ಜಪಾನ್ನಲ್ಲಿ ಕೆಜಿಎಫ್, ಯಶ್ ಕುರಿತ ವಿಶೇಷ ಮ್ಯಾಗ್ಜಿನ್ ಬಿಡುಗಡೆ
ರಜಿನಿಕಾಂತ್ ನಟನೆಯ ‘ಲಾಲ್ ಸಲಾಮ್’ ಚಿತ್ರದ ಶೂಟಿಂಗ್ ಕಂಪ್ಲಿಟ್
ಮೃಣಾಲ್ ಠಾಕುಲ್, ನಾನಿ ನಟನೆಯ 'ಹಾಯ್ ನಾನ್ನ' ಟೀಸರ್ ರಿಲೀಸ್
ಜಪಾನ್ನಲ್ಲಿ ಯಶ್ ಮ್ಯಾಗ್ಜಿನ್
ಯಶ್ ನಟನೆಯ ಕೆಜಿಎಫ್ ಸಿನಿಮಾ ಜಪಾನ್ನಲ್ಲಿ ಬಿಡುಗಡೆಯಾಗುತ್ತಿದೆ. ಜುಲೈ 14ಕ್ಕೆ ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಒಟ್ಟಿಗೆ ತೆರೆಗೆ ಬರ್ತಿದ್ದು, ಮೊದಲ ದಿನ 170ಕ್ಕೂ ಅಧಿಕ ಶೋಗಳು ನಿಗದಿಯಾಗಿವೆ. ಈ ನಡುವೆ ಜಪಾನ್ನಲ್ಲಿ ಕೆಜಿಎಫ್ ಹಾಗೂ ಯಶ್ ಕುರಿತು ವಿಶೇಷವಾದ ಮ್ಯಾಗ್ಜಿನ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಪಾಸ್ಪೋರ್ಟ್ ಇಲ್ಲದೇ ಬಂದ KGF ನಟಿ
ಕೆಜಿಎಫ್ ಖ್ಯಾತಿಯ ನಟಿ ಮೌನಿ ರಾಯ್ ಪಾಸ್ಪೋರ್ಟ್ ಏರ್ಪೋರ್ಟ್ಗೆ ಬಂದ ಘಟನೆ ನಡೆದಿದೆ. ದೂರದ ಪ್ರಯಾಣಕ್ಕಾಗಿ ಮುಂಬೈ ಏರ್ಪೋರ್ಟ್ಗೆ ಬಂದ ಮೌನಿ ರಾಯ್, ಅಲ್ಲಿದ್ದ ಫೋಟೋ ಜರ್ನಲಿಸ್ಟ್ಗಳಿಗೆ ಕೈ ಬೀಸಿ ಏರ್ಪೋರ್ಟ್ ಪ್ರವೇಶಿಸಲು ಮುಂದಾದರು. ಆದ್ರೆ ಪ್ರವೇಶದ್ವಾರದಲ್ಲಿ ಸಿಬ್ಬಂದಿ ಪಾಸ್ಪೋರ್ಟ್ ತೋರಿಸುವಂತೆ ಸೂಚಿಸಿದರು. ಬ್ಯಾಗ್ ಪೂರ್ತಿ ಹುಡುಕಾಡಿದರೂ ಮೌನಿ ರಾಯ್ಗೆ ಪಾಸ್ ಪೋರ್ಟ್ ಸಿಕ್ಕಿಲ್ಲ. ಹಾಗಾಗಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಮೌನಿ ರಾಯ್ ವಾಪಸ್ ಮನೆ ಕಡೆ ಹೊರಟರು.
ಲಾಲ್ ಸಲಾಮ್ ಮುಗಿಸಿದ ರಜಿನಿಕಾಂತ್
ಮಗಳು ಐಶ್ವರ್ಯ ನಿರ್ದೇಶಿಸುತ್ತಿರುವ ಲಾಲ್ ಸಲಾಮ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ ಸೂಪರ್ಸ್ಟಾರ್ ರಜಿನಿಕಾಂತ್. ಐಶ್ವರ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ಲಾಲ್ ಸಲಾಮ್ ಚಿತ್ರದಲ್ಲಿ ರಜಿನಿಕಾಂತ್ ಮೊಯಿದ್ದಿನ್ ಖಾನ್ ಎನ್ನುವ ಅತಿಥಿ ಪಾತ್ರ ಮಾಡಿದ್ದು, ರಿಸೆಂಟ್ ಆಗಿ ತಮ್ಮ ಭಾಗದ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದಾರೆ. ಈ ಫೋಟೋವನ್ನ ಸ್ವತಃ ಐಶ್ವರ್ಯ ಅವರೇ ಶೇರ್ ಮಾಡಿದ್ದು, ಅಪ್ಪನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಸ್ಟಾರ್ ನಟನ ಚಿತ್ರದಿಂದ ರಶ್ಮಿಕಾ ಔಟ್!
ತೆಲುಗು ನಟ ನಿತೀನ್ ಹಾಗೂ ವೆಂಕಿ ಕುಡುಮಲಾ ಕಾಂಬಿನೇಷನ್ನಲ್ಲಿ ಬರ್ತಿರೋ ಚಿತ್ರದಿಂದ ರಶ್ಮಿಕಾ ಮಂದಣ್ಣ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಬ್ಯಾಕ್ ಟು ಬ್ಯಾಕ್ ದೊಡ್ಡ ಪ್ರಾಜೆಕ್ಟ್ಗಳಲ್ಲಿ ರಶ್ಮಿಕಾ ನಟಿಸುತ್ತಿರುವ ಕಾರಣ ಡೇಟ್ ಸಮಸ್ಯೆಯಾಗ್ತಿದ್ದು, ಈ ಕಾರಣದಿಂದ ರಶ್ಮಿಕಾ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ರಶ್ಮಿಕಾ ಅವರನ್ನ ಚಿತ್ರತಂಡ ಬೇಕು ಅಂತಾಲೇ ತೆಗೆದುಹಾಕಿದೆ ಎನ್ನುವ ಸುದ್ದಿಯೂ ಚರ್ಚೆಯಲ್ಲಿದೆ.
ಗಮನ ಸೆಳೆದ ನಾನಿ-ಮೃಣಾಲ್ ಟೀಸರ್
ಸೀತಾರಾಮಮ್ ಚಿತ್ರದೊಂದಿಗೆ ನ್ಯಾಷನಲ್ ಕ್ರಶ್ ಎನಿಸಿಕೊಂಡ ನಟಿ ಮೃಣಾಲ್ ಠಾಕುಲ್ ತೆಲುಗು ನಟ ನಾನಿ ಜೊತೆ ‘ಹಾಯ್ ನಾನ್ನ’ ಎನ್ನುವ ಹೊಸ ಚಿತ್ರ ಮಾಡ್ತಿದ್ದು, ಟೀಸರ್ ಬಿಡುಗಡೆಯಾಗಿದೆ. ಅಪ್ಪ-ಮಗಳ ಎಮೋಷನ್ ಕಥಾಹಂದರ ಹೊಂದಿರುವ ಈ ಟೀಸರ್ ಈಗ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ವಿಡಿಯೋ ಆಗಿದೆ. ಶೌರ್ಯ ಈ ಚಿತ್ರ ನಿರ್ದೇಶಿಸ್ತಿದ್ದು, ಡಿಸೆಂಬರ್ನಲ್ಲಿ ತೆರೆಗೆ ಬರುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