newsfirstkannada.com

ಕೋಟಿ ಕುಬೇರ, ಕಿಂಗ್ ಕೊಹ್ಲಿಯ ಆರಾಧಕ.. ವಿವೇಕ್​ ರಾಂದಿವ್​ಗಿರೋದು ಅದೊಂದೇ ಆಸೆ..!

Share :

01-11-2023

  ಕ್ಯಾಲಿಫೋರ್ನಿಯಾ ಕುಬೇರ ಕೊಹ್ಲಿಗೆ ಕ್ಲೀನ್​ಬೋಲ್ಡ್

  ಬಾಸ್ಕೆಟ್​ಬಾಲ್​ ಜೊತೆ ಕ್ರಿಕೆಟ್​ ಮೇಲೂ ಲವ್​ ಶುರು

  ಸ್ಯಾಕ್ರಮೆಂಟೊ ಕಿಂಗ್ಸ್​ ಮಾಲೀಕ ಕೊಹ್ಲಿ ಆರಾಧಕ

ಕಿಂಗ್​ ಕೊಹ್ಲಿಗಿರೋ ಕ್ರೇಜ್​ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇ ಇಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಕೊಹ್ಲಿಯನ್ನ ಪ್ರೀತಿಸೋ, ಆರಾಧಿಸೋ, ಅನುಕರಿಸೋ ವಿರಾಟ ಸೈನ್ಯವೇ ಇದೆ. ಇದ್ರಲ್ಲಿ ವಿಶೇಷ ಏನಿಲ್ಲ ಬಿಡಿ. ಆದ್ರೆ ಇವತ್ತು ನಾವ್ ಹೇಳ್ತಿರೋದು ಬಿಲೆನಿಯರ್​​ ಒಬ್ಬ ಕಿಂಗ್​ ಕೊಹ್ಲಿಗೆ ಬೋಲ್ಡ್​ ಆದ ಸ್ಪೆಷಲ್​​ ಕತೆ ಇದು.

ವಿರಾಟ್​ ಕೊಹ್ಲಿ ಆನ್​​ಫೀಲ್ಡ್​​ನ ರಿಯಲ್ ಫೈಟರ್. ಕೊಹ್ಲಿ ರನ್​ ಹೊಡಿಯೋದು ಬಿಡೋದು ಸೆಕೆಂಡರಿ, ಬ್ಯಾಟಿಂಗ್​ ಹಿಡಿದು ಅಂಗಳಕ್ಕಿಳಿದ್ರೆ ಸಾಕು ಎದುರಾಳಿ ಪಡೆ ಗಲಿಬಿಲಿಯಾಗುತ್ತದೆ. ಕೊಹ್ಲಿಯ ಈ ಗತ್ತು ಗೈರತ್ತಿಗೆ ಕ್ಲೀನ್​ಬೋಲ್ಡ್​ ಆದ ಕ್ರಿಕೆಟ್​ ಪ್ರೀಯರಿಗೆ ಲೆಕ್ಕವೇ ಇಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ದಂಡಿದೆ. ಆ ಅಭಿಮಾನಿಗಳಲ್ಲಿ ಇವರೂ ಒಬ್ರು.

ವಿರಾಟ್​ ಕೊಹ್ಲಿ ನಂಬರಿನ ಜೆರ್ಸಿ ಹಿಡಿದು ನಿಂತಿರೋ ಇವರನ್ನು ಸಾಮಾನ್ಯದವರು ಅನ್ಕೋಳ್ಳೋದೇ ಬೇಡ. ಕೋಟಿ ಕೋಟಿಗೆ ಬೆಲೆಬಾಳೋ ಕೋಟ್ಯಾದೀಶ ಇವ್ರು. ಸ್ಪೋರ್ಟ್ಸ್​ ಅಂದ್ರೆ ಇಷ್ಟ.. ಕ್ರಿಕೆಟ್​​ ಅಂದ್ರೆ ಕಷ್ಟ ಅಂತಿದ್ದ ಇವ್ರು, ಈಗ ಕೊಹ್ಲಿ ಆಟ ನೋಡಲು ನಿದ್ದೆಯನ್ನೂ ಬಿಟ್ಟು ಎದ್ದು ಕೂರ್ತಾರೆ.

