/newsfirstlive-kannada/media/media_files/2026/02/07/hdk-and-modi-meeting-3-2026-02-07-12-43-55.jpg)
ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಪ್ರಧಾನಿ ಮೋದಿ
ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಮತ್ತೊಮ್ಮೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿದೆ.
ಭೂಮಿಯ ಮೇಲಿನ ಅಪರೂಪದ ಆಯಸ್ಕಾಂತಗಳ (Rare earth magnetic) ಯೋಜನೆ ನಂತರ ಅಷ್ಟೇ ಮಹತ್ವದ ಭಾರತದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳಿಗಾಗಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವ ಯೋಜನೆ (Scheme to Enhance the Manufacturing Ecosystem for Construction and Infrastructure Equipment in India”, popularly known as the CIE Scheme) ಯನ್ನು ಅನುಷ್ಠಾನ ಮಾಡುವ ಗುರುತರ ಜವಾಬ್ದಾರಿಯನ್ನು ಮೋದಿ ಅವರು ಸಚಿವ ಕುಮಾರಸ್ವಾಮಿ ಅವರಿಗೆ ವಹಿಸಿದ್ದಾರೆ.
ಭೂಮಿಯ ಮೇಲಿನ ಅಪರೂಪದ ಆಯಸ್ಕಾಂತಗಳ ಉತ್ಪಾದನೆ ಮತ್ತು ಬಳಕೆಯ ಯೋಜನೆಗೆ ಮೊತ್ತ ₹7280 ಕೋಟಿ ರೂಪಾಯಿ ಆಗಿದೆ.
ನಿರ್ಮಾಣ & ಮೂಲಸೌಕರ್ಯ ಉಪಕರಣಗಳಿಗಾಗಿ ಉತ್ಪಾದನಾ ಪರಿಸರ ವ್ಯವಸ್ಥೆ ಹೆಚ್ಚಿಸುವ ಯೋಜನೆ ಮೊತ್ತ ₹14,000 ಕೋಟಿ ರೂಪಾಯಿ ಆಗಿದೆ.
ಪ್ರಧಾನಿ ಮೋದಿ ವಹಿಸಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಕುಮಾರಸ್ವಾಮಿ ನಿಭಾಯಿಸಿದ್ದಾರೆ.
ಕುಮಾರಸ್ವಾಮಿ ಅವರ ಕ್ಷಮತೆ, ದಕ್ಷತೆಗೆ ಪ್ರಧಾನಿ ಮೋದಿ ಮನ್ನಣೆ ನೀಡಿದ್ದಾರೆ. ಕಾಯಕವೇ ದೇವರೆಂದ ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ದೇಶದ ಅಭಿವೃದ್ದಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರಿಗೆ ಈಗ ಹೊಸ ಹೊಸ ಕೆಲಸ, ಜವಾಬ್ದಾರಿಗಳು ಹುಡುಕಿಕೊಂಡು ಬರುತ್ತಿವೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿಗಳೂ ಆದ ಕುಮಾರಸ್ವಾಮಿ ಅವರಿಗೆ ಈಗ ಕೈ ತುಂಬ ಕೆಲಸ. ಪುರುಸೊತ್ತು ಇಲ್ಲದೇ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ.
ಬೃಹತ್ ಕೈಗಾರಿಕೆ ಸಚಿವಾಲಯದ ನೇತೃತ್ವದಲ್ಲಿ ನಿರ್ಮಾಣ & ಮೂಲಸೌಕರ್ಯ ಉಪಕರಣಗಳಿಗಾಗಿ ಉತ್ಪಾದನಾ ಪರಿಸರ ವ್ಯವಸ್ಥೆ ಹೆಚ್ಚಿಸುವ ಯೋಜನೆ (CIE)ಅನುಷ್ಠಾನಕ್ಕೆ ಬರಲಿದೆ .
