newsfirstkannada.com

‘ಚಿನ್ನ’ದ ಹುಡುಗನ ಮತ್ತೊಂದು ಐತಿಹಾಸಿಕ ಸಾಧನೆ.. ಭಾರತಕ್ಕೆ ಇನ್ನೊಂದು ಬಂಗಾರದ ಪದಕ..!

Share :

28-08-2023

    ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ನೀರಜ್ ಚೋಪ್ರಾಗೆ ಚಿನ್ನ

    ಪಾಕಿಸ್ತಾನಕ್ಕೆ ಒಲಿದ ಬೆಳ್ಳಿ, ಮೂರನೇ ಸ್ಥಾನ ಯಾವ ದೇಶದ ಪಾಲು..?

    ಜಾವೆಲಿನ್ ಥ್ರೋನಲ್ಲಿ ಐದು ಮತ್ತು ಆರನೇ ಸ್ಥಾನವೂ ಭಾರತದ ಪಾಲು

ಹಂಗೇರಿಯ ಬುಡಾಪೆಸ್ಟ್​ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯ ಸಾಧನೆ ಮಾಡಿದ್ದಾರೆ. ಈ ಮೂಲಕ ನೀರಜ್ ಚೋಪ್ರಾ ಅವರು ಎಲ್ಲಾ ಗ್ಲೋಬಲ್ ಮೆಡಲ್​​ಗಳನ್ನು ಗೆದ್ದುಕೊಂಡಂತಾಗಿದೆ. ಒಲಿಂಪಿಕ್ ಗೋಲ್ಡ್​ ಮೆಡಲ್, ಡೈಮಂಡ್​ ಟ್ರೋಫಿ, ವರ್ಲ್ಡ್​ ಚಾಂಪಿಯನ್​ಶಿಪ್ ಗೋಲ್ಡ್​ ಮೆಡಲ್ ಹಾಗೂ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲೂ ಪ್ರಶಸ್ತಿಯನ್ನು ಗೆದ್ದುಕೊಂಡಂತಾಗಿದೆ.

ಫೈನಲ್​​​ನಲ್ಲಿ ನೀರಜ್ ಚೋಪ್ರಾ ಎಸೆದ ದೂರು

  • 88.17 ಮೀಟರ್
  • 86.32 ಮೀಟರ್
  • 84.73 ಮೀಟರ್
  • 87.73 ಮೀಟರ್
  • 83.98 ಮೀಟರ್​

ಇನ್ನು ಪಾಕಿಸ್ತಾನ ಅರ್ಷದ್ ನದೀಮ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 87.82 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನದಲ್ಲಿ ಉಳಿದುಕೊಂಡರು. ಕಂಚಿನ ಪದಕವು ಯೂರೋಪ್ ದೇಶದ Czech Republic ದೇಶದ ಪಾಲಾಗಿದೆ.
ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತಿಬ್ಬರು ಸಾಧನೆ ಮಾಡಿದ್ದಾರೆ. ಕಿಶೋರೆ ಜೆನಾ ಅವರು 84.77 ಮೀಟರ್ ದೂರ ಎಸೆಯುವ ಮೂಲಕ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಡಿಪಿ ಮನು ಅವರು 84.14 ಮೀಟರ್ ದೂರ ಎಸೆದು 6 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಚಿನ್ನ’ದ ಹುಡುಗನ ಮತ್ತೊಂದು ಐತಿಹಾಸಿಕ ಸಾಧನೆ.. ಭಾರತಕ್ಕೆ ಇನ್ನೊಂದು ಬಂಗಾರದ ಪದಕ..!

https://newsfirstlive.com/wp-content/uploads/2023/08/NIRAJ_CHOPRA.jpg

Load More