Advertisment

‘ನದೀಮ್​ ಕೂಡ ನನ್ನ ಮಗನಿದ್ದಂತೆ’.. ಚಿನ್ನದಂಥಾ ಮಾತನಾಡಿ ಎಲ್ಲರ ಹೃದಯ ಗೆದ್ದ ನೀರಜ್​ ಚೋಪ್ರಾ ತಾಯಿ

author-image
AS Harshith
Updated On
ಗುರುವಿಲ್ಲ, ಜಾವೆಲಿನ್​ ಖರೀದಿಸಲು ಹಣವಿಲ್ಲ.. ಸಖತ್​​ ಡಿಫರೆಂಟಾಗಿದೆ ಪಾಕ್​ ಅಸಲಿ ‘ಚಿನ್ನ’ ನದೀಮ್​ ಕತೆ
Advertisment
  • ನದೀಮ್​ ಸಾಧನೆಯನ್ನು ಹಾಡಿ ಹೊಗಳಿದ ನೀರಜ್​ ಚೋಪ್ರಾ ತಾಯಿ
  • ಹೊಸ ದಾಖಲೆ ಬರೆದ ಪಾಕಿಸ್ತಾನದ 27 ವರ್ಷದ ಅರ್ಷದ್​ ನದೀಮ್
  • ಜಾವೆಲಿನ್​ ಎಸೆತದಲ್ಲಿ ಪಾಕ್​ಗೆ ಮೊದಲ ಚಿನ್ನ ತಂದು ಕೊಟ್ಟ ನದೀಮ್

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪಾಕಿಸ್ತಾನದ ಅರ್ಷದ್​ ನದೀಮ್​ ಚಿನ್ನ ಗೆದ್ದಿದ್ದಾರೆ. ಆ ಮೂಲಕ ಪಾಕ್​ಗೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ. ನೀರಜ್​ ಚೋಪ್ರಾಗೆ ಪ್ರಬಲ ಪೈಪೋಟಿ ನೀಡಿದ ನದೀಮ್​ ಮೊದಲ ಸ್ಥಾನ ಕಾಯ್ದಿರಿಸಿಕೊಂಡಿದ್ದಾರೆ.

Advertisment

ನದೀಮ್​ ಗುರಿ ಮತ್ತು ಪೈಪೋಟಿಯನ್ನು ಗಮನಿಸಿದ ನೀರಜ್​​ ಚೋಪ್ರಾ ತಾಯಿ ಸರೋಜ್​ ದೇವಿ ​ಆತನನ್ನು ಹೊಗಳಿದ್ದಾರೆ. ಆ ಮೂಲಕ ಗಡಿಯಾಚೆಗಿನ ಅಭಿಮಾನಿಗಳ ಹೃದಯವನ್ನು ಅವರು ಗೆದ್ದಿದ್ದಾರೆ.

publive-image

ಸರೋಜ್​ ದೇವಿ ‘‘ನಾವು ಬೆಳ್ಳಿಯಿಂದ ಸಂತೋಷವಾಗಿದ್ದೇವೆ. ಚಿನ್ನ ಪಡೆದವನು ಕೂಡ ನನ್ನ ಮಗ’’ ಎಂದು ಹೇಳಿದ್ದಾರೆ.

ಪಾಕ್​ ಅಸಲಿ ‘ಚಿನ್ನ’ ನದೀಮ್

27 ವರ್ಷದ ಅರ್ಷದ್​ ನದೀಮ್​​ ಪಂಜಾಬ್​ನ ಖನೇವಾಲ್​​ ಗ್ರಾಮದ ನಿವಾಸಿ. 6 ಅಡಿ ಎತ್ತರದ ಇವರು ನಿನ್ನೆ ಜಾವೆಲಿನ್​ ವಿಭಾಗದಲ್ಲಿ 92.97 ಮೀಟರ್​​ ಎಸೆದು ಇತಿಹಾಸ ನಿರ್ಮಿಸಿದ್ದಾರೆ.

Advertisment

publive-image

ನೀರಜ್​ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ಪಡೆಯಲೆಂದು 2 ವರ್ಷಗಳಿಂದ ಸತತ ಅಭ್ಯಾಸ ಮಾಡಿದ್ದಾರೆ. ಫಿನ್​ಲ್ಯಾಂಡ್​​ ಮತ್ತು ಜರ್ಮನಿಯಲ್ಲಿ ತಯಾರಿ ನಡೆಸಿದ್ದಾರೆ. ಆದರೆ ಅರ್ಷದ್​ ನದೀಮ್ ಕತೆ ಹಾಗಲ್ಲ. ಅವರ ಬಳಿ ಜಾವೆಲಿನ್​ ಖರೀದಿಸಲು ಹಣವೇ ಇರಲಿಲ್ಲ. ತರಬೇತುದಾರರು ಯಾರಿಲ್ಲ. ಮತ್ತೊಂದೆಡೆ ನದೀಮ್​ರನ್ನ ಒಲಿಂಪಿಕ್ಸ್​ಗೆ ಕಳುಹಿಸಲು ಪಾಕ್​ ಸರ್ಕಾರದ ಬಳಿ ಫಂಡ್​ ಕೂಡ ಇರಲಿಲ್ಲ.

ಪಾಕಿಸ್ತಾನ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಮೊದಲ ಚಿನ್ನವನ್ನು ಗೆದ್ದುಕೊಂಡಿದೆ. ಅರ್ಷದ್​ ನದೀಮ್ ಅವರು ದೇಶಕ್ಕಾಗಿ ಮೊದಲ ಚಿನ್ನ ಗೆದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment