newsfirstkannada.com

×

ವಿರಾಟ್ ಕೊಹ್ಲಿ- ನವೀನ್​ IPL ಜಗಳ ಇನ್ನೂ ನಿಂತಿಲ್ಲ.. ಅಫ್ಘಾನ್ ಪ್ಲೇಯರ್ ಮಾಡಿರೋ ಹೊಸ ಕಿರಿಕ್ ಏನು?

Share :

Published July 3, 2023 at 3:54pm

Update July 3, 2023 at 3:49pm

    2 ತಿಂಗಳು ಕಳೆದರೂ ‘ಅಹಂಕಾರಿ’ ಪೋಸ್ಟ್​ ಮಾಡ್ತಿರುವ ನವೀನ್

    ನವೀನ್​ ಶೇರ್​ ಮಾಡಿರುವ ಪೋಸ್ಟ್​ನಲ್ಲಿ ಏನೇನ್‌ ಇದೆ ಗೊತ್ತಾ.?

    ವಿರಾಟ್​ ಕೊಹ್ಲಿ ವಿರುದ್ಧ ದ್ವೇಷ ಸಾಧಿಸುತ್ತಿರುವ ಅಫ್ಘಾನ್ ಪ್ಲೇಯರ್

ಐಪಿಎಲ್​​ ಮುಗಿದು ಒಂದೂವರೆ ತಿಂಗಳು ಕಳೆಯಿತು. ಆದ್ರೆ, ನವೀನ್ ಉಲ್​ ಹಕ್​ನ​ ​​​​​​​​​​​ಕಿರಿಕ್ ಮಾತ್ರ ಮುಗಿದಿಲ್ಲ. ಪರೋಕ್ಷವಾಗಿ ಕಿಂಗ್ ಕೊಹ್ಲಿಯನ್ನ ವ್ಯಂಗ್ಯವಾಡೋದ್ರಲ್ಲೇ ವೇಗಿ ಕಾಲ ಕಳೆಯುತ್ತಿದ್ದಾರೆ. ಇದೀಗ ಮತ್ತೆ ಕೊಹ್ಲಿ ಹಾಗೂ ಕೊಹ್ಲಿಯ ಅಭಿಮಾನಿಗಳನ್ನ ಕೆಣಕುತ್ತಿದ್ದಾನೆ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳೋ ಕೆಲಸ ಮಾಡಿದ್ದಾರೆ.

ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಗೆದ್ದು ಚಾಂಪಿಯನ್​ ಆದ ಫೈನಲ್​ ಪಂದ್ಯಕ್ಕಿಂತ, ಅತಿ ಹೆಚ್ಚು ಸೌಂಡ್​ ಮಾಡಿದ್ದು, ಆರ್​​ಸಿಬಿ VS ಲಕ್ನೋ ಫೈಟ್​.! ಇಂಡೋ VS ಪಾಕ್​ ಪಂದ್ಯಗಳ ನಡುವಿನ ಕಾವು ಹೇಗಿರುತ್ತೋ, ಅಂತದ್ದೇ ಕಾವು ಈ ಪಂದ್ಯಕ್ಕೆ ಬಂದಿತ್ತು. ಅದ್ರಲ್ಲೂ, ಕಿಂಗ್​ ಕೊಹ್ಲಿ VS ಕಿರಿಕ್​ ನವೀನ್​ ಉಲ್​ ಹಕ್​ ನಡುವಿನ ಜಗಳ ಹೈವೋಲ್ಟೆಜ್​ ಪಂದ್ಯದ ಕಿಕ್​ ಹೆಚ್ಚಿಸ್ತು.

ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರು ಅತಿರೇಕದ ವರ್ತನೆ ಮೆರೆದಿದ್ರು. ಇದಕ್ಕೆ ಅವರದೇ ಅಂಗಳದಲ್ಲಿ ಲಕ್ನೋ ಪಡೆಗೆ ಸರಿಯಾಗಿ ಕಿಂಗ್​ ಕೊಹ್ಲಿ ತಿರುಗೇಟು ಕೊಟ್ಟಿದ್ರು. ಅಂದು ಕೊಹ್ಲಿ ಕೊಟ್ಟ ಟಕ್ಕರ್​ಗೆ ಲಕ್ನೋ ಪಾಳಯ ಕಂಗೆಟ್ಟು ಹೋಗಿತ್ತು. ದಿಕ್ಕೆಟ್ಟ ಲಕ್ನೋ ಆಟಗಾರರು ಮಾಡಿದ್ದು, ಮತ್ತದೇ ಅತಿರೇಕದ ಕೆಲಸ.. ನವೀನ್​ ಉಲ್​ ಹಕ್​ ಕಾಲು ಕರೆದುಕೊಂಡು ಬಂದ್ರೆ, ಕೋಚ್​ ಗಂಭೀರ್​ ಬಂಬಲಕ್ಕೆ ನಿಂತಿದ್ರು..

