newsfirstkannada.com

ಶ್ರೀಮಂತ ಹುಡುಗರೇ ಟಾರ್ಗೆಟ್​, ಹನಿಟ್ರ್ಯಾಪ್​ಗೆ ಬಿದ್ದವರಿಗೆ ಜೆ.ಪಿ ನಗರದಲ್ಲಿ ಮುಹೂರ್ತ ಫಿಕ್ಸ್​; ನವರಂಗಿ ಆಟವಾಡುತ್ತಿದ್ದ ನೇಹಾ ಕೊನೆಗೂ ಅಂದರ್​ 

Share :

16-08-2023

    ಹನಿಟ್ರ್ಯಾಪ್​ ಕೇಸ್​ನ ಕಿಂಗ್​ಪಿನ್ ಲೇಡಿ ನೇಹಾ ಅರೆಸ್ಟ್​

    ಸತತ 15 ದಿನಗಳ ಕಾರ್ಯಾಚರಣೆ ಬಳಿಕ ನೇಹಾ ಬಂಧನ

    ತಬ್ಬಿಕೊಂಡು ವೆಲ್ಕಂ ಮಾಡಿ ಬಲೆಗೆ ಕೆಡವುತ್ತಿದ್ದ ಲೇಡಿ

ಹನಿಟ್ರ್ಯಾಪ್​ ಕೇಸ್​ನ ಕಿಂಗ್​ಪಿನ್ ಲೇಡಿ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ಸತತ 15 ದಿನಗಳ ಕಾರ್ಯಾಚರಣೆ ಬಳಿಕ ನೇಹಾ ಅರೆಸ್ಟ್ ಆಗಿದ್ದಾಳೆ. ಮುಂಬೈನಲ್ಲಿ ಅಡಗಿ ಕುಳಿತ್ತಿದ್ದವಳನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಏಕಾಂತವಾಗಿ ಸಮಯ ಕಳೆಯೋಣ ಬಾ

ಕಿಲಾಡಿ ನೇಹಾ ಟೆಲಿಗ್ರಾಂನಲ್ಲಿ ಮಧ್ಯರಾತ್ರಿ ಯುವಕರಿಗೆ ಮೆಸೇಜ್ ಮಾಡುತ್ತಿದ್ದಳು. ಶ್ರೀಮಂತ ಯುವಕರನ್ನ ಟಾರ್ಗೆಟ್ ಮಾಡಿ ಮೆಸೇಜ್​ ಕಳುಹಿಸುತ್ತಿದ್ದಳು. ಮೆಸೇಜ್​ ಮಾಡುತ್ತಾ ಕೊನೆಗೆ ಏಕಾಂತವಾಗಿ ಸಮಯ ಕಳೆಯೋಣ ಎಂದು ತನ್ನ ಬಳಿ ಕರೆಸುತ್ತಿದ್ದಳು.

ತಬ್ಬಿಕೊಂಡು ವೆಲ್ಕಂ

ಅಚ್ಚುಕಟ್ಟಾಗಿಯೇ ಪ್ಲಾನ್​ ಹೆಣೆಯುತ್ತಿದ್ದ ನೇಹಾ ಜೆ.ಪಿ. ನಗರದ 5ನೇ ಹಂತದ ಮನೆಯೊಂದಕ್ಕೆ ಯುವಕರನ್ನು ಕರೆಸುತ್ತಿದ್ದಳು. ಮನೆಗೆ ಬಂದೋರನ್ನ ತಬ್ಬಿಕೊಂಡು ವೆಲ್ಕಂ ಮಾಡಿ ಬಲೆಗೆ ಕೆಡವುತ್ತಿದ್ದಳು. ಹೀಗೆ ಆಕೆ ತೋರಿಸುವ ಆಸೆಗೆ ಮರುಳಾಗಿ ಬರುತ್ತಿದ್ದವರನ್ನು ನೇಹಾಳ ಗ್ಯಾಂಗ್​ನಲ್ಲಿದ್ದ ಯುವಕರು ಫೋಟೋ ಕ್ಲಿಕ್ಕಿಸ್ತಿದ್ದರು.

ಹಣಕ್ಕೆ ಡಿಮ್ಯಾಂಡ್

ನೇಹಾ ಗ್ಯಾಂಗ್​ನಲ್ಲಿ ಶರಣ್ ಪ್ರಕಾಶ್, ಅಬ್ದುಲ್ ಖಾದರ್, ಯಾಸಿನ್​ ಎಂಬ ಮೂವರು ಖತರ್ನಾಕ್​​ಗಳಿದ್ದರು. ಆಕೆಯ ಮೆಸೇಜ್​ಗೆ ಮರುಳಾಗಿ ಬಂದ ಯುವಕರ ಕೈಯಿಂದ ನೇಹಾ ಗ್ಯಾಂಗ್​ ಮೊಬೈಲ್ ಕಸಿದುಕೊಂಡು ಕೊನೆಗೆ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು.

ನೀನು ಕನ್ವರ್ಟ್ ಆಗಿ ಮದುವೆ ಆಗಬೇಕು

ಹಣ ಕಸಿಯೋದು ಮಾತ್ರವಲ್ಲ, ಅದಕ್ಕೂ ಮೊದಲು ಯುವತಿ ಮುಸ್ಲಿಂ, ನೀನು ಕನ್ವರ್ಟ್ ಆಗಿ ಮದುವೆ ಆಗಬೇಕು. ಮದುವೆ ಆಗೋದಿಲ್ಲ ಅಂದರೆ ದೂರು ಕೊಡ್ತೀವಿ. ನಿಮ್ಮ ಮನೆಯವರಿಗೆ ಫೋಟೋ, ವಿಡಿಯೋ ಕಳಿಸುತ್ತೇವೆ ಎಂದು ಬೆದರಿಕೆ ಹಾಕಿ ಯುವಕರಿಂದ ಹಣ ಪೀಕುತ್ತಿದ್ದರು. ಹೀಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ 10ಕ್ಕೂ ಹೆಚ್ಚು ಯುವಕರಿಂದ 30 ಲಕ್ಷ ವಸೂಲಿ ಮಾಡಿದ್ದಾರೆ.

ಹೀಗೆ ಯುವಕರನ್ನು ಹನಿಟ್ರ್ಯಾಪ್ ಮಾಡುವ ಮೂಲಕ ಮೋಸ ಮಾಡುತ್ತಿದ್ದ ನೇಹಾಳ ನವರಂಗಿನಾಟವನ್ನ ಬೇರು ಸಮೇತ ಪುಟ್ಟೇನಹಳ್ಳಿ ಪೊಲೀಸರು ಕಿತ್ತೆಸೆದಿದ್ದಾರೆ. ಸದ್ಯ ಈ ಕೇಸ್​ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಮಂತ ಹುಡುಗರೇ ಟಾರ್ಗೆಟ್​, ಹನಿಟ್ರ್ಯಾಪ್​ಗೆ ಬಿದ್ದವರಿಗೆ ಜೆ.ಪಿ ನಗರದಲ್ಲಿ ಮುಹೂರ್ತ ಫಿಕ್ಸ್​; ನವರಂಗಿ ಆಟವಾಡುತ್ತಿದ್ದ ನೇಹಾ ಕೊನೆಗೂ ಅಂದರ್​ 

https://newsfirstlive.com/wp-content/uploads/2023/08/Neha-1.jpg

Load More