ಶರದ್ ಪವಾರ್‌ಗೆ ಬಿಗ್ ಶಾಕ್ ಕೊಟ್ಟ ಅಜಿತ್ ಪವಾರ್‌ಗೆ ಸವಾಲು
ಎನ್‌ಸಿಪಿ ಪಕ್ಷದ ನೂತನ ಕಚೇರಿ ಬಾಗಿಲು ತೆರೆಯುವಾಗ ಏನಾಯ್ತು?
ರಾಷ್ಟ್ರಾವಾದಿ ಭವನದಲ್ಲಿ ನೂತನ ಕಚೇರಿ ತೆರೆದ ಅಜಿತ್ ಪವಾರ್ ಬಣ
ಮುಂಬೈ: ಅಪರೂಪದ ರಾಜಕಾರಣಿ, NCP ಪಕ್ಷದ ಮುಖ್ಯಸ್ಥ ಶರದ್ ಪವಾರ್‌ಗೆ ಶಾಕ್ ಕೊಟ್ಟ ಅಜಿತ್ ಪವಾರ್ ಮಹಾರಾಷ್ಟ್ರದ ಡಿಸಿಎಂ ಆಗಿದ್ದಾಯ್ತು. ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಹಾರಾಷ್ಟ್ರದಲ್ಲಿ ರೋಚಕ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅಜಿತ್ ಪವಾರ್ ವರ್ಸಸ್ ಶರದ್ ಪವಾರ್ ಫೈಟ್ ನಡೆಯುತ್ತಿದ್ದು, ಎನ್‌ಸಿಪಿ ಪಕ್ಷದ ಕಚೇರಿ, ಚಿಹ್ನೆ ವಶಪಡಿಸಿಕೊಳ್ಳಲು ಭರ್ಜರಿ ಪೈಪೋಟಿ ಶುರುವಾಗಿದೆ.
ಶಿವಸೇನೆ, ಬಿಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಎನ್‌ಸಿಪಿಯ ಶಾಸಕರು ಜೈ ಎಂದಿದ್ದು ಸಿಎಂ ಏಕನಾಥ ಶಿಂಧೆ ಸರ್ಕಾರ ದಾಖಲೆ ಬರೆದಿದೆ. ಆ ದಾಖಲೆ ಏನಂದ್ರೆ 51 ವರ್ಷಗಳ ಬಳಿಕ ಮಹಾರಾಷ್ಟ್ರ ಸರ್ಕಾರಕ್ಕೆ ವಿವಿಧ ಪಕ್ಷಗಳ 200ಕ್ಕೂ ಹೆಚ್ಚು ಶಾಸಕರ ಬೆಂಬಲ ಸಿಕ್ಕಿದೆ. ಈ ಬೆಳವಣಿಗೆಯ ಮಧ್ಯೆ ಡಿಸಿಎಂ ಅಜಿತ್ ಪವಾರ್ ಅವರು ಶರದ್ ಪವಾರ್ ಬಳಿ ಇರುವ ಎನ್‌ಸಿಪಿ ಪಕ್ಷದ ಕಚೇರಿ, ಚಿಹ್ನೆ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಎನ್‌ಸಿಪಿಯ 53 ಶಾಸಕರ ಪೈಕಿ ತಮಗೆ ಬಹುಮತವಿದೆ. ಹೀಗಾಗಿ ಎನ್‌ಸಿಪಿಯ ಸಂಪೂರ್ಣ ಅಧಿಕಾರ ತಮಗೆ ಎಂದು ಹೇಳಿಕೊಂಡಿದ್ದಾರೆ.
ಅಜಿತ್ ಪವಾರ್ ಬಣ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷದ ಚುಕ್ಕಾಣಿ ಹಿಡಿಯೋ ಕನಸು ಕಾಣ್ತಿದೆ. ಈ ಮಧ್ಯೆ ಇವತ್ತು ಮತ್ತೊಂದು ರಾಜಕೀಯದ ಹೈಡ್ರಾಮಾ ನಡೆದಿದೆ. ಅಜಿತ್ ಪವಾರ್ ಬೆಂಬಲಿಗರು ಇವತ್ತು ಒಂದು ಬಂಗಲೆಯನ್ನ ಗುರುತಿಸಿದ್ದು, ಅದನ್ನೇ ಎನ್‌ಸಿಪಿ ಪಕ್ಷದ ನೂತನ ಕಚೇರಿಯನ್ನಾಗಿ ತೆರೆಯಲು ಮುಂದಾಗಿದ್ದರು. ಆದರೆ ಆ ಬಂಗಲೆಯ ಬಾಗಿಲು ಬಂದ್ ಮಾಡಿ ಕೀ ಕಳೆದು ಹೋಗಿದೆ ಎನ್ನಲಾಗಿತ್ತು.
