newsfirstkannada.com

ಚಿನ್ನದ ಹುಡುಗನಿಗೆ ಮತ್ತೊಂದು ‘ಚಿನ್ನ’; ಜಾವೆಲಿನ್​ ಸ್ಟಾರ್ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ..!

Share :

01-07-2023

    ಸತತ 2ನೇ ಬಾರಿ ಲೌಸನ್ನೆ ಡೈಮೆಂಡ್​​ ಲೀಗ್ ಗೆದ್ದ ನೀರಜ್ ಚೋಪ್ರಾ

    ನೀರಜ್ ಚೋಪ್ರಾಗೆ ಫೈಟ್​ ಕೊಟ್ಟ ಜರ್ಮನಿಯ ಜೂಲಿಯನ್ ವೆಬರ್

    ‘ಲೌಸನ್ನೆ ಡೈಮಂಡ್​​ ಲೀಗ್’​ನಲ್ಲಿ ನೀರಜ್ ಚೋಪ್ರಾ ಎಸೆದ ದೂರ ಎಷ್ಟು?

ನವದೆಹಲಿ: ಭಾರತದ ಜಾವೆಲಿನ್​ ಥ್ರೋ ಸ್ಟಾರ್​ ನೀರಜ್ ಚೋಪ್ರಾ ಅವರು ಸತತ 2ನೇ ಬಾರಿಗೆ ಲೌಸನ್ನೆ ಡೈಮಂಡ್​​ ಲೀಗ್​ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಜಿನೀವಾದ ಲೌಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್​ನಲ್ಲಿ ನೀರಜ್ ಚೋಪ್ರಾ ಅವರು 87.66 ಮೀಟರ್‌ ವರೆಗೆ ಭರ್ಚಿ ಎಸೆಯುವ ಮೂಲಕ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.

ಲೌಸನ್ನೆಯಲ್ಲಿ ನಡೆದ ಡೈಮೆಂಡ್​ ಲೀಗ್​ನಲ್ಲಿ ಭಾರತದ ನೀರಜ್ ಚೋಪ್ರಾಗೆ ಜರ್ಮನಿಯ ಆಟಗಾರ ಜೂಲಿಯನ್ ವೆಬರ್ ಟಫ್​ ಫೈಟ್​ ಕೊಟ್ಟಿದ್ದರು. ಆಟದ ಪ್ರಾರಂಭದಿಂದಲೂ ವೆಬರ್​ ಅವರು ಮುನ್ನಡೆ ಸಾಧಿಸಿದ್ದರು. 86.20 ಮೀಟರ್​ನಿಂದ 87.03 ಮೀಟರ್​ವರೆಗೆ ಭರ್ಚಿ ಎಸೆದು ಗೆಲ್ಲುವ ತವಕದಲ್ಲಿದ್ದರು. ಆದ್ರೆ ಕೊನೆಯ ಎಸೆತದಲ್ಲಿ ನೀರಜ್ ಚೋಪ್ರಾ ಆಕ್ರಮಣಕಾರಿಯಾಗಿ 87.66 ಮೀಟರ್​ ದೂರ ಎಸೆಯುವ ಮೂಲಕ ಜೂಲಿಯನ್ ವೆಬರ್​ರನ್ನು ಹಿಂದಿಕ್ಕಿ ವಿನ್​ ಆದರು.

ನೀರಜ್ ಚೋಪ್ರಾ ಅವರು ತಮ್ಮ ಮೊದಲ ಹಂತದ ಎಸೆತದಲ್ಲಿ ಭರ್ಚಿಯನ್ನು ಅಷ್ಟೇನೂ ದೂರ ಎಸೆದಿರಲಿಲ್ಲ. ಬಳಿಕ 2ನೇ ಎಸೆತದಲ್ಲಿ 83.52 ಮೀಟರ್​ ದೂರ ಭರ್ಚಿ ಎಸೆದಿದ್ದಾರೆ. ಇದನ್ನೆ ಮುಂದುವರೆಸಿದ ಚೋಪ್ರಾ ಅವರು 3ನೇ ಎಸೆತದಲ್ಲಿ 85.04 ಮೀಟರ್​ ಎಸೆಯುವ ಮೂಲಕ ಟೂರ್ನಿಯಲ್ಲಿ 2ನೇ ಸ್ಥಾನ ಪಡೆದುಕೊಂಡರು. ನಂತರ 4ನೇ ಬಾರಿ ಭರ್ಚಿ ಎಸೆದ ಚೋಪ್ರಾ, ಬರೋಬ್ಬರಿ 87.66 ಮೀಟರ್​ ದೂರ ಎಸೆಯುವ ಮೂಲಕ ಇಡೀ ಟೂರ್ನಿಯಲ್ಲಿಯೇ ಪ್ರಥಮ ಸ್ಥಾನ ಪಡೆಯುವುದರಿಂದ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಇನ್ನು ನೀರಾಜ್​ ಚೋಪ್ರಾ ಅವರು 2018ರಲ್ಲಿ ಕಾಮನ್​ ವೆಲ್ತ್ ಗೇಮ್ಸ್​ ಮತ್ತು ಏಷ್ಯಾನ್​ ಗೇಮ್ಸ್​ನಲ್ಲಿ ಪ್ರಥಮ ಸ್ಥಾನ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. 2021ರಲ್ಲಿ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್​ ಗೇಮ್ಸ್​ನಲ್ಲಿ 87.58 ಮೀಟರ್​ ದೂರ ಭರ್ಚಿ ಎಸೆಯುವ ಮೂಲಕ ಬಂಗಾರದ ಪದಕ ಗೆದ್ದುಕೊಂಡಿದ್ದರು. ಇದರಿಂದ ನೀರಾಜ್​ ಚೋಪ್ರಾ ಭಾರತದದ್ಯಾಂತ ಹೆಚ್ಚು ಖ್ಯಾತಿ ಗಳಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚಿನ್ನದ ಹುಡುಗನಿಗೆ ಮತ್ತೊಂದು ‘ಚಿನ್ನ’; ಜಾವೆಲಿನ್​ ಸ್ಟಾರ್ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ..!

https://newsfirstlive.com/wp-content/uploads/2023/07/NEERAJ_CHOPRA_1.jpg

Load More