ಇದು ಕೇವಲ ಮತ್ತೊಂದು ನೀತಿಯಲ್ಲ, ಅಥವಾ ಘೋಷಣೆಯೂ ಅಲ್ಲ. ಇದು ಭಾರತದ ಕೈಗಾರಿಕೆ ಕ್ಷೇತ್ರ ಬೆನ್ನೆಲುಬನ್ನು ಸಶಕ್ತಗೊಳಿಸುವ ಮತ್ತು ಆತ್ಮನಿರ್ಭರ ಭಾರತದತ್ತ ಪ್ರಯಾಣವನ್ನು ವೇಗಗೊಳಿಸುವ ಕಾರ್ಯತಂತ್ರದ ವ್ಯೂಹಾತ್ಮಕ ಹೆಜ್ಜೆ.
ಇಂದು ಭಾರತವು ಹೆದ್ದಾರಿಗಳು, ರೇಲ್ವೆ, ಮಹಾನಗರಗಳು, ಸ್ಮಾರ್ಟ್ ಸಿಟಿಗಳು, ಗಣಿ ಯೋಜನೆಗಳು, ಬಂದರು ಮತ್ತು ಇಂಧನ ಕಾರಿಡಾರ್‌ಗಳ ಮೂಲಸೌಕರ್ಯದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ. ಅಂಥ ಪ್ರತೀ ಯೋಜನೆ ಹಿಂದೆಯೂ ಭಾರೀ ಯಂತ್ರೋಪಕರಣಗಳು, ಸುರಂಗಗಳನ್ನು ಕೊರೆಯುವ ಯಂತ್ರಗಳು, ಕ್ರೇನ್‌ಗಳು, ಕಾಂಕ್ರೀಟ್ ಪೇವರ್‌ಗಳು, ಮಣ್ಣು ತೆಗೆಯುವ ಯಂತ್ರಗಳು ಮತ್ತು ಸುಧಾರಿತ ಎಂಜಿನಿಯರಿಂಗ್ ವ್ಯವಸ್ಥೆಗಳು ಇವೆ. ಅನೇಕ ದಶಕಗಳಿಂದ ಇಂಥ ಉನ್ನತ ಮಟ್ಟದ ಉಪಕರಣಗಳಲ್ಲಿ ಹೆಚ್ಚಿನದನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.
CIE ಯೋಜನೆಯು ಈ ವಾಸ್ತವವನ್ನು ಬದಲಿಸುವ ಬಹುದೊಡ್ಡ ಗುರಿ ಹೊಂದಿದೆ.
/filters:format(webp)/newsfirstlive-kannada/media/media_files/2026/02/07/hdk-and-modi-meeting-4-2026-02-07-12-48-07.jpg)
**
ಈ ದೂರದೃಷ್ಟಿಯ, ಪರಿವರ್ತನಾತ್ಮಕ ಉಪಕ್ರಮದ ಅಡಿಯಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯವು ಈ ಕೆಳಗಿನ ಅಂಶಗಳಿಗೆ ಸಮಗ್ರ ಚೌಕಟ್ಟನ್ನು ಪರಿಚಯಿಸಿದೆ. ಅವು ಹೀಗಿವೆ;
*ದೇಶೀಯ ಮೌಲ್ಯವರ್ಧನೆ ಸುಧಾರಿಸುವುದು
*ಆಮದು ಅವಲಂಬನೆ ತಗ್ಗಿಸುವುದು
*ಸ್ಥಳೀಯ ಉತ್ಪಾದನೆ ಬಲಪಡಿಸುವುದು
*ಜಾಗತಿಕವಾಗಿ ಸ್ಪರ್ಧಾತ್ಮಕ ಸಾಮರ್ಥ್ಯಗಳನ್ನು ನಿರ್ಮಿಸುವುದು
**
ಈ ಯೋಜನೆಯು ಈಗಾಗಲೇ ಕಾರ್ಯಾಚರಿಸುತ್ತಿರುವ, ಉದಯೋನ್ಮುಖ, ಕ್ರಿಯಾಶೀಲ ಮೂಲ ಉಪಕರಣಗಳನ್ನು ತಯಾರಿಸುವ ಕಂಪನಿಗಳು (OEM-Original equipment manufacturer) ಮತ್ತು ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಮಿಸುವ ಮತ್ತು ಹೂಡಿಕೆ ಮಾಡಲು ಸಿದ್ಧರಿರುವ ತಯಾರಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.
