ಫ್ಯಾಮಿಲಿ ಕೇಸ್, ಪ್ರಾಪರ್ಟಿ ಕೇಸ್, ಟ್ರಾಫಿಕ್ ಕೇಸ್, ಚೆಕ್ ಬೌನ್ಸ್ ಕೇಸ್
ದುರ್ಬಲ ವರ್ಗಗಳ ಜನರಿಗೆ ಉಚಿತ ಹಾಗೂ ಸಕ್ಷಮ ಕಾನೂನು ಸೇವೆ
ಹೈಕೋರ್ಟ್, ಜಿಲ್ಲಾ ಕೋರ್ಟ್, ತಾಲ್ಲೂಕು ಕೋರ್ಟ್‌ಗಳಲ್ಲಿ ಅದಾಲತ್
ಬೆಂಗಳೂರು: ತುಂಬಾ ವರ್ಷಗಳಿಂದ ಬಾಕಿ ಉಳಿದಿರುವ ಕೇಸ್‌ಗಳ ಇತ್ಯರ್ಥಕ್ಕಾಗಿ ಜುಲೈ 8ಕ್ಕೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ಶನಿವಾರ ಬೆಳಗ್ಗೆ 10:30ಕ್ಕೆ ರಾಜ್ಯದ ಹೈಕೋರ್ಟ್, ಜಿಲ್ಲಾ ಕೋರ್ಟ್, ತಾಲ್ಲೂಕು ಕೋರ್ಟ್‌ಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ರಾಜ್ಯಾದ್ಯಂತ ಬಾಕಿ ಉಳಿದಿರುವ ಫ್ಯಾಮಿಲಿ ಕೇಸ್, ಪ್ರಾಪರ್ಟಿ ಕೇಸ್, ಟ್ರಾಫಿಕ್ ಕೇಸ್, ಚೆಕ್ ಬೌನ್ಸ್ ಕೇಸ್ ಸೇರಿದಂತೆ ಸುಮಾರು 20 ಲಕ್ಷ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ.
ಇದೇ ಶನಿವಾರ ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.
ಜುಲೈ 8ರ ಬೆಳಗ್ಗೆಯಿಂದ ರಾಜ್ಯಾದ್ಯಂತ ಮಿಡಿಯೇಷನ್ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು. ಪ್ರಕರಣದ ಕಕ್ಷಿದಾರರು ಇದರ ಲಾಭ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ. ಅಪಘಾತ, ಚೆಕ್ ಬೌನ್ಸ್, ಮನಿ ರಿಕವರಿ ಕೇಸ್ ಸೇರಿದ ವಿವಿಧ ರೀತಿಯ ವಿವಿಧ ರೀತಿಯ ಕೇಸ್‌ಗಳ ಇತ್ಯರ್ಥ ಮಾಡಲಾಗುವುದು. ಈ ಜನತಾ ನ್ಯಾಯಾಲಯದ ಮೂಲಕ ಕೇಸ್‌ಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣವಕಾಶವಾಗಿದೆ.
ಭಾರತದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ ಧ್ಯೇಯೋದ್ದೇಶ ಸರ್ವರಿಗೂ ನ್ಯಾಯ ಎಂಬುದಾಗಿದೆ. ಸಮಾಜದ ದುರ್ಬಲ ವರ್ಗಗಳ ಜನರಿಗೆ ಉಚಿತ ಹಾಗೂ ಸಕ್ಷಮ ಕಾನೂನು ಸೇವೆಗಳನ್ನು ಒದಗಿಸುವುದರ ಮೂಲಕ, ನಾಗರಿಕರಿಗೆ ಆರ್ಥಿಕ ಮತ್ತಿತರ ದೌರ್ಬಲ್ಯಗಳ ಕಾರಣಕ್ಕಾಗಿ ನ್ಯಾಯವನ್ನು ನಿರಾಕರಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಅರ್ಥಪೂರ್ಣ ಹಾಗೂ ಮಹತ್ತರ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು. ಈ ಮಹತ್ತರ ಉದ್ದೇಶವನ್ನು ಸಾಧಿಸಲು ಇರುವ ಮುಖ್ಯ ಮಾರ್ಗಗಳಲ್ಲಿ ಜನತಾ ನ್ಯಾಯಾಲಯಗಳನ್ನು ರಚಿಸುವುದೂ ಒಂದು. ಜನತಾ ನ್ಯಾಯಾಲಯಗಳನ್ನು ರಚಿಸಿ ತನ್ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯು ನ್ಯಾಯ ನಿರ್ವಹಣೆಯನ್ನು ಎಲ್ಲರಿಗೂ ಸಮಾನ ಅವಕಾಶ ಎಂಬ ತತ್ವದ ಆಧಾರದ ಮೇಲೆ ಮಾಡುತ್ತಿದೆಯೆಂಬ ಅಂಶವನ್ನು ಒತ್ತಿ ಹೇಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