/newsfirstlive-kannada/media/post_attachments/wp-content/uploads/2024/11/SIDHU-WIFE.jpg)
ಒಮ್ಮೆ ಕ್ಯಾನ್ಸರ್ ಮಹಾಮಾರಿ ಬಂದರೆ ಚೇತರಿಸಿಕೊಳ್ಳುವುದು ಸುಲಭವಲ್ಲ. ಅದೊಂದು ಮಾರಣಾಂತಿಕ ಕಾಯಿಲೆ. ಅದರಲ್ಲೂ ಕ್ಯಾನ್ಸರ್​ನ ಸ್ಟೇಜ್​ 4ನಿಂದ ಹೊರಬರುವುದು ಸಾಮಾನ್ಯದ ಮಾತಲ್ಲ. ಮಿರಾಕಲ್ ಎನ್ನುವಂತೆ ಮಾಜಿ ಕ್ರಿಕೆಟಿಗ ಮತ್ತು ರಾಜಕೀಯ ನಾಯಕ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಬ್ರೆಸ್ಟ್​ ಕ್ಯಾನ್ಸರ್ (breast-cancer)​​ ಜೊತೆ ಸೆಣಸಾಡಿ ಗೆದ್ದಿದ್ದಾರೆ. ಅದು ಕೂಡ ಸ್ಟೇಜ್ 4 ವಿರುದ್ಧ ಸಮರ ಸಾರಿ ವಿಜಯಶಾಲಿಯಾಗಿದ್ದಾರೆ.
ಸಿಧು ಅವರೇ ನೀಡಿರುವ ಮಾಹಿತಿಯಂತೆ.. ಅವರ ಪತ್ನಿಗೆ ಕ್ಯಾನ್ಸರ್ ಬಂದು ನಾಲ್ಕನೇ ಸ್ಟೇಜ್​ ವರೆಗೆ ವಿಸ್ತರಿಸಿತ್ತು. ವೈದ್ಯರು ಬದುಕುಳಿಯುವ ಸಾಧ್ಯತೆ ಕೇವಲ 3 ಪ್ರತಿಶತದಷ್ಟು ಮಾತ್ರ ಎಂದಿದ್ದರು. ಆದರೆ ನನ್ನವಳು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಡ್ತಿರೋರಿಗೆ ಆಕೆಯ ಕತೆ ಸ್ಫೂರ್ತಿಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬುವ ಪ್ರಯತ್ನ ಕೂಡ ಮಾಡಿದ್ದಾರೆ.
ಇದನ್ನೂ ಓದಿ:Black Diamond Apple! ವಿಶ್ವದ ಅತ್ಯಂತ ದುಬಾರಿ ಸೇಬು ಇದು, ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಸಿಧು ಪತ್ನಿ ಕ್ಯಾನ್ಸರ್ ಗೆದ್ದಿದ್ದು ಹೇಗೆ..?
ಸಿಧು ಅವರು ಹೇಳುವಂತೆ.. ನಮ್ಮ ಮಗನ ಮದುವೆ ನಂತರ ಪತ್ನಿಗೆ ಕ್ಯಾನ್ಸರ್ ಮತ್ತೆ ಬಂದಿತ್ತು. ಅವಳು ಬದುಕುವಳೋ..? ಅಥವಾ..? ಎಂಬ ಅನುಮಾನ ನಮಗಿತ್ತು. ಆದರೆ ಅವಳು ಬದುಕಿನ ಭರವಸೆ ಕಳೆದುಕೊಳ್ಳಲಿಲ್ಲ. ಕ್ಯಾನ್ಸರ್ ಎಂಬ ಮಾರಿಯನ್ನು ಧೈರ್ಯವಾಗಿ ಎದುರಿಸಿದಳು. ಕೌರ್‌ಗೆ ಪಾಟಿಯಾದ ರಾಜೇಂದ್ರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಿದೆವು. ಆಕೆಯ ಶಿಸ್ತು, ಕಟ್ಟುನಿಟ್ಟಿನ ದಿನಚರಿ ಮತ್ತು ಆಹಾರಕ್ರಮ ಕ್ಯಾನ್ಸರ್ ಅನ್ನೇ ಸೋಲಿಸಿತು. ನನ್ನ ಪತ್ನಿ ಈಗ ಕ್ಯಾನ್ಸರ್ ಗೆದ್ದಿದ್ದಾಳೆ.
ಏನು ತೆಗೆದುಕೊಳ್ಳುತ್ತಿದ್ದರು?
ನಿಂಬೆ ರಸ, ಅರಿಶಿಣ, ಆಪಲ್ ಸೈಡರ್ ವಿನೆಗರ್ (Apple Cider Vinegar), ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳು ಆಹಾರದ ಭಾಗವಾಗಿತ್ತು. ಕುಂಬಳಕಾಯಿ, ದಾಳಿಂಬೆ, ಆಮ್ಲಾ, ಬೀಟ್ರೂಟ್ ಹೆಚ್ಚಾಗಿ ಸೇವಿಸಿದರು. ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಆಹಾರಗಳನ್ನೇ ಹೆಚ್ಚಾಗಿ ನೀಡಲಾಗಿತ್ತು. ತೆಂಗಿನೆಣ್ಣೆ, ಕೋಲ್ಡ್ ಪ್ರೆಸ್ಡ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಮಾಡಿದ ಅಡುಗೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಬೆಳಗಿನ ಚಹಾದಲ್ಲಿ ದಾಲ್ಚಿನ್ನಿ, ಲವಂಗ, ಬೆಲ್ಲ ಮತ್ತು ಏಲಕ್ಕಿಯನ್ನು ತೆಗೆದುಕೊಂಡಿದ್ದರು. ನೈಸರ್ಗಿಕ ಆಹಾರ ಪದಾರ್ಥಗಳಿಂದಲೇ ನನ್ನವಳು ಗೆದ್ದಿದ್ದಾಳೆ ಎಂದು ಸಿಧು ಹೇಳಿದ್ದಾರೆ.
ಇದನ್ನೂ ಓದಿ:Black Diamond Apple! ವಿಶ್ವದ ಅತ್ಯಂತ ದುಬಾರಿ ಸೇಬು ಇದು, ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us