**
ಈ ಯೋಜನೆಯ ಪ್ರಮುಖ ಲಕ್ಷಣವೆಂದರೆ ಇದು ಸಂಪೂರ್ಣವಾಗಿ ಕಾರ್ಯಕ್ಷಮತೆ ಆಧರಿತ ವಿಧಾನವಾಗಿದೆ.
ಫಲಾನುಭವಿಗಳು ಇವುಗಳಿಗೆ ಸಂಬಂಧಿಸಿದ ಪ್ರೋತ್ಸಾಹಕ, ಉತ್ತೇಜಕ ಸೌಲಭ್ಯ ಪಡೆಯುವರು.
ದೇಶೀಯ ಹೂಡಿಕೆಗೆ ಉತ್ತೇಜನ ದೊರೆಯುತ್ತದೆ
ದೇಶೀಯ ಮೌಲ್ಯವರ್ಧನೆ ಮತ್ತು ಉದ್ದೇಶಿತ ಉಪಕರಣಗಳು ಮತ್ತು ಘಟಕಗಳ ನಿರ್ಧರಿಸಿದ ಮಾರಾಟ ಗುರಿಗಳನ್ನು ಸಾಧಿಸುವುದು
ಇದು ನಿಜವಾದ ಉತ್ಪಾದನಾ ಬೆಳವಣಿಗೆ ಮತ್ತು ಸ್ಪಷ್ಟ ಫಲಿತಾಂಶಗಳ ಮೂಲಕ ಪ್ರೋತ್ಸಾಹಕಗಳನ್ನು ಗಳಿಸುವುದನ್ನು ಖಚಿತಪಡಿಸುತ್ತದೆ
*ಯೋಜನೆಯ ಒಟ್ಟು ಅವಧಿ 7 ವರ್ಷಗಳು.
* ಮೊದಲ 2 ವರ್ಷ ಸಾಮರ್ಥ್ಯ ವೃದ್ಧಿಗೆ ಮೀಸಲು
* ಮುಂದಿನ ೫ ವರ್ಷ ನೈಜ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರೋತ್ಸಾಹಕ ಬೆಂಬಲದ ಮೇಲೆ ಕೇಂದ್ರೀಕೃತ ಗಮನ
ಈ ದೀರ್ಘಕಾಲೀನ ದೃಷ್ಟಿಕೋನವು ಉದ್ಯಮಕ್ಕೆ ಯೋಜನೆ, ಹೂಡಿಕೆ ಮತ್ತು ನಾವೀನ್ಯತೆಗಾಗಿ ವಿಶ್ವಾಸ, ಶಕ್ತಿಯನ್ನು ನೀಡುತ್ತದೆ
**
ಗುರಿ, ಉದ್ದೇಶ ಸ್ಪಷ್ಟ; CIE ಯೋಜನೆ ಏನು ಮಾಡುತ್ತದೆ?
* ಭಾರತೀಯ ಮತ್ತು ಜಾಗತಿಕ ಕಂಪನಿಗಳಿಂದ ಪ್ರಮುಖ ಹೂಡಿಕೆಗಳನ್ನು ಆಕರ್ಷಿಸುವುದು
* ಬಲವಾದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬೆಳೆಸುವುದು
* ವೆಚ್ಚದ ಅನಾನುಕೂಲಗಳನ್ನು ನಿವಾರಿಸುವುದು
* ರಫ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು
* ಕೌಶಲ್ಯಪೂರ್ಣ ಉದ್ಯೋಗಾವಕಾಶ ಸೃಷ್ಟಿಸುವುದು
ಇದು ತಯಾರಕರಿಗೆ ಮೌಲ್ಯಯುತ ಸರಪಳಿಯನ್ನು ಮೇಲಕ್ಕೆತ್ತಲು ಮತ್ತು ಜೋಡಣೆ ಮಾಡುವವರಲ್ಲದೆ ತಂತ್ರಜ್ಞಾನ ದಿಗ್ಗಜರಾಗಲು ಅವಕಾಶ ನೀಡುತ್ತದೆ.
