newsfirstkannada.com

ಗಿಣಿರಾಮ ಸೀರಿಯಲ್ ನಾನೇ​ ಬಿಟ್ಟು ಬಂದೆ- ಕಹಿ ಘಟನೆ ಬಗ್ಗೆ ನಟಿ ನಯನಾ ನಾಗರಾಜ್​ ಹೇಳಿದ್ದೇನು?

Share :

Published July 7, 2024 at 6:30am

  ಗಿಣಿರಾಮ ಸೀರಿಯಲ್ ಶೂಟಿಂಗ್​ ಸಮಯದಲ್ಲಿ ಆದ ಕಷ್ಟವನ್ನ ನೆನೆದ ನಟಿ

  ಪರಭಾಷೆಯಿಂದ ಬಂದ ​ಪ್ರಾಜೆಕ್ಟ್​ ಅನ್ನು ಹಾಳು ಮಾಡಿಬಿಟ್ಟರು ಎಂದು ಆರೋಪ

  ಎಷ್ಟೇ ಫೋನ್​ ಮಾಡಿದ್ರೂ ನಿರ್ಮಾಪಕರು ಫೋನ್‌ ಪಿಕ್ ಮಾಡ್ತಾ ಇರಲಿಲ್ಲ!

ಗಿಣಿರಾಮ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಕಿರುತೆರೆಯ ನಟಿ ನಯನಾ ನಾಗರಾಜ್ ಆರೋಪಗಳ ಮಳೆ ಸುರಿದಿದ್ದಾರೆ. ಹೌದು, ಗಿಣಿರಾಮ ಸೀರಿಯಲ್ ಶೂಟಿಂಗ್​ ವೇಳೆ ಯಾವ ರೀತಿ ಕಷ್ಟವನ್ನು ಅನುಭವಿಸಿದ್ದಾರೆ ಎಂಬುವುದರ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಆ ಸೀರಿಯಲ್​ ಶೂಟಿಂಗ್ ವೇಳೆ ನಾನು ಡಿಪ್ರೆಶನ್​ಗೆ ಹೋಗಿದ್ದೆ; ನಯನಾ ನಾಗಾರಾಜ್ ಶಾಕಿಂಗ್​ ಹೇಳಿಕೆ

ಕಿರುತೆರೆ ನಟಿ ನಯನಾ ನಾಗರಾಜ್‌ ಗಿಣಿರಾಮ ಸೀರಿಯಲ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಈಗ ಇದೇ ಸೀರಿಯಲ್​ ಮೇಲೆ ನಯನಾ ನಾಗರಾಜ್‌ ಗಂಭೀರ ಆರೋಪ ಮಾಡಿದ್ದಾರೆ. ಗಿಣಿರಾಮ ಧಾರವಾಹಿ ನಟಿ ನಯನಾ ನಾಗಾರಾಜ್ ಅವರು ಕೆಲವೊಂದು ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಆನ್​ಸ್ಕ್ರೀನ್​ನಲ್ಲಿ ವೀಕ್ಷಕರ ಮುಂದೆ ಎಲ್ಲರೂ ಕಲರ್​ ಕಲರ್​ ಆಗಿ ಕಾಣಿಸುತ್ತಾರೆ. ಆದರೆ ಅದೇ ಆಫ್‌ಸ್ಕ್ರೀನ್‌ನಲ್ಲಿ ಏನೇನಾಯ್ತು ಅನ್ನೋದನ್ನ ನಯನಾ ಭಾವುಕರಾಗಿ ಹೇಳಿಕೊಂಡಿದ್ದಾರೆ.