ಇದನ್ನೂ ಓದಿ: ಅಜಿತ್ ಪವಾರ್ ‘ಪವರ್ ಪ್ಲೇ’ ಆಟಕ್ಕೆ ಎರಡು ಹೋಳಾದ NCP; ಬಂಡಾಯವೆದ್ದ ನಾಯಕರಿಗೀಗ ಅನರ್ಹತೆ ಭೀತಿ..!?
ಅಜಿತ್ ಪವಾರ್ ಬಣ ಎನ್‌ಸಿಪಿ ಕಚೇರಿಗಾಗಿ ನೋಡಿದ್ದ ಬಂಗಲೆಯು ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕನಿಗೆ ಸೇರಿದ್ದಾಗಿದೆ. ಉದ್ಧವ್ ಠಾಕ್ರೆ ಬೆಂಬಲಿತ MLC ಅಂಬದಾಸ್ ದಾನ್ವೆ ಈ ನಿವಾಸದಲ್ಲಿ ಇದ್ದರು. ಅಜಿತ್ ಪವಾರ್ ಬೆಂಬಲಿಗರು ಈ ಬಂಗಲೆಗೆ ಬರೋ ಸುದ್ದಿ ತಿಳಿಯುತ್ತಿದ್ದಂತೆ ಉದ್ಧವ್ ಠಾಕ್ರೆ ಕಡೆಯವರು ಬಾಗಿಲು ಬಂದ್ ಮಾಡಿದ್ದಾರೆ. ಇವತ್ತು ಬೆಳಗ್ಗೆ ಬಂಗಲೆ ಬಳಿ ಅಜಿತ್ ಪವಾರ್ ಬೆಂಬಲಿಗರು ಬಂದು ನೋಡಿದಾಗ ಕೀಗಳು ಕಳೆದು ಹೋಗಿದೆ ಎನ್ನಲಾಗಿದೆ. ಕೊನೆಗೆ ಬಂಗಲೆ ಮುಂದೆಯೇ ಜಮಾಯಿಸಿದ ನಾಯಕರು ಕೀ ತಂದು ಬಾಗಿಲು ತೆರೆಯಲು ಪಟ್ಟು ಹಿಡಿದಿದ್ದಾರೆ.
ಕೊನೆಗೆ ಕೀ ಹೊಡೆದು ಒಳಗೆ ಹೋದಾಗ ಒಳಗಿನ ರೂಮ್‌ಗಳಿಗೂ ಕೀ ಹಾಕಿ ಲಾಕ್ ಮಾಡಿದ್ದ ದೃಶ್ಯಗಳು ಕಂಡು ಬಂದಿದೆ. ನಾವು ಎನ್‌ಸಿಪಿ ಕಚೇರಿ ತೆರೆಯಲು ಸಿದ್ಧತೆ ನಡೆಸಿದ ಮೇಲೆ ಬಾಗಿಲುಗಳನ್ನು ಬಂದ್ ಮಾಡಲಾಗಿದೆ ಎಂದು ಅಜಿತ್ ಪವಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದ ನೂತನ ಕಚೇರಿ ಉದ್ಘಾಟನೆಗೆ ಮುಂದಾಗಿದ್ದ ಅಜಿತ್ ಪವಾರ್‌ಗೆ ಹಿನ್ನಡೆಯಾಗಿದೆ. ಇಷ್ಟೆಲ್ಲಾ ನಡೆದ ಮೇಲೆ ಅಜಿತ್ ಪವಾರ್ ಬಣ ರಾಷ್ಟ್ರಾವಾದಿ ಭವನದಲ್ಲಿ ಎನ್‌ಸಿಪಿಯ ನೂತನ ಕಚೇರಿ ಆರಂಭಿಸಿದೆ. ಪಕ್ಷದ ಬಹುತೇಕ ಶಾಸಕರ ಬೆಂಬಲ ತಮಗೆ ಇದೆ ಎಂದು ಸಾಬೀತುಪಡಿಸಲು ಶತಪ್ರಯತ್ನಗಳನ್ನು ಮಾಡುತ್ತಿದೆ. ಕೊನೆಗೆ ಎನ್‌ಸಿಪಿ ಪಕ್ಷದ ಚಿಹ್ನೆ ಯಾರ ಪಾಲಾಗುತ್ತೆ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