/newsfirstlive-kannada/media/post_attachments/wp-content/uploads/2024/08/Oune.jpg)
ಒಂದ್ಕಡೆ ದೇವರ ನಾಡು ಕೇರಳ ಸಾವಿನೂರು ಆಗ್ತಿದ್ರೆ, ಇತ್ತ ಪಕ್ಕದ ರಾಜ್ಯ ಮಹಾರಾಷ್ಟ್ರ, ಗುಜರಾತ್​, ಪುಣೆ ಆತಂಕ ಹುಟ್ಟಿಸ್ತಿದೆ. ಧಾರಾಕಾರವಾಗಿ ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತ ಬೆಳಗಾವಿ ಕೂಡ ವರುಣ ದೇವನ ಕೋಪಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ ಇವತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಜನರ ಅಳಲು ಆಲಿಸಲಿದ್ದಾರೆ.
ಮಳೆರಾಯನ ರೌದ್ರಾವತಾರಕ್ಕೆ ಪಶ್ಚಿಮ ಘಟ್ಟದ ರಾಜ್ಯಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ದೇವರನಾಡು ಕೇರಳ ಗುಡ್ಡ ಕುಸಿತದಿಂದ ತತ್ತರಿಸಿ ಹೋಗಿದೆ. ಇದೀಗ ಮಹಾರಾಷ್ಟ್ರ, ಗುಜರಾತ್​ನಲ್ಲೂ ವರುಣಾರ್ಭಟ ಜೋರಾಗಿದೆ. ನಿರಂತರವಾಗಿ ಅಬ್ಬರಿಸ್ತಿರೋ ಮಳೆ ನಾನಾ ಅವಾಂತರಕ್ಕೆ ಕಾರಣ ಆಗ್ಬಿಟ್ಟಿದೆ.
ಇದನ್ನೂ ಓದಿ: 93ಕ್ಕೆ ಏರಿದ ಸಾವಿನ ಸಂಖ್ಯೆ; ಬಾಂಗ್ಲಾದೇಶದ ಹಿಂಸಾಚಾರಕ್ಕೆ ಅಸಲಿ ಕಾರಣವೇನು?
ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಗೋದಾವರಿ
ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಸುರಿದ ಮಳೆಯ ಆರ್ಭಟಕ್ಕೆ ಮಹಾರಾಷ್ಟ್ರ ನಾಸಿಕ್‌ನಲ್ಲಿರೋ ಗೋದಾವರಿ ರೌದ್ರಾವತಾರ ತಾಳಿದೆ. ಭಯಂಕರ ಶಬ್ದದಿಂದ ಆರ್ಭಟಿಸ್ತಿರೋ ಗೋದಾವರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ, ಅಂಗಡಿ, ಮಂದಿರ, ಕಟ್ಟಡಗಳು ಜಲಾವೃತಗೊಂಡಿದ್ದು, ಪ್ರವಾಹದಂತಹ ಪರಿಸ್ಥಿತಿ ಮುಂದುವರಿದಿದೆ.
/newsfirstlive-kannada/media/post_attachments/wp-content/uploads/2024/08/Maharatra.jpg)
ಉಕ್ಕಿ ಹರಿದ ಮುಲಾ ನದಿ.. ತತ್ತರಿಸಿದ ಪುಣೆ ಮಂದಿ
ಇನ್ನು ಮಹಾರಾಷ್ಟ್ರ ಪುಣೆ ಕೂಡ ಪ್ರವಾಹದ ನೀರಲ್ಲಿ ಮುಳುಗಿದೆ. ಖಡಕ್ವಾಸ್ಲಾ ಡ್ಯಾಂನಿಂದ ಅಪಾರ ಪ್ರಮಾಣ ನೀರನ್ನು ಹೊರಬಿಟ್ಟಿರುವ ಕಾರಣ ಮುಲಾ ನದಿಯ ನೀರು ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ಇಂದ್ರಪ್ರಸ್ಥ ರಸ್ತೆಯ ಸಾಂಗ್ವಿ ಪ್ರದೇಶ ಜಲಾವೃತವಾಗಿ ಜನರು ಪರದಾಡಿದ್ದಾರೆ. ಇನ್ನು ಸಿಂಹಗಡ ರಸ್ತೆಯೂ ನದಿಯಂತೆ ಮಾರ್ಪಟ್ಟಿದ್ದು, ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿತ್ತು.
/newsfirstlive-kannada/media/post_attachments/wp-content/uploads/2024/08/Oune.jpg)
ಗುಜರಾತ್​​ನಲ್ಲಿ ಪ್ರವಾಹ.. ಹಲವು ಪ್ರದೇಶ ಜಲಾವೃತ
ಮಹಾರಾಷ್ಟ್ರ ಮಾತ್ರವಲ್ಲ.. ಗುಜರಾತ್​ನಲ್ಲಿ ವರುಣದೇವ ಅಬ್ಬರಿಸಿದ್ದಾನೆ. ಕಳೆದ ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಗೆ ಗುಜರಾತ್‌ನ ವಾಪಿ ಮತ್ತು ವಲ್ಸಾದ್ ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳಕ್ಕೆ ಎನ್​ಡಿಆರ್​ಎಫ್​ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಸಿ, ಜನರನ್ನ ಬೇರೆಡೆಗೆ ಶಿಫ್ಟ್​​ ಮಾಡಲಾಗಿದೆ.
ಇದನ್ನೂ ಓದಿ: ಹೊಸ ಕೆಲಸಕ್ಕೆ ಶುಭದಿನ; ಈ ರಾಶಿಯವರಿಗೆ ಶತ್ರುಗಳ ಕಾಟ; ಇಲ್ಲಿದೆ ನಿಮ್ಮ ಭವಿಷ್ಯ
/newsfirstlive-kannada/media/post_attachments/wp-content/uploads/2024/08/Gujrat.jpg)
ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಕ್ಕಿಂದು ಸಿಎಂ ಭೇಟಿ
ಪಶ್ಚಿಮಘಟ್ಟದ ಮಹಾ ಮಳೆಯಿಂದಾಗಿ ಸಪ್ತನದಿಗಳ ನಾಡು ಬೆಳಗಾವಿ ಬೆಚ್ಚಿಬಿದ್ದಿದೆ. ಕೃಷ್ಣ, ಫಟಪ್ರಭಾ, ಮಲಪ್ರಭಾ, ಮತ್ತು ಮಾರ್ಕಂಡೇಯ ನದಿಗಳು ಸೃಷ್ಟಿಸಿರೋ ಅವಾಂತರಕ್ಕೆ ಜನರು ತತ್ತರಿಸಿದ್ದಾರೆ. ನದಿ ತೀರದ 40 ಗ್ರಾಮಗಳ ಜನರ ಬದುಕು ಅತಂತ್ರವಾಗಿದೆ. ಮೂರುವರೆ ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗ್ತಿದೆ. ಇವತ್ತು ಸಿಎಂ ಸಿದ್ದರಾಮಯ್ಯ ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದು, ಬೆಳಗಾವಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆ ಬೆಳಗಾವಿಗೆ ತಲುಪಲಿರುವ ಸಿಎಂ, ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಜನರ ಅಳಲು ಆಲಿಸಲಿದ್ದಾರೆ.
ಒಟ್ಟಾರೆ, ಪಶ್ಚಿಮ ಘಟ್ಟದ ಮಳೆಯಿಂದ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್​ ಕೆಲ ಭಾಗಗಳು ನಲುಗಿ ಹೋಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಜನರ ನಿದ್ದೆಗೆಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us