ರೇಡಿಯೋ ಸಿಟಿಗೆ ನೀಡಿರೋ ಸಂದರ್ಶನದಲ್ಲಿ ಮಾತನಾಡಿರೋ ನಯನಾ ನಾಗರಾಜ್‌ ಅವರು, ಹಾವೇರಿ ಜಿಲ್ಲೆಯಲ್ಲಿ ಶೂಟಿಂಗ್‌ ಇತ್ತು. ಹುಳಗಳು ಕಂಡ್ರೆ ನನಗೆ ಭಯ ಇತ್ತು. ಅಲ್ಲಿ ಹೆಚ್ಚು ಹುಳಗಳು ಇದ್ದವು. ರಾತ್ರಿ ಮಲಗೋ ಟೈಮ್‌ನಲ್ಲಿ ಹುಳಗಳು ಇದ್ದವು. ಮನೆಗೆ ಫೋನ್ ಮಾಡಿ ಅಳುತ್ತಿದ್ದೆ. 25 ದಿನವೂ ನಾನು ಮನೆಗೆ ಕಾಲ್ ಮಾಡಿ ಅಳುತ್ತಿದೆ. ನಾನು ಈ ಚಾನ್ಸ್​​ ಅನ್ನು ಒಪ್ಪಿಕೊಳ್ಳಬಾರದಿತ್ತು. ದಿನ ರಾತ್ರಿ ಬಂದು ಕಾಲಿಗೆ ಎಣ್ಣೆ ಹಚ್ಚಿಕೊಂಡು ಮಲಗುತ್ತಿದೆ. ಬೆಳಗ್ಗೆ 5 ಗಂಟೆಗೆ ಎದ್ರೆ, ರಾತ್ರಿ 12 ಗಂಟೆಗೆ ರೂಮ್‌ಗೆ ಬರ್ತಾ ಇದ್ದೆ. ಹನುಮಾನ್‌ ಚಾಲೀಸ್ ಕೇಳುತ್ತಿದ್ದೆ. ಕೋವಿಡ್‌ ಬಂದಿದ್ದರಿಂದ ಹಾವೇರಿ ಶೂಟ್‌ ನಿಲ್ಲಿಸಿದ್ದರು. ಎಷ್ಟೇ ಜ್ವರ ಇದ್ದರೂ ಶೂಟ್ ಮಾಡಲೇಬೇಕು. ನಾನು ಸೆಕೆಂಡ್‌ ವೇವ್‌ನಲ್ಲಿ ಶೂಟಿಂಗ್ ಮಾಡಿದ್ದೇ. ನನ್ನ ತಾಯಿಗೆ ಜ್ವರ ಇತ್ತು. ಅಮ್ಮನಿಗೆ ಕೋವಿಡ್ ಇದೇ ಅಂತಾ ಗೊತ್ತಾಯ್ತು. ಶೂಟಿಂಗ್‌ನಲ್ಲಿ ಅಮ್ಮನಿಗೆ ಕೋವಿಡ್ ಇದೆ ಎಂದಾಗ ಗಾಬರಿ ಆಯಿತು.

ನನಗೆ ಕೋವಿಡ್ ಇದೇ ಅಂತ ಹೇಳಿದ್ದಕ್ಕೆ ಬಾರಮ್ಮಾ ಏನು ಆಗಲ್ಲ ಅಂತ ಹೇಳಿ ಬಿಟ್ಟರು. ಕೋವಿಡ್​ ರೆಸ್ಟ್​ ಮಾಡಿದ ಬಳಿಕ ಪಾಸಿಟಿವ್‌ ಬಂತು. ಕ್ಯಾಮರಾಮನ್‌, ಪ್ರೊಡ್ಯೂಸರ್‌ ಎಲ್ಲರಿಗೂ ಮೀಟರ್ ಆಫ್ ಆಯ್ತು. ಗಿಣಿರಾಮ ಬಿಟ್ಟಿದ್ದೇನೆ ಅನ್ನೋ ಕಾರಣಕ್ಕೆ ನನ್ನ ಜೀವನ ಮುಗಿಸಲು ಯತ್ನಿಸಿದರು. ಆಗ ನಾನು ಶೂಟಿಂಗ್ ಇದೇ ಅಂತಾ ಅಳುತ್ತಿದ್ದೆ. ಡೈಲಾಂಗ್​ ಟೇಕ್‌ ಮಾಡೋ ಟೈಮ್‌ನಲ್ಲಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಬೈಯುತ್ತಿದ್ದರು. ಈ ವಿಚಾರದ ಬಗ್ಗೆ ಪರಮ್ ಸರ್​ ಹತ್ತಿರ ನಾನು ಮಾತಾಡಿದ್ದೆ. ಅಲ್ಲಿನ ವಾತಾವರಣ ಚೆನ್ನಾಗಿರಲಿಲ್ಲ. ಗಿಣಿರಾಮ ಸೀರಿಯಲ್​ ನಂತರ ತೆಲುಗು ಪ್ರಾಜೆಕ್ಟ್​ ಅನ್ನು ಸುಳ್ಳು ಸುಳ್ಳು ಹೇಳಿ ತಪ್ಪಿಸಿದರು. ನಾನು ಎಷ್ಟೇ ಫೋನ್​ ಮಾಡಿದ್ರೂ ನಿರ್ಮಾಪಕರು ನನ್ನ ಫೋನ್‌ ಪಿಕ್ ಮಾಡ್ತಿರಲಿಲ್ಲ ಅಂತ ಶೂಟಿಂಗ್​ ಸ್ಥಳದಲ್ಲಿ ಆದ ಕಹಿ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಣಿರಾಮ ಸೀರಿಯಲ್ ನಾನೇ​ ಬಿಟ್ಟು ಬಂದೆ- ಕಹಿ ಘಟನೆ ಬಗ್ಗೆ ನಟಿ ನಯನಾ ನಾಗರಾಜ್​ ಹೇಳಿದ್ದೇನು?

https://newsfirstlive.com/wp-content/uploads/2023/06/ginirama-3.jpg

Load More