ಚಂದ್ರನಂಗಳಕ್ಕೆ ಇಸ್ರೋ ತಲುಪಿದ ದಿನಕ್ಕೆ ಇಂದು ಒಂದು ವರ್ಷ
ಹೇಗಿತ್ತು ಸಾವಿರಾರು ಬಾಹ್ಯಾಕಾಶ ವಿಜ್ಞಾನಿಗಳ ಮಹಾಸಾಹಸ?
ಭಾರತದ ಪಾಲಿಗೆ ಐತಿಹಾಸಿಕ ದಿನವೊಂದು ಸಾಧ್ಯವಾಗಿದ್ದು ಹೇಗೆ?
ಬೆಂಗಳೂರು: ಚಂದ್ರಯಾನ -3 ಯಶಸ್ಸು ಹಾಗೂ ಪಗ್ನಾನ್ ರೋವರ್ ಚಂದ್ರನಗಂಳಕ್ಕೆ ಮುತ್ತಿಟ್ಟ ಐತಿಹಾಸಿಕ ದಿನವನ್ನ ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುತ್ತದೆ. ಇಂದಿಗೆ ಅಂದ್ರೆ ಆಗಸ್ಟ್ 23ಕ್ಕೆ ಚಂದ್ರನಂಗಳಕ್ಕೆ ನಮ್ಮ ಉಪಗ್ರಹ ತಲುಪಿ ಬರೋಬ್ಬರಿ ಒಂದು ವರ್ಷವಾಯಿತು. ಭಾರತ ಬಾಹ್ಯಾಕಾಶ ಜಗತ್ತಿನಲ್ಲಿ ಸುವರ್ಣಾಕ್ಷಗಳಿಂದ ಬರೆದಿಡುವ ಐತಿಹಾಸಿ ದಿನಕ್ಕೆ ಭಾರತ ಸಾಕ್ಷಿಯಾದ ದಿನವಿಂದು.
ಇದನ್ನೂ ಓದಿ: ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ ಕೇಸ್ಗೆ ಬಿಗ್ ಟ್ವಿಸ್ಟ್.. ಆಮೇಲೇನಾಯ್ತು ಗೊತ್ತಾ?
ಜಗತ್ತಿನಲ್ಲಿ ಚಂದ್ರನಯಾನ ಯಶಸ್ವಿಯಾಗಿ ಪೂರೈಸಿದ ರಾಷ್ಟ್ರಗಳಲ್ಲಿ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿತು. ಚಂದ್ರನ ದಕ್ಷಿಣ ಭಾಗದಲ್ಲಿ ತಲುಪಿದ ಮೊದಲ ರಾಷ್ಟ್ರವಾಗಿ ಭಾರತ ಹೆಮ್ಮೆಯಿಂದ ಹೇಳಿಕೊಳ್ಳುವಂತಾಯಿತು. ಸೈಕಲ್ ಮೇಲೆ ಉಪಗ್ರಹದದ ಸಲಕರಣೆಗಳನ್ನು ಸಾಗಿಸುತ್ತಾ ಆರಂಭವಾದ ಇಸ್ರೋ ಎಂಬ ನಮ್ಮ ಹೆಮ್ಮೆಯ ಸಂಸ್ಥೆಯ ಹೆಜ್ಜೆಗುರುತುಗಳನ್ನ ಚಂದ್ರನ ದಕ್ಷಿಣ ದ್ರುವದ ಮೇಲೆ ಪ್ರಗ್ನಾನ್ ರೋವರ್ ಮೂಡಿಸಿ ಅದು ಬೆಳೆದ ಪರಿಯ ಅನನ್ಯತೆಗೆ ಸಾಕ್ಷಿಯಾಗಿ ನಿಂತಿತ್ತು.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!
