newsfirstkannada.com

‘ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್​​, ಲಕ್ನೋ ಬಿಟ್ಟು RCB ಸೇರೋ ಆಸೆ ನನಗೆ’- ನವೀನ್​ ಹಲ್​ ಉಕ್​!

Share :

Published May 26, 2023 at 2:23pm

Update May 26, 2023 at 6:13pm

    ಲಕ್ನೋ-ಆರ್​ಸಿಬಿ ಪಂದ್ಯದಲ್ಲಿ ಕೊಹ್ಲಿಯನ್ನು ಕೆಣಕಿದ್ದ ನವೀನ್

    ಈ ಗಲಾಟೆ ಬಳಿಕ ನವೀನ್​ನನ್ನು​ ಪದೇ ಪದೇ ಕೆಣಕುತ್ತಿದ್ದಾರೆ ಕೊಹ್ಲಿ ಫ್ಯಾನ್ಸ್

    ಎಲಿಮಿನೇಟರ್ ಪಂದ್ಯದಲ್ಲಿ ಸೋಲ್ತಿದ್ದಂತೆ ಟ್ರೋಲ್​ಗೆ ಒಳಗಾದ ನವೀನ್

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್​ ಸ್ಟಾರ್​​ ಕ್ರಿಕೆಟರ್​​ ವಿರಾಟ್​ ಕೊಹ್ಲಿಗೆ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ವೇಗಿ ನವೀನ್​​ ಉಲ್​ ಹಕ್​​ ಕ್ಷಮೆ ಕೇಳಿ ಟ್ವೀಟ್​ ಮಾಡಿದ್ದರು. ಈ ಬೆನ್ನಲ್ಲೀಗ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್​​ ಎಂದು ಟ್ವೀಟ್​ ಮಾಡಿ ತನ್ನ ತಪ್ಪು ತಿದ್ದಿಕೊಳ್ಳಲು ನವೀನ್​​ ಉಲ್​ ಹಕ್​​ ಯತ್ನಿಸುತ್ತಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರೋ ನವೀನ್​​ ಉಲ್​ ಹಕ್​​, ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್. ನನಗೆ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಯಾವಾಗಾದ್ರೂ ಆಡುವ ಆಸೆ ಇದೆ ಎಂದು ಬರೆದುಕೊಂಡಿದ್ದಾರೆ.

ನಾನು ಕೊಹ್ಲಿಯ ದೊಡ್ಡ ಅಭಿಮಾನಿ. ನನ್ನ ರೂಮ್​​ ತುಂಬಾ ಕೊಹ್ಲಿ ಪೋಸ್ಟರ್​ಗಳು ಇವೆ. ನನ್ನ ಬಾಲ್ಯದಿಂದಲೂ ಕೊಹ್ಲಿಯನ್ನು ಕಂಡರೆ ಇಷ್ಟ, ನನಗೆ ಸ್ಪೂರ್ತಿ. ಲಕ್ನೋ ಸೂಪರ್ ಜೈಂಟ್ಸ್ ತಂಡ ಬಿಟ್ಟು ವಿರಾಟ್​​ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಆರ್​ಸಿಬಿ ಪರ ಆಡಲು ಇಚ್ಛಿಸುತ್ತೇನೆ ಎಂದಿದ್ದಾರೆ. ಈ ಟ್ವೀಟ್​ಯೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇನ್ನೊಂದೆಡೆ ಇದು ನಕಲಿ ಖಾತೆಯಿಂದ ಹೊರಬಿದ್ದ ಟ್ವೀಟ್​​ ಆಗಿದ್ದು, ನವೀನ್​​ ಉಲ್​ ಹಕ್​ ಅಧಿಕೃತ ಖಾತೆ ಬೇರೆಯೇ ಇದೆ. ಯಾರೋ ನವೀನ್​​ ಉಲ್​ ಹಕ್​ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕ್ಷಮಾಪಣೆ ಕೇಳುವ ಟ್ವೀಟ್​ ಹಂಚಿಕೊಂಡಿದ್ದಾರೆ. ಸದ್ಯ ಈ ಟ್ವೀಟ್​ ಕೂಡ ವೈರಲ್​ ಆಗುತ್ತಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್​​, ಲಕ್ನೋ ಬಿಟ್ಟು RCB ಸೇರೋ ಆಸೆ ನನಗೆ’- ನವೀನ್​ ಹಲ್​ ಉಕ್​!

https://newsfirstlive.com/wp-content/uploads/2023/05/Naveen_Kohli-1.jpg

Load More