newsfirstkannada.com

ಮಕ್ಕಳ ಭವಿಷ್ಯದೊಂದಿಗೆ ರಾಜಕೀಯ; ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು; ವಿದ್ಯಾರ್ಥಿಗಳ ಪಾಡೇನು..?

Share :

07-07-2023

    ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿದ್ದ ಸಿದ್ದರಾಮಯ್ಯ

    ಈ ವರ್ಷದಿಂದ ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಎಂದ ಸಿಎಂ

    ಸದ್ಯ ಎನ್​​ಇಪಿ ಅಡಿಯಲ್ಲಿ ಓದುತ್ತಿರೋ ರಾಜ್ಯದ ವಿದ್ಯಾರ್ಥಿಗಳ ಪಾಡೇನು?

ಬೆಂಗಳೂರು: ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಬರೋಬ್ಬರಿ 76 ವರ್ಷಗಳ ಕಳೆದಿವೆ. ಈ ಸ್ವತಂತ್ರ ಭಾರತದಲ್ಲಿ ಯಾರೂ ಬೇಕಾದರೂ ಓದಿ ಉತ್ತಮ ಜೀವನ ರೂಪಿಸಿಕೊಳ್ಳುವ ಅವಕಾಶವನ್ನು ದೇಶದ ಸಂವಿಧಾನ ಕೊಟ್ಟಿದೆ. ಹಲವು ವರ್ಷಗಳ ಇತಿಹಾಸವಿರೋ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಗುರು-ಶಿಷ್ಯ ಪರಂಪರೆ ಭದ್ರ ಬುನಾದಿ. ಕಾಲಕ್ಕೆ ತಕ್ಕಂತೆ ಸಮಾಜ ಬದಲಾಗುತ್ತಾ ಹೋದಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗಿದೆ. ಹೀಗಾಗಿ ಈ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಬದಲಾವಣೆ ಕೂಡ ಅನಿವಾರ್ಯವಾಗಿದೆ.

ಈಗಿನ ಶಿಕ್ಷಣ ವ್ಯವಸ್ಥೆಯೂ ಕಾಲಕಾಲಕ್ಕೆ ಬದಲಾಗುತ್ತಲೇ ಇದೆ. ಕಳೆದ ಹತ್ತಾರು ವರ್ಷಗಳಿಂದ ನಾವು ದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಹೊಸ ಸವಾಲುಗಳನ್ನು ಎದುರಿಸಿದ್ದೇವೆ. ಒಂದು ಶಿಕ್ಷಣ ನೀತಿ ಕೇವಲ ಶಿಕ್ಷಣ ವ್ಯವಸ್ಥೆಯನ್ನು ಮಾತ್ರ ಬದಲಿಸುವುದಿಲ್ಲ, ಬದಲಿಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹೊಸ ಪೀಳಿಗೆ ಏನು ಕಲಿಯಬೇಕು ಎಂಬ ದೂರದೃಷ್ಟಿಯಿಂದ ರೂಪಿಸುವುದೇ ಶಿಕ್ಷಣ ನೀತಿ.

ಓದುವುದು, ಬರೆಯುವುದು ಮಾತ್ರವಲ್ಲದೇ ಶಿಕ್ಷಣದ ಮೂಲ ಉದ್ದೇಶವೇ ವ್ಯಕ್ತಿತ್ವ ನಿರ್ಮಾಣ. ವ್ಯಕ್ತಿತ್ವ ನಿರ್ಮಾಣ ಮಾಡುವ ಶಿಕ್ಷಣ ವ್ಯವಸ್ಥೆ ಮೊದಲಿನಿಂದಲೂ ನಮ್ಮಲ್ಲಿಲ್ಲ. ಇದಕ್ಕೆ ಕಾರಣ ಸಮಾಜದಲ್ಲಿ ನಿತ್ಯ ನಡೆಯುತ್ತಿರೋ ಅಪರಾಧ ಚಟುವಟಿಕೆಗಳು. ಹೀಗಿರುವಾಗಲೇ ಬರೋಬ್