**
ಈ ಯೋಜನೆಯ ದೊಡ್ಡ ಶಕ್ತಿ ಎಂದರೆ ಭಾರತದ ಮೂಲಸೌಕರ್ಯ ಪರಿಸರ ವ್ಯವಸ್ಥೆಯ ಮೇಲೆ ಅಗಾಧ ಪ್ರಭಾವ ಬೀರುತ್ತದೆ; ಅದು ಹೇಗೆ?
* ಸುರಂಗ ಕೊರೆಯುವ ಯಂತ್ರಗಳು
* ಹೆಚ್ಚಿನ ಸಾಮರ್ಥ್ಯದ ಕ್ರೇನ್‌ಗಳು
* ಕಾಂಕ್ರೀಟ್ ಪೇವರ್‌ಗಳು
* ಸುಧಾರಿತ ಅರ್ಥ ಮೂವರ್ ಯಂತ್ರೋಪಕರಣಗಳು
ರಸ್ತೆಗಳು, ರೈಲ್ವೆ, ನಗರಾಭಿವೃದ್ಧಿ, ಗಣಿಗಾರಿಕೆ ಮತ್ತು ಇಂಧನ ವಲಯಗಳಲ್ಲಿನ ಬೃಹತ್ ಯೋಜನೆಗಳಿಗೆ ಇವು ಅತ್ಯಗತ್ಯವಾಗಿರುತ್ತವೆ
ಈ ಯೋಜನೆಯ ಮೂಲಕ ಭಾರತವು ತನ್ನ ಮೂಲಸೌಕರ್ಯವನ್ನು ಭಾರತೀಯ ನಿರ್ಮಿತ ಯಂತ್ರಗಳೊಂದಿಗೆ ನಿರ್ಮಿಸುತ್ತದೆ. ಇದು ಸಂಪೂರ್ಣ ಸ್ವದೇಶಿ, ಆತ್ಮನಿರ್ಭರತೆಯ ಸಾಕ್ಷಾತ್ಕಾರ
ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ವಿದೇಶಿ ತಯಾರಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ
**
ಇನ್ನಿಲ್ಲ ಆಮದು, ಮುಂದೆಲ್ಲಾ ಸ್ವದೇಶಿ
ಆತ್ಮನಿರ್ಭರತೆಯೊಂದಿಗೆ ವಿಕಸಿತ ಭಾರತದತ್ತ ದೊಡ್ಡ ಹೆಜ್ಜೆ
ಮೋದಿ ಅವರ ಕಸನು; ಹೆಚ್ದಿಕೆ ಅವರಿಂದ ನನಸು
ಮೋದಿ ವಿಕಾಸ ತತ್ವಕ್ಕೆ ಹೆಚ್ದಿಕೆ ಹೆಗಲು
ಅನೇಕ ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಕನಸಿಗೆ ಜೀವ ಕೊಟ್ಟ ನರೇಂದ್ರ ಮೋದಿ
**
ಈ ಯೋಜನೆಯು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಉದಾಹರಣೆಗೆ:
* ಎಂಜಿನ್‌ಗಳು
* ಹೈಡ್ರಾಲಿಕ್ ವ್ಯವಸ್ಥೆಗಳು
* ನಿಖರವಾದ ಭಾಗಗಳು
* ಸುಧಾರಿತ ನಿಯಂತ್ರಣ ವ್ಯವಸ್ಥೆಗಳು
ಈ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ರಾಷ್ಟ್ರೀಯ ಆರ್ಥಿಕ ಭದ್ರತೆ ಯನ್ನು ಖಾತ್ರಿಪಡಿಸುತ್ತದೆ.