ನಿಗೂಢ ಅರ್ಥದಲ್ಲಿ ಇನ್​​ಸ್ಟಾದಲ್ಲಿ ವಿಡಿಯೋ ಶೇರ್​..!

ಆನ್​ಫೀಲ್ಡ್​ ಗಲಾಟೆ ಮುಗಿದು 2 ತಿಂಗಳೇ ಕಳೆದಿವೆ. ಆದ್ರೆ, ಆಫ್​ ಫೀಲ್ಡ್​ನಲ್ಲಿ ಮಾತ್ರ ವಾರ್​ ನಡೀತಾನೆ ಇದೆ. ಆ ಘಟನೆ ನಡೆದ ದಿನದಿಂದ ಸೋಷಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್​ ಹಾಕಿ ನವೀನ್​, ಕೊಹ್ಲಿಯನ್ನ ಕೆಣಕ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ವಿಡಿಯೋವೊಂದನ್ನ ಪೋಸ್ಟ್​ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವೀನ್​ ಉಲ್​ ಹಕ್​ ಶೇರ್​​ ಮಾಡಿರುವ ಹೊಸ ಇನ್ಸ್​​ಸ್ಟಾ ಸ್ಟೋರಿಯಲ್ಲಿ ಕತೆ ಹೇಳಿದ್ದಾರೆ. ಆ ಕತೆ ಪರೋಕ್ಷವಾಗಿ ಕೊಹ್ಲಿ ಹಾಗೂ ಫ್ಯಾನ್ಸ್​ನ ಗುರಿಯಾಗಿಸಿದಂತಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಸಿಂಹ, ಹುಲಿ ಹಾಗೂ ಕತ್ತೆಯ ಕಥೆ ನೋಡಿ ಫ್ಯಾನ್ಸ್​ ಗರಂ ಆಗಿದ್ದಾರೆ.

ಪೋಸ್ಟ್​ ಮಾಡಿರೋ ವಿಡಿಯೋದಲ್ಲಿ ಏನಿದೆ..?

‘ಕತ್ತೆಯೊಂದು ಹುಲಿಗೆ ಹುಲ್ಲು ನೀಲಿಯಾಗಿದೆ ಎಂದು ಹೇಳುತ್ತೆ. ಇದಕ್ಕೆ ಉತ್ತರಿಸಿದ ಹುಲಿ ಇಲ್ಲ, ಹುಲ್ಲು ಹಸಿರಿದೆ ಎನ್ನುತ್ತೆ. ಇಬ್ಬರ ನಡುವಿನ ವಾದ ಮತ್ತಷ್ಟು ಜೋರಾಗಿ, ಇಬ್ಬರೂ ಕಾಡಿನ ರಾಜನಾದ ಸಿಂಹದ ಬಳಿ ಹೋಗುತ್ತವೆ. ಕಾಡಿನ ರಾಜನ ಮುಂದೆಯೂ ಕತ್ತೆ, ಮೃಗರಾಜ ಹುಲ್ಲು ನೀಲಿಯಲ್ಲವೇ ಎಂದು ಪ್ರಶ್ನಿಸಿತ್ತೆ. ಇದಕ್ಕೆ ಕಾಡಿನ ರಾಜ ಸಿಂಹ ಹೌದು ಎಂದು ಉತ್ತರಿಸುತ್ತದೆ. ಇದನ್ನ ಕೇಳಿದ ಕತ್ತೆ, ರಾಜ ಈ ಹುಲಿ ಹುಲ್ಲನ್ನ ಹಸಿರು ಎಂದು ವಾದಿಸುತ್ತದೆ ಎಂದು ದೂರು ಕೊಡುತ್ತೆ. ಜೊತೆಗೆ ಹುಲಿ ನನ್ನ ಮಾತು ಕೇಳುತ್ತಿಲ್ಲ. ಶಿಕ್ಷೆ ಕೊಡಿ ಎಂದು ಕೇಳುತ್ತದೆ. ಇದಕ್ಕೆ ಪ್ರತಿಯಾಗಿ ಸಿಂಹವು, ಹುಲಿಗೆ 5 ವರ್ಷಗಳ ಕಾಲ ಮೌನವಾಗಿರಬೇಕೆಂದು ಆದೇಶಿಸುತ್ತದೆ. ಇದರೊಂದಿಗೆ ಕತ್ತೆ ಸಂತಸದಿಂದ ಅಲ್ಲಿಂದ ತೆರಳುತ್ತೆ. ಬಳಿಕ ಹುಲಿ, ನಾನೇನು ತಪ್ಪು ಮಾಡಿದೆ..? ಹುಲ್ಲು ಹಸಿರಾಗಿದೆ ಅಲ್ಲವೇ ಎಂದು ಮತ್ತೆ ಸಿಂಹವನ್ನ ಕೇಳುತ್ತದೆ. ಆಗ ಸಿಂಹ ಹುಲ್ಲು ಹಸಿರು ಅದಕ್ಕೇ ಅಲ್ಲವೇ ನಿನಗೆ ಶಿಕ್ಷೆ ಎಂದು ಉತ್ತರಿಸುತ್ತದೆ. ಯಾಕೆಂದರೆ ನಿನ್ನಂತಹ ಬುದ್ಧಿವಂತ ಪ್ರಾಣಿ ಆ ಬುದ್ಧಿಹೀನ ಕತ್ತೆಯೊಂದಿಗೆ ವಾದ ಮಾಡಿ, ನನ್ನ ಬಳಿಗೆ ಬಂದು ತೀರ್ಪು ನೀಡುವಂತೆ ಕೇಳಿದರೆ ಹೇಗೆ ಎಂದು ಸಿಂಹ ಪ್ರಶ್ನೆ ಮಾಡುತ್ತದೆ.’