ಚಂದ್ರಯಾನ 3 ಕೇಲವ ಒಂದು ಬಾಹ್ಯಾಕಾಶದಲ್ಲಿ ಭಾರತ ಮಾಡಿದ ಸಾಹಸದ ಕುರಿತ ಮಾತಲ್ಲ. ಅದು ಜಾಗತಿಕವಾಗಿ ಇಸ್ರೋದ ಶ್ರದ್ಧೆ ಹಾಗೂ ಸಾಹಸಗಳನ್ನು ಸಾಬೀತು ಮಾಡಿದ ದಿನ. ಇದು ಅಸಾಧ್ಯವನ್ನು ಸಾಧ್ಯವನ್ನಾಗಿ ಇಸ್ರೋ ಸಾಧಿಸಿದ ದಿನ ಏಳುಬೀಳುಗಳಿಲ್ಲದೇ ಸಾಧನೆಯಿಲ್ಲ ಎಂಬುದನ್ನು ಸಾಕ್ಷೀಕರಿಸಿದ ದಿನ. ಬಾಹ್ಯಾಕಾಶದ ಕ್ಷೇತ್ರದಲ್ಲಿ ಭಾರತ ಹೊಸ ಅದ್ಯಾಯವೊಂದನ್ನು ಒಂದು ವರ್ಷದ ಹಿಂದೆ ಬರೆಯಿತು.
ಇದನ್ನೂ ಓದಿ: ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್ ಮಾಡ್ಬೇಡಿ
ಇದು ಮುಂದಿನ ಯುವಕರಿಗೆ ಪ್ರೇರಣೆಯಾಗಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ ಈ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಘೋಷಣೆ ಮಾಡಲಾಗಿದೆ
ರಾಷ್ಟ್ರೀಯ ಬಾಹ್ಯಾಕಾಶ ದಿನದಲ್ಲಿ ಪಾಲ್ಗೊಳ್ಳಿ, ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ಚರ್ಚಿಸಿ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಂಥಹದೊಂದು ವೇದಿಕೆಯನ್ನ ಯುವಕರಿಗಾಗಿ ನಿರ್ಮಿಸಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನ 2024ರ ಅಂಗವಾಗಿ ಇಸ್ರೋ ಸ್ಪೇಸ್ ಸೈಂಟಿಸ್ಟ್ ಜೊತೆಗೆ ಸಂಭಾಷಣೆ ಚರ್ಚೆ ಮಾಡಲು ಅವಕಾಶ ನೀಡುತ್ತಿದೆ.
National Space Day – 2024
One day to go!Come, let us together celebrate the maiden National Space Day 🇮🇳@DrJitendraSingh #NSpD2024 pic.twitter.com/RAZkvSFSwM
— ISRO (@isro) August 22, 2024
ಸ್ಪೇಸ್ ಸೈನ್ಸ್ ಬಗ್ಗೆ ಆಸಕ್ತಿಯಿದ್ದ ಯುವಕರು ಇದರ ಲಾಭ ಪಡೆಯುವ ಉದ್ದೇಶದಿಂದಾಗಿಯೇ ಈ ಒಂದು ಕಾರ್ಯಕ್ರಮವನ್ನು ಇಸ್ರೋ ಪ್ರಸಾರ ಮಾಡುತ್ತಿದೆ. ಇಂದು ಅಂದ್ರೆ 23ಆಗಸ್ಟ್ರಂದು ನೇರಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಇಸ್ರೋ, ಬಾಹ್ಯಾಕಾಶ ವಿಜ್ಞಾನಿಗಳ ಜೊತೆ ಚರ್ಚೆ, ಪ್ಯಾನಲ್ ಡಿಸ್ಕಷನ್ ರೀತಿಯ ಅವಕಾಶಗಳನ್ನು ಯುವಕರಿಗೆ ನೀಡುತ್ತಿದೆ.