**
CIE ಯೋಜನೆ ಸಹಯೋಗಕ್ಕೆ ವಿಶೇಷ ಒತ್ತು ನೀಡುತ್ತದೆ
ಇದು ಈ ಕೆಳಗಿನವುಗಳ ನಡುವಿನ ಪಾಲುದಾರಿಕೆಯನ್ನು ಪ್ರೋತ್ಸಾಹಿಸುತ್ತದೆ
* ದೊಡ್ಡ OEMಗಳು
* ಶ್ರೇಣಿ-1 ಪೂರೈಕೆದಾರರು ಮತ್ತು MSMEಗಳು
ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಸಂಯೋಜಿಸುವುದರಿಂದ ಪರಿಸರ ವ್ಯವಸ್ಥೆಯಾದ್ಯಂತ ನಾವೀನ್ಯತೆ, ತಂತ್ರಜ್ಞಾನ ವರ್ಗಾವಣೆ ಮತ್ತು ಸ್ಪರ್ಧಾತ್ಮಕತೆಯನ್ನು ಬೆಳೆಸುತ್ತದೆ
**
ಈ ಯೋಜನೆಯ ಅಡಿಯಲ್ಲಿ ಹೊಸ ಹೂಡಿಕೆಗಳು ಈ ಕೆಳಗಿನ ವಿಭಾಗಗಳ ಮೇಲೆ ಕೇಂದ್ರೀಕೃತ ಆಗಿರುತ್ತವೆ
* ದೊಡ್ಡ ಪ್ರಮಾಣದ ಉತ್ಪಾದನಾ ವಿಸ್ತರಣೆ
* ತಂತ್ರಜ್ಞಾನ ನವೀಕರಣ
* ಆಧುನಿಕ ಉತ್ಪಾದನಾ ಸೌಲಭ್ಯಗಳು
* ಕೌಶಲ್ಯ-ಆಧರಿತ ಕಾರ್ಯಪಡೆಯ ಅಭಿವೃದ್ಧಿ
2030ರ ವೇಳೆಗೆ ಈ ಯೋಜನೆಯು ಸಂಪೂರ್ಣ CIE ಮೌಲ್ಯ ಸರಪಳಿಯಲ್ಲಿ ಗಮನಾರ್ಹ ನೇರ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಂದ ಹಿಡಿದು ನಿರ್ವಾಹಕರು ಮತ್ತು ವಿನ್ಯಾಸಕರವರೆಗೆ - ದೇಶಾದ್ಯಂತ ಹೊಸ ಅವಕಾಶಗಳು ಹೊರಹೊಮ್ಮುತ್ತವೆ
ಈ ಯೋಜನೆ ಅಡಿಯಲ್ಲಿ ಮತ್ತೊಂದು ಹೆಗ್ಗುರುತಿನ ಉಪಕ್ರಮವೆಂದರೆ ಭಾರತದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳಿಗಾಗಿ ವಿಶ್ವ ದರ್ಜೆಯ ಪರೀಕ್ಷಾ ಕೇಂದ್ರ ಸ್ಥಾಪಿಸುವುದು
**
ಕುಮಾರಸ್ವಾಮಿ ಅವರ ಬದ್ಧ ನಾಯಕತ್ವದೊಂದಿಗೆ ಈ ಯೋಜನೆಯು ಭಾರತವನ್ನು ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಪರಿವರ್ತಿಸುತ್ತದೆ.
ಮೇಕ್ ಇನ್ ಇಂಡಿಯಾ. ಇದು ಘೋಷಣೆ ಅಷ್ಟೇ ಅಲ್ಲ; ಭಾರತದ ಶಕ್ತಿ, ಸಾಮರ್ಥ್ಯದ ದ್ಯೋತಕ
ವಿಕಸಿತ ಭಾರತ ಸಾಕಾರಕ್ಕೆ ದಿಟ್ಟ ಹೆಜ್ಜೆ. ವಿಕಸಿತ ಭಾರತ ಎಂದರೆ ಅದು ಮೋದಿ ಭಾರತ!! ಸ್ವಾವಲಂಭಿ, ಸಶಕ್ತ ಭಾರತ.
/filters:format(webp)/newsfirstlive-kannada/media/media_files/2026/02/07/hdk-and-modi-meeting-2-2026-02-07-12-44-24.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us