‘I Don't Care’ ಎಂದಿದ್ದ, ನಿದ್ದೆ ಮಾಡ್ತಿರಲಿಲ್ಲ - ಸಾಕೇತ್​ನ ನೆನೆದು ರೂಮ್​ ಮೇಟ್ ಕಣ್ಣೀರು..

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿ ಅಂತಿಮವಾಗಿ ಶವವಾಗಿ ಪತ್ತೆಯಾದ ಕರ್ನಾಟಕ ಮೂಲದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಕುರಿತು ಒಂದೊಂದೇ ಮಾಹಿತಿಗಳು ಹೊರ ಬರುತ್ತಿವೆ.

author-image
Ganesh Kerekuli
Saketh Srinivasaiah
Advertisment

ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿ ಅಂತಿಮವಾಗಿ ಶವವಾಗಿ ಪತ್ತೆಯಾದ ಕರ್ನಾಟಕ ಮೂಲದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಕುರಿತು ಒಂದೊಂದೇ ಮಾಹಿತಿಗಳು ಹೊರ ಬರುತ್ತಿವೆ. ಸಾಕೇತ್ ಅವರ ಕೊನೆಯ ದಿನಗಳ ವರ್ತನೆ ಮತ್ತು ಅವರು ಅನುಭವಿಸುತ್ತಿದ್ದ ಮಾನಸಿಕ ತೊಳಲಾಟದ ಬಗ್ಗೆ ಅವರ ರೂಮ್‌ಮೇಟ್ ಬನೀತ್ ಸಿಂಗ್ ಸ್ಫೋಟಕ ಹಾಗೂ ಭಾವುಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಚಿಪ್ಸ್, ಕುಕ್ಕೀಸ್ ತಿಂದು ಬದುಕಿದ್ದ ಸಾಕೇತ್..!

ಸಾಕೇತ್ ನಾಪತ್ತೆಯಾಗುವ ಎರಡು ವಾರಗಳ ಮೊದಲೇ ಅವರ ವರ್ತನೆಯಲ್ಲಿ ಭಾರೀ ಬದಲಾವಣೆಯಾಗಿತ್ತು. ‘ಅಂತರಾಷ್ಟ್ರೀಯ ವಿದ್ಯಾರ್ಥಿಯ ಜೀವನ ತುಂಬಾ ಕಷ್ಟ ಗುರು.. ಕಳೆದ ಎರಡು ವಾರಗಳಿಂದ ಸಾಕೇತ್ ಸರಿಯಾಗಿ ಊಟ ಮಾಡುತ್ತಿರಲಿಲ್ಲ, ನಿದ್ದೆ ಮಾಡುತ್ತಿರಲಿಲ್ಲ. ಕೇವಲ ಚಿಪ್ಸ್ ಮತ್ತು ಕುಕ್ಕೀಸ್ ತಿಂದು ಬದುಕಿದ್ದ ಎಂದು ಬನೀತ್ ಸಿಂಗ್ ಲಿಂಕ್ಡ್‌ಇನ್ (LinkedIn) ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕೆಂಪು 'ಬಾತ್‌ರೋಬೆ' ಧರಿಸಿ ಕ್ಲಾಸ್‌ಗೆ ಹೋಗಿದ್ದ!

ಸಾಕೇತ್ ಮಾನಸಿಕವಾಗಿ ಎಷ್ಟು ಕುಗ್ಗಿಹೋಗಿದ್ದರು ಎಂಬುದಕ್ಕೆ ರೂಮ್‌ಮೇಟ್ ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ‘ಒಮ್ಮೆ ಸಾಕೇತ್ ಕೆಂಪು ಬಣ್ಣದ ಬಾತ್‌ರೋಮ್ (Bathrobe) ಧರಿಸಿಯೇ ಕಾಲೇಜಿನ ಕ್ಲಾಸ್‌ಗೆ ಹೋಗಿ ಬಂದಿದ್ದ. ಆಗ ನಾನು ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ, ‘ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ (I've stopped caring). ಜನ ನನ್ನ ಬಗ್ಗೆ ಏನ್ ಬೇಕಾದ್ರೂ ಅಂದುಕೊಳ್ಳಲಿ, ನನಗೆ ಚಿಂತೆಯಿಲ್ಲ' ಎಂದು ಹೇಳಿದ್ದ. ಆಗ ಸಾಕೇತ್ ತಮಾಷೆ ಮಾಡುತ್ತಿದ್ದಾನೆ ಎಂದು ಸುಮ್ಮನಾಗಿದ್ದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಇಶಾನ್ ಕಿಶನ್ ಹೊಗಳಿದ ಪಾಕ್ ಕೋಚ್​; ಪಾಕಿಸ್ತಾನ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ ಹೆಸ್ಸನ್..!

saketh sreenivasaiah

ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ:

ಕರ್ನಾಟಕ ಮೂಲದ ಸಾಕೇತ್, ಬೆಂಗಳೂರಿನ ಶ್ರೀ ವಾಣಿ ಎಜುಕೇಷನ್ ಸೆಂಟರ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದರು. ನಂತರ ಐಐಟಿ ಮದ್ರಾಸ್‌ನಲ್ಲಿ ಪದವಿ ಮುಗಿಸಿ, ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿವಿ ಸೇರಿದ್ದರು. ಇವರು ‘ಹೈಪರ್‌ಲೂಪ್ ಕೂಲಿಂಗ್ ಸಿಸ್ಟಮ್’ಗೆ ಪೇಟೆಂಟ್ ಪಡೆದ ಆರು ಸಂಶೋಧಕರಲ್ಲಿ ಒಬ್ಬರಾಗಿದ್ದರು.

ಫೆ.14 ರಂದು ಶವ ಪತ್ತೆ..!

ಫೆಬ್ರವರಿ 9 ರಂದು ನಾಪತ್ತೆಯಾಗಿದ್ದ ಸಾಕೇತ್, ಲೇಕ್ ಅಂಜಾ (Lake Anza) ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ದೃಢಪಡಿಸಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರಿಗೆ ನೆರವು ನೀಡುತ್ತಿದೆ.

ಇದನ್ನೂ ಓದಿ:ಸೋಲಿಗೆ ಇವರೇ ಹೊಣೆ ಎಂದ ಪಾಕ್ ನಾಯಕ.. ಶರಣಾಗತಿಗೆ ಬಿಚ್ಚಿಟ್ಟ ಕಾರಣ ಏನು ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Saketh Srinivasaiah
Advertisment