/newsfirstlive-kannada/media/post_attachments/wp-content/uploads/2024/11/Sidhu-850-Crore-Notice.jpg)
ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕೆಲವು ದಿನಗಳ ಹಿಂದೆ ಸಾಂಪ್ರಾದಾಯಿ ಔಷಧಿ ಪದ್ಧತಿಯಿಂದ ತಮ್ಮ ಪತ್ನಿ ಹೇಗೆ ಕ್ಯಾನ್ಸರ್ ಎಂಬ ಮಾರಕ ರೋಗವನ್ನು ಸೋಲಿಸಿದರು ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನೇ ಪ್ರಶ್ನಿಸಿ ಈಗ ಛತ್ತಿಸ್​ಗಢ ಸಿವಿಲ್ ಸೊಸೈಟಿಯಿಂದ 850 ಕೋಟಿ ರೂಪಾಯಿಯ ಲೀಗಲ್ ನೋಟಿಸ್​ನ್ನು ಕಳುಹಿಸಲಾಗಿದೆ. ಸಿಧು ಪತ್ನಿ ಕ್ಯಾನ್ಸರ್​ನ್ನು ಹೇಗೆ ಮನೆಮದ್ದಿನಿಂದ ಗೆದ್ದು ಬಂದರು ಎಂಬ ವಿವರ ನೀಡುವಂತೆ ನೋಟಿಸ್ ಕಳುಹಿಸಲಾಗಿದೆ.
ಅದರ ಜೊತೆಗೆ ಕ್ಯಾನ್ಸರ್​ನ್ನು ಮನೆ ಮದ್ದಿನಿಂದ ಗೆದ್ದು ಬಂದ ಬಗ್ಗೆ 7 ದಿನದೊಳಗೆ ಸಾಕ್ಷಿಯ ಸಮೇತ ಸಾಬೀತು ಮಾಡುವಂತೆ ಕೇಳಿ 850 ಕೋಟಿ ರೂಪಾಯಿಯ ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಲಾಗಿದೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ ಎಂದು ಛತ್ತಿಸ್​ಗಢ ಸಿವಿಲ್ ಸೊಸೈಟ್ ನೋಟಿಸ್​ನಲ್ಲಿ ಆರೋಪಿಸಿದೆ.
ಇದೇ ನವೆಂಬರ್ 21 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ನವಜೋತ್ ಸಿಂಗ್ ಸಿಧು, ಅವರ ಪತ್ನಿಗೆ ಇದ್ದ ಸ್ಟೇಜ್ 4 ಕ್ಯಾನ್ಸರ್​ನ್ನು ಮನೆ ಮದ್ದಿನಿಂದ ಹೇಗೆ ನಿವಾರಿಸಿಕೊಂಡರು ಎಂಬ ಬಗ್ಗೆ ವಿವರಣೆ ನೀಡಿದ್ದರು. ಅದು ಮಾತ್ರವಲ್ಲ ವೈದ್ಯರಿಂದ ಅವರು ಕೇವಲ 40 ದಿನ ಮಾತ್ರ ಬದುಕುತ್ತಾರೆ ಎಂಬ ಮಾತುಗಳು ಬಂದಿದ್ದವು ಅದರಾಚೆಯೂ ನನ್ನ ಪತ್ನಿ ಕ್ಯಾನ್ಸರ್​ನ್ನು ಮನೆ ಮದ್ದಿನಿಂದ ಗೆದ್ದಿದ್ದಾರೆ ಎಂದು ಸಿಧು ಹೇಳಿದ್ದರು.