ಹೇ ವಿರಾಟ್​, ಶುಭಾಶಯಗಳು ನೀವು ಮತ್ತೆ ಗೆದ್ದಿದ್ದೀರಿ. ನೀವು ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ. ಯಾಕಂದ್ರೆ ನಾನು ನಾರ್ಥನ್​ ಕ್ಯಾಲಿಫೋರ್ನಿಯಾದಲ್ಲಿದ್ದೀನಿ. ಹೀಗಾಗಿ ನಾನು ಟೀಮ್​ ಇಂಡಿಯಾದ ಪಂದ್ಯ ನೋಡಲು ಬೇಗ ಏಳುತ್ತೇನೆ. ನೀವು ಗೆಲ್ಲುತ್ತಲೇ ಇದ್ದಿರಿ. ಶುಭಾಶಯಗಳುವಿವೇಕ್​ ರಾಂದಿವ್

ಕೊಹ್ಲಿ ಹಾಗೂ ಟೀಮ್​ ಇಂಡಿಯಾದ ಬೆಂಬಲಕ್ಕೆ ನಿಂತಿರೋ ಈ ವ್ಯಕ್ತಿ ಸಾಮಾನ್ಯದವರಲ್ಲ. ಕೋಟಿ ಕುಬೇರ ವಿವೇಕ್​ ರಾಂದಿವ್​. ಭಾರತೀಯ ಮೂಲದ ಬಿಸಿನಸ್​​ಮನ್ & ಸ್ಪೋರ್ಟ್ಸ್​​ ಲವರ್​.

ಕೊಹ್ಲಿಗೆ ಕ್ಲೀನ್​ಬೋಲ್ಡ್​ ಆದ ಕ್ಯಾಲಿಫೋರ್ನಿಯಾ ಕುಬೇರ

ವಿಶ್ವದ ಟಾಪ್​ ಬಾಸ್ಕೆಟ್​​ಬಾಲ್​ ಲೀಗ್​ ಎನ್​ಬಿಎ ನಿಮಗೆ ಗೊತ್ತಿರಬಹುದು ಅದ್ರಲ್ಲಿ ಸ್ಯಾಕ್ರಮೆಂಟೊ ಕಿಂಗ್ಸ್​ ಅನ್ನೋ ತಂಡ ಇದ್ಯಲ್ಲ ಅದ್ರ ಓನರೇ ಇವ್ರು​. ವಿಶ್ವದ ಶ್ರೇಷ್ಟ ಬಾಸ್ಕೆಟ್​ಬಾಲ್​ ತಂಡದ ಮಾಲೀಕ ವಿವೇಕ್​ ರಾಂದಿವ್ ಈಗ ಕೊಹ್ಲಿಯ ಆರಾಧಕ.

ಸ್ಯಾಕ್ರಮೆಂಟೊ ಬ್ರ್ಯಾಂಡ್​ವ್ಯಾಲ್ಯೂ RCBಗಿಂತ ಹತ್ತು ಪಟ್ಟು ಹೆಚ್ಚು

ಶಾಕ್​ ಅನಿಸಿದ್ರೂ ಇದೇ ಸತ್ಯ.. ಐಪಿಎಲ್​ನಲ್ಲಿ ಕೊಹ್ಲಿ ಆಡೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದ್ಯಲ್ಲ. ಅದ್ರ 10 ಪಟ್ಟು ಬ್ರ್ಯಾಂಡ್​ ವ್ಯಾಲ್ಯೂ ಸ್ಯಾಕ್ರಮೆಂಟೊ ಕಿಂಗ್ಸ್​​ ತಂಡ ಹೊಂದಿದೆ. ಅಕ್ಟೋಬರ್​ 2023ರ ಫೋಬ್ಸ್​ ರಿಪೋರ್ಟ್​ ಪ್ರಕಾರ 27,720 ಕೋಟಿ ಬ್ರಾಂಡ್​ ವ್ಯಾಲ್ಯೂ ​ಸ್ಯಾಕ್ರಮೆಂಟೊ ಕಿಂಗ್ಸ್ ತಂಡದ್ದಾಗಿದೆ. ಆರ್​​ಸಿಬಿಯ ಬ್ರ್ಯಾಂಡ್​ ವ್ಯಾಲ್ಯೂ ಎಷ್ಟು ಗೊತ್ತಾ? ಸುಮಾರು 1620 ಕೋಟಿ ಮಾತ್ರ.

