/newsfirstlive-kannada/media/post_attachments/wp-content/uploads/2025/01/naxal-Attack-in-Bijapura.jpg)
ನಕ್ಸಲ್ ಹಾಗೂ ಸೈನಿಕರ ಸಂಘರ್ಷ ತಣ್ಣಗಾಯ್ತು ಎನ್ನುವಷ್ಟರಲ್ಲೇ ಛತ್ತೀಸ್‌ಗಢದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆದಿದೆ. ಇತ್ತೀಚೆಗೆ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಗೆ ಅತಿ ದೊಡ್ಡ ಪ್ರತೀಕಾರ ತೀರಿಸಿಕೊಳ್ಳಲಾಗಿದೆ.
ಬಿಜಾಪುರ್ ಜಿಲ್ಲೆ ಬೇದ್ರೆ-ಕುತ್ರು ರಸ್ತೆಯಲ್ಲಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ. ಯೋಧರ ವಾಹನವನ್ನೇ ಟಾರ್ಗೆಟ್​​ ಮಾಡಿ ಸ್ಫೋಟ ಸಂಭವಿಸಿದ್ದು, ಸೇನಾ ವಾಹನ ಸಂಪೂರ್ಣ ಛಿದ್ರ, ಛಿದ್ರವಾಗಿದೆ. ಪ್ರಬಲ IED ಬ್ಲಾಸ್ಟ್ ಆಗಿದ್ದರಿಂದ ಭೂಮಿಯೇ ಬಾಯ್ಬಿಟ್ಟಿದೆ. ಸೇನಾ ವಾಹನದಲ್ಲಿದ್ದ ಡ್ರೈವರ್​ ಸೇರಿ 9 ಯೋಧರು ಹುತಾತ್ಮರಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/01/Naxal-Attack-Bijapura.jpg)
ಸೈನಿಕರು ಇಂದು ಬೆಳಗ್ಗೆಯಷ್ಟೇ ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಬ್ಬರು ಮಹಿಳೆಯರು ಸೇರಿ ಐವರನ್ನ ಬಲಿ ಪಡೆದಿದ್ದರು. ನಕ್ಸಲ್ ಆಪರೇಷನ್ ಮುಗಿಸಿ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನ 2.15ಕ್ಕೆ ಸೇನಾ ವಾಹನವನ್ನೇ ಗುರಿಯಾಗಿಸಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us