ಸಿಧು ಕ್ಯಾನ್ಸರ್​ನ್ನು ಉರಿಯೂತಕ್ಕೆ ಹೋಲಿಸಿದ್ದರು. ಹಾಲು, ಗೋಧಿಹಿಟ್ಟು, ಮೈದಾ ಹಾಗೂ ಸಕ್ಕರೆಯಿಂದ ಬರುವಂತಹ ಉರಿಯೂತವೇ ಕ್ಯಾನ್ಸರ್ ಎಂದು ಹೇಳಿದ್ದರು. ಕ್ಯಾನ್ಸರ್​ ಸಕ್ಕರೆಯಿಂದಲೇ ನಮಗೆ ಬರುತ್ತದೆ. ಕ್ಯಾನ್ಸರ್​ ಹೋಗಲಾಡಿಸಲು ಆಯುರ್ವೇದವೇ ಮದ್ದು ಅಮೆರಿಕಾದ ವೈದ್ಯರು ಈ ಬಗ್ಗೆ ಭಾರತದಲ್ಲಿ ಸಂಶೋದನೆ ಮಾಡುತ್ತಾರೆ ಎಂಬೆಲ್ಲಾ ವಿಷಯಗಳನ್ನು ನಾನು 10 ಗಂಟೆಗಳ ಕಾಲ ಓದಿ ತಿಳಿದುಕೊಂಡಿದ್ದೆ. ಅಂದಿನಿಂದ ಸಕ್ಕರೆ. ಗೋದಿ ಹಿಟ್ಟು, ಮೈದಾ, ಸಮೋಸಾ, ಜಿಲೇಬಿ ಎಲ್ಲವನ್ನು ನಿಲ್ಲಿಸಲಾಯ್ತು ಎಂದು ಅವರ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.
/newsfirstlive-kannada/media/post_attachments/wp-content/uploads/2024/11/Sidhu-850-Crore-Notice-1.jpg)
ಈ ವಿಚಾರವಾಗಿ ಸಿಸಿಎಸ್​ ಪ್ರಮುಖ ಪ್ರಶ್ನೆಗಳನ್ನು ನವಜೋತ್ ಕೌರ್​ಗೆ ಕೇಳಿ ನೋಟಿಸ್ ನೀಡಿದೆ.
1 ನಿಮ್ಮ ಪತಿ ನಿಮ್ಮ ಕ್ಯಾನ್ಸರ್​ ಗುಣಮುಖವಾದ ಬಗ್ಎಗ ನೀಡಿದ ಹೇಳಿಕೆಯನ್ನು ನೀವು ಸಮರ್ಥಿಸುತ್ತೀರಾ?
2 ಅಲೋಪಥಿಕ್ ಚಿಕಿತ್ಸೆಯನ್ನು ಪಡೆದಿದ್ದರಿಂದ ನಿಮಗೆ ಯಾವುದೇ ಪರಿಣಾಮ ಆಗಲಿಲ್ಲ ಎಂಬುದನ್ನು ನೀವು ನಂಬತ್ತೀರಾ?
3. ನೀವು ಕೇವಲ ಬೇವಿನ ಎಲೆ, ಲಿಂಬೆ ಹಣ್ಣಿನ ನೀರು,. ತುಳಸಿ ಹಾಗೂ ಅರಿಷಣವನ್ನು ಅಷ್ಟೇ ಸೇವಿಸಿದಿರೋ ಅಥವಾ ಅಲೋಪಥಿಕ್ ಔಷಧಿಯನ್ನು ಬಳಸಿದ್ದೀರೋ
ಎಂಬ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿ ಸಿಸಿಎಸ್ ನೋಟಿಸ್ ನೀಡಿದೆ. ಅದು ಮಾತ್ರವಲ್ಲ ಸಿಧು ಅವರು ಅಲೋಪಥಿಕ್ ಔಷಧಿಗಳ ಬಗ್ಗೆ ಜನರ ಮನಸಲ್ಲಿ ತಪ್ಪು ಕಲ್ಪನೆ ಬಿತ್ತುತ್ತಿದ್ದಾರೆ. ಇದನ್ನು ನಂಬುವ ಉಳಿದ ಕ್ಯಾನ್ಸರ್​ ರೋಗಿಗಳು ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳಲಿದ್ದಾರೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದ್ದು 7 ದಿನದೊಳಗೆ ಸಾಕ್ಷಿ ಸಮೇತ ತಮ್ಮ ವಾದವನ್ನು ಸಾಬೀತು ಮಾಡದಿದ್ದ ಪಕ್ಷದಲ್ಲಿ ಮುಂದಿನ ಕ್ರಮಕ್ಕೆ ನಾವು ಮುಂದಾಗುತ್ತೇವೆ ಎಂದು ಛತ್ತೀಸ್​ಗಢ ಸಿವಿಲ್ ಸೊಸೈಟಿ ಹೇಳಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us