೊಸದನೇಲ್ಲ. ಈ ಮುಂಚೆ ಕಾರ್ತಿ ಅಭಿನಯದ ‘ಸುಲ್ತಾನ್’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿ ಈಗಾಗಲೇ ಕಾಲಿವುಡ್​ ಪಾದಾರ್ಪಣೆ ಮಾಡಿದ್ದರು. ಆಮೇಲೆ ವಿಜಯ್ ಜೊತೆ ‘ವಾರಿಸು’ ಮಾಡಿ ಮ್ಯಾಜಿಕ್ ಮಾಡಿದ್ದರು. ಇದೀಗ ಚಿಯಾನ್ ವಿಕ್ರಮ್ ಜೊತೆ ಹ್ಯಾಟ್ರಿಕ್ ಬಾರಿಸೋ ಹಾದಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಸೌತ್ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಗುಮಾನಿ ಹಬ್ಬಿದೆ. ಶ್ರೀಲೀಲಾ ಕ್ರೇಜ್ ಮುಂದೆ ರಶ್ಮಿಕಾ ಡಮ್ಮಿ ಆಗ್ತಿದ್ದಾರೆ ಅಂತಾನೂ ಹೇಳಲಾಗುತ್ತಿದೆ. ಇಂಥಾ ಬೆಳವಣಿಗೆ ನಡುವೆ ರಶ್ಮಿಕಾ ಕಂಬ್ಯಾಕ್ ಮಾಡೋದು ಅನಿವಾರ್ಯವಾಗಿದೆ. ಅದಕ್ಕೆ ವಿಕ್ರಮ್ ಸಿನಿಮಾ ಸಹಾಯವಾಗುವ ಲೆಕ್ಕಾಚಾರವಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನಟಿ ಶ್ರೀಲೀಲಾ ಮುಂದೆ ಡಮ್ಮಿ ಆದ್ರಾ ನ್ಯಾಷನಲ್​ ಕ್ರಶ್​​? ರಶ್ಮಿಕಾ ಮಂದಣ್ಣ ಮುಂದಿನ ಕಥೆಯೇನು?

https://newsfirstlive.com/wp-content/uploads/2023/06/rashmika-11.jpg

Load More