newsfirstkannada.com

ಟಿಪ್ಪು ಆಯ್ತು.. ಈಗ ಔರಂಗಜೇಬ್ ಸರದಿ.. ಮೊಘಲ್ ಚಕ್ರವರ್ತಿ ಫೋಟೋ ವಾಟ್ಸಪ್​​ ಡಿಪಿ ಮಾಡಿದ್ದಕ್ಕೆ ವ್ಯಕ್ತಿ ಅರೆಸ್ಟ್​​!

Share :

12-06-2023

    ನವ ಮುಂಬೈ ಪೊಲೀಸರಿಂದ ಬಂಧನ

    IPC 298, 153-A ಅಡಿಯಲ್ಲಿ ಕೇಸ್

    ಮಹಾರಾಷ್ಟ್ರದಲ್ಲಿ ಏನಾಗ್ತಿದೆ ಗೊತ್ತಾ..?

ಮೊಘಲ್ ಸಾಮ್ರಾಜ್ಯದ ಔರಂಗಜೇಬನ ಫೋಟೋವನ್ನು ವಾಟ್ಸ್​​ಆ್ಯಪ್ ಡಿಪಿ ( Whatsapp profile picture) ಹಾಕಿಕೊಂಡಿದ ವ್ಯಕ್ತಿ ವಿರುದ್ಧ ನವ ಮುಂಬೈ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಮಾತ್ರವಲ್ಲ, ಹಿಂದೂ ಸಂಘಟನೆ ನೀಡಿದ ದೂರಿನ ಆಧಾರದ ಮೇಲೆ ಕೇಸ್​ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ವಶಿ ಬಂಧಿತ ವ್ಯಕ್ತಿ. ವಶಿ ಮೊಬೈಲ್ ಸರ್ವೀಸ್ ಪ್ರವೈಡರ್ ಆಗಿದ್ದ ಎಂದು ತಿಳಿದುಬಂದಿದೆ. ಬಂಧನಕ್ಕೂ ಮೊದಲು ಈತನಿಗೆ ಪೊಲೀಸರು ನೋಟಿಸ್ ನೀಡಿದ್ದರು ಎನ್ನಲಾಗಿದೆ. ಔರಂಗಜೇಬನ ಫೋಟೋವನ್ನು ಹಾಕಿಕೊಂಡಿರೋದನ್ನು ಹಿಂದೂ ಸಂಘಟನೆ ಗಮನಿಸಿ, ಸ್ಕ್ರೀನ್​​ ಶಾಟ್​​ ತೆಗೆದು ಪೊಲೀಸರಿಗೆ ಲಿಖಿತ ದೂರು ನೀಡಿತ್ತು. ಅದರಂತೆ ಪೊಲೀಸರು, ಬಂಧಿತನ ವಿರುದ್ಧ ಐಪಿಸಿ ಸೆಕ್ಷನ್ 298, 153-A ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು.

ಯಾಕೆ ಬಂಧಿಸಿದ್ದಾರೆ..?
ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಮಹಾರಾಷ್ಟ್ರದ ರಾಜ್ಯಾದ್ಯಂತ ಇತ್ತೀಚೆಗೆ ಕೋಮು ಗಲಭೆಗಳು ಹೆಚ್ಚಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ್ ಹಾಗೂ ಔರಂಗ್​ಜೇಬ್​ನ ವೈಭವೀಕರಣ ವಿಚಾರದಲ್ಲಿ ಗಲಾಟೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಪ್ಪು ಆಯ್ತು.. ಈಗ ಔರಂಗಜೇಬ್ ಸರದಿ.. ಮೊಘಲ್ ಚಕ್ರವರ್ತಿ ಫೋಟೋ ವಾಟ್ಸಪ್​​ ಡಿಪಿ ಮಾಡಿದ್ದಕ್ಕೆ ವ್ಯಕ್ತಿ ಅರೆಸ್ಟ್​​!

https://newsfirstlive.com/wp-content/uploads/2023/06/Mughal-emperor.jpg

Load More