ನವೀನ್​ ಉಲ್​ ಹಕ್​ ಹಾಕಿರುವ ವಿಡಿಯೋ ಪೋಸ್ಟ್​​ನ ಅರ್ಥ ಇದು. ಇದೇ ನೋಡಿ ಸದ್ಯ ಕೊಹ್ಲಿ ಅಭಿಮಾನಿಗಳ ವಲಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಇದಿಷ್ಟೇ ಅಲ್ಲ. ಆ ಬಳಿಕ ಮೂರ್ಖರೊಂದಿಗೆ ವಾದಿಸುವುದು ಸಮಯ ವ್ಯರ್ಥ. ಎಷ್ಟೇ ಪುರಾವೆಗಳು ಮುಂದಿಟ್ಟರೂ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲದವರಿದ್ದಾರೆ. ಹೆಮ್ಮೆ, ದ್ವೇಷ, EGOನಿಂದಾಗಿ ಕುರುಡರಾಗಿದ್ದಾರೆ ಎಂದೆಲ್ಲಾ ಇದರಲ್ಲಿ ಬರುತ್ತೆ.

ಕೊಹ್ಲಿ ಮೂರ್ಖನಾ..? ಫ್ಯಾನ್ಸ್​ ಕತ್ತೆನಾ..?

ವಿರಾಟ್​ ಕೊಹ್ಲಿ ಜೊತೆಗಿನ ಕಿರಿಕ್ ಆದ ಬಳಿಕ ಕೊಹ್ಲಿ ಅಭಿಮಾನಿಗಳು, ನವೀನ್ ಉಲ್​ ಹಕ್​ರನ್ನ ಸಿಕ್ಕಾಪಟ್ಟೆ ಕಾಲೆಳೆದ್ರು. ಈಗಲೂ ಸೋಷಿಯಲ್​ ಮೀಡಿಯಾಗಳಲ್ಲಿ ಅಣಕಿಸಿ ಪೋಸ್ಟ್​ ಹಾಕ್ತಿದ್ದಾರೆ. ಎಲ್ಲೇ ಹೋದ್ರೂ ಕೊಹ್ಲಿ ಕೊಹ್ಲಿ ಎಂದು ಕೂಗಿ ನವೀನ್​ ಉಲ್​ ಹಕ್​​ರನ್ನ ಕಾಡಿದ್ದಾರೆ. ಹೀಗಾಗಿ ಪರೋಕ್ಷ ವಿರಾಟ್​ ಕೊಹ್ಲಿ ಆ್ಯಂಡ್ ಅಭಿಮಾನಿಗಳಿಗೆ ನವೀನ್​ ಈ ಪೋಸ್ಟ್​ ಮಾಡಿದ್ದಾರೆ ಅಂತಾ ಚರ್ಚೆ ನಡೀತಾಯಿದೆ.

ಐಪಿಎಲ್​ನಲ್ಲಿ ಶುರುವಾದ ನವೀನ್​ ಉಲ್​ ಹಕ್​ -ವಿರಾಟ್​ ಕೊಹ್ಲಿ ನಡುವಿನ ಫೈಟ್​ ಹೆಚ್ಚಾಗುತ್ತಲೆ ಇರುತ್ತೆಯೇ ಹೊರತು.. ಕಡಿಮೆಯಾಗ್ತಿಲ್ಲ.. ಮುಂದೆ ವಿಶ್ವಕಪ್​ ಮಹಾಸಮರ ಬೇರೆ ಇದೆ. ಅಲ್ಲಿಯೂ ಇಂಡೋ -ಅಫ್ಘನ್​ ಮುಖಾಮುಖಿಯಾದಾಗ ಇದು ಮುಂದೆವರೆದ್ರೂ ಅಚ್ಚರಿಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

View this post on Instagram

A post shared by Naveen ul haq Murid (@naveen_ul_haq)

ವಿರಾಟ್ ಕೊಹ್ಲಿ- ನವೀನ್​ IPL ಜಗಳ ಇನ್ನೂ ನಿಂತಿಲ್ಲ.. ಅಫ್ಘಾನ್ ಪ್ಲೇಯರ್ ಮಾಡಿರೋ ಹೊಸ ಕಿರಿಕ್ ಏನು?

https://newsfirstlive.com/wp-content/uploads/2023/07/NAVEEN_VIRAT.jpg

Load More