newsfirstkannada.com

ಡ್ರೋನ್​ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್​ ಗಿಫ್ಟ್​; ದಿದಿ ಏನು ಕೊಟ್ರು?

Share :

Published June 13, 2024 at 6:31am

    ಬಿಗ್​ಬಾಸ್​ ಮೂಲಕ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದ ಡ್ರೋನ್ ಪ್ರತಾಪ್

    ಬಿಗ್​ಬಾಸ್ ನೀತು ಕೊಟ್ಟ ಗಿಫ್ಟ್​ ನೋಡಿ ಡ್ರೋನ್​ ಪ್ರತಾಪ್ ಫುಲ್​ ಖುಷ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಡ್ರೋನ್ ಪ್ರತಾಪ್ ವಿಡಿಯೋ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಡ್ರೋನ್ ಪ್ರತಾಪ್​​ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿದ್ದಾರೆ. ಇನ್ನು, ನೆಚ್ಚಿನ ಸೆಲೆಬ್ರಿಟಿಗೆ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

ಇನ್ನು, ತಮ್ಮನ ಸ್ಥಾನವನ್ನು ಪಡೆದುಕೊಂಡ ಡ್ರೋನ್​ ಪ್ರತಾಪ್​ ಹುಟ್ಟು ಹಬ್ಬವನ್ನು ಬಿಗ್​ಬಾಸ್​ ಖ್ಯಾತಿಯ ನೀತು ವನಜಾಕ್ಷಿ ಆಚರಿಸಿದ್ದಾರೆ. ನೀತು ವನಜಾಕ್ಷಿ ಅವರು ಡ್ರೋನ್​​ ಪ್ರತಾಪ್​ಗೆ ತಮ್ಮನ ಸ್ಥಾನವನ್ನು ಕೊಟ್ಟಿದ್ದಾರೆ. ಅದರಲ್ಲೂ ಬಿಗ್​ಬಾಸ್​​ನಲ್ಲಿದ್ದಾಗ ಡ್ರೋನ್​ ಪ್ರತಾಪ್​​, ನೀತು ವನಜಾಕ್ಷಿ ಅವರಿಗೆ ದಿದಿ ಅಂತ ಕರೆಯುತ್ತಿದ್ದ. ಜೊತೆಗೆ ಬಿಗ್​ಬಾಸ್​​ ಸ್ಪರ್ಧಿಗಳ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಡ್ರೋನ್ ಪ್ರತಾಪ್​ಗೆ ನೀತು ವಿಶ್​ ಮಾಡುವುದರ ಜೊತೆಗೆ ಕೇಕ್​ ಕಟ್​ ಮಾಡಿಸಿ ಸಂಭ್ರಮಿಸಿದ್ದಾರೆ.

ಸದ್ಯ ಇದೇ ವಿಡಿಯೋವನ್ನು ನೀತು ವನಜಾಕ್ಷಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳನ್ನು  ಮುದ್ದಿನ ತಮ್ಮನಿಗೆ ತಿಳಿಸಿದ್ದಾರೆ. ನೂರಾರು ಕಾಲ ನಗು ನಗುತಾ ಸಂತೋಷವಾಗಿ ಹೆಮ್ಮರವಾಗಿ ಬೆಳೆದು ನಿನ್ನ ಕನಸೆಲ್ಲ ನನಸಾಗಲಿ ಅಂತ ಬರೆದುಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜೊತೆಗೆ ಡ್ರೋನ್​ ಪ್ರತಾಪ್​ ಹಟ್ಟು ಹಬ್ಬಕ್ಕೆ ನೀತು ಅವರು ಪುಟ್ಟ ಗಿಡವೊಂದನ್ನು ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಆ ಗಿಫ್ಟ್​ ಅನ್ನು ನೋಡಿದ ಡ್ರೋನ್​ ಪ್ರತಾಪ್ ಫುಲ್​ ಸಂತಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೋನ್​ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್​ ಗಿಫ್ಟ್​; ದಿದಿ ಏನು ಕೊಟ್ರು?

https://newsfirstlive.com/wp-content/uploads/2024/06/drone-prathapa.jpg

Load More