ಐತಿಹಾಸಿಕ ದಿನದ ಪ್ರಯುಕ್ತ ಹೊಸ ಫೋಟೋ ರಿಲೀಸ್ ಮಾಡಿದ ಇಸ್ರೋ
ಇನ್ನು ಐತಿಹಾಸಿಕ ಕ್ಷಣದ ವಾರ್ಷಿಕೋತ್ಸವದ ದಿನದ ಅಂಗವಾಗಿ ಇಸ್ರೋ ಚಂದ್ರನಿಂದ ಒಂದು ಹೊಸ ಫೋಟೋವೊಂದನ್ನು ರಿಲೀಸ್ ಮಾಡಿದೆ ಈ ಒಂದು ಫೋಟೋ ಚಂದ್ರಯಾನ 3ರ ವಿವಿಧ ಹಂತಗಳನ್ನು ತೋರಿಸುತ್ತಾ ಹೋಗುತ್ತದೆ, ಕೊನೆಗೆ ಚಂದ್ರನಗಳದಲ್ಲಿ ಪ್ರಗ್ನಾನ್ ರೋವರ್ನ ಮೊದಲ ಕ್ಷಣವೂ ಕೂಡ ದಾಖಲಾಗಿದೆ
ಚಂದ್ರಯಾನ 3 ಐತಿಹಾಸಿಕ ದಿನ
23 ಆಗಸ್ಟ್ 2023 ಇಡೀ ಭಾರತ ಮಾತ್ರವಲ್ಲ ಇಡೀ ಜಗತ್ತೇ ಒಂದು ತೀವ್ರ ನಿರೀಕ್ಷೆ ಹಾಗೂ ಕುತೂಹಲವನ್ನಿಟ್ಟುಕೊಂಡು ಚಂದ್ರನತ್ತ ನೋಡುತ್ತಿತ್ತು. ಈ ಹಿಂದೆ ಯಾರು ಮಾಡಲಾಗದ ಸಾಧನೆಗೆ ಇಸ್ರೋ ಕೈ ಹಾಕಿತ್ತು. ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ನನ್ನು ಸಾಫ್ಟ್ ಲ್ಯಾಂಡ್ ಮಾಡುವ ದೈತ್ಯ ಸವಾಲೊಂದನ್ನು ಇಸ್ರೋ ಕೈಗೆತ್ತಿಕೊಂಡಿತ್ತು. ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದತ್ತ ನೋಡುತ್ತಿರವಾಗ ವಿಕ್ರಮ ಸರಾಗವಾಗಿ ಶಶಿಯ ದಕ್ಷಿಣಂಗಳದಲ್ಲಿ ಕಾಲೂರಿಬಿಟ್ಟಿದ್ದ. ಅಲ್ಲಿ ವಿಕ್ರಮ್ ಕಾಲೂರಿದ ಕ್ಷಣವೇ ಭಾರತದಲ್ಲಿ ಸಂಭ್ರಮ, ಎಲ್ಲೆಲ್ಲೋ ಇಸ್ರೋದ ಬಗ್ಗೆ ಹರ್ಷೋದ್ಗಾರ.
ಹೇಗಿದ್ದ ಇಸ್ರೋ ಹೇಗೆಲ್ಲಾ ಬೆಳೆಯಿತು ಎಂಬ ಖುಷಿಯ ಕಂಬನಿ ಅದೆಷ್ಟು ಕಣ್ಣುಗಳಿಂದ ಅಂದು ಜಾರಿದವೋ ಗೊತ್ತಿಲ್ಲ. ಬೆಂಗಳೂರಿನ ಇಸ್ರೋ ಸಂಭ್ರಮ ಚಂದ್ರನಂಗಳಕ್ಕೂ ಮುಟ್ಟವಷ್ಟಿತ್ತು. ವಿದೇಶ ಪ್ರವಾಸದಲ್ಲಿದ್ದ ಮೋದಿ ಅಲ್ಲಿಂದಲೇ ನೇರಪ್ರಸಾರದಲ್ಲಿ ಬಂದು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಹಾರಿಸಿದು. ದೇಶ ಐತಿಹಾಸಿ, ಎಂದೂ ಅಳಿಸಲಾಗದ ಸುವರ್ಣಕ್ಷಣಕ್ಕೆ ಸಾಕ್ಷಿಯಾಗಿತ್ತು. ಈ ಎಲ್ಲಾ ಸಂಭ್ರಮಕ್ಕೆ ಈಗ ಒಂದು ವರ್ಷ.
ಇಸ್ರೋ ಸಾಧನೆಗೆ ಒಂದು ಸೆಲ್ಯೂಟ್ ಹೇಳುವ ದಿನ. ಇಂತಹ ಮತ್ತಷ್ಟು ದಾಖಲೆಗಳು ಐತಿಹಾಸಿಕ ಕ್ಷಣಗಳು ನಮ್ಮೆ ಹೆಮ್ಮೆಯ ಇಸ್ರೋ ನಮಗೆ ಈ ದೇಶಕ್ಕೆ ಈ ಜಗತ್ತಿಗೆ ನೀಡಲಿ ಅನ್ನೋ ಒಂದು ಶುಭಾಶಯ ನಮ್ಮ, ನಿಮ್ಮದಾಗಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