ವಿವೇಕ್​ ರಾಂದಿವ್​ಗಿರೋದು ಅದೊಂದೇ ಆಸೆ

ತಂಡದ ಲೆಕ್ಕಾಚಾರದಲ್ಲಿ ಆರ್​​ಸಿಬಿಗಿಂತ ಹತ್ತು ಪಟ್ಟು ಶ್ರೀಮಂತನಾಗಿರೋ ಈ ವಿವೇಕ್​ ರಾಂದಿವ್​ ಆಸ್ತಿ ಮೌಲ್ಯ ಇನ್ನೆಷ್ಟಿರಬಹುದು ನೀವೇ ಲೆಕ್ಕ ಹಾಕಿಕೊಳ್ಳಿ. ಕ್ಯಾಲಿಫೋರ್ನಿಯಾದ ಕೊಟ್ಯಾದೀಶ, ಸಕ್ಸಸ್​ಫುಲ್​ ಬುಸಿನೆಸ್​ಮೆನ್​ ಆಗಿ ಗುರುತಿಸಿಕೊಂಡಿರೋ ವಿವೇಕ್​ ರಾಂದಿವ್​ಗೆ ಒಂದು ಆಸೆಯಿದೆ. ಅದೇನು ಗೊತ್ತಾ? ಕೊಹ್ಲಿಯನ್ನ ಭೇಟಿಯಾಗೋದು.

ನಾನು ಸಾಕ್ಯಮಾಂಟೋ ಕಿಂಗ್ಸ್​ ತಂಡದ ಮಾಲೀಕ. ನಾನು ನಿಮಗಾಗಿ ಜೆರ್ಸಿಯನ್ನ ಮಾಡಿಸಿದ್ದೇನೆ. ನಿಮ್ಮನ್ನ ಶೀಘ್ರದಲ್ಲಿ ಭೇಟಿಯಾಗೋ ಆಸೆಯಿದೆ. ನೀವು ಎಲ್ಲವನ್ನೂ ಗೆದ್ದು, ಟ್ರೋಫಿ ಜಯಿಸಿದಾಗ ನಿಮ್ಮನ್ನ ಭೇಟಿಯಾಗ್ತಿನಿ ಎಂದಿದ್ದಾರೆ. ಆರಂಭದಲ್ಲಿ ಈ ವ್ಯಕ್ತಿಗೆ ಕ್ರಿಕೆಟ್​ ಅಂದ್ರೆ ಅಷ್ಟಕಷ್ಟೆಯಾಗಿತ್ತು. ಈಗ ನೋಡಿದ್ರೆ ನಿದ್ದೆಗೆಟ್ಟು ಟಿವಿ ನೋಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕ್ರಿಕೆಟ್​​ಗೆ ಅಡಿಕ್ಟ್​ ಆಗಿದ್ದಾರೆ. ಇದರ ಸೂತ್ರದಾರ ವಿರಾಟ.. ಮೋಡಿ ಮಾಡೋದ್ರಲ್ಲಿ ಕೊಹ್ಲಿ ಎಂತಹ ಮಾಂತ್ರಿಕ ಅನ್ನೊದಕ್ಕೆ ಇದಕ್ಕಿಂತ ಬೆಸ್ಟ್​ ಎಕ್ಸಾಂಪಲ್​ ಏನ್​ ಬೇಕು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೋಟಿ ಕುಬೇರ, ಕಿಂಗ್ ಕೊಹ್ಲಿಯ ಆರಾಧಕ.. ವಿವೇಕ್​ ರಾಂದಿವ್​ಗಿರೋದು ಅದೊಂದೇ ಆಸೆ..!

https://newsfirstlive.com/wp-content/uploads/2023/11/Virat_kohli-9.jpg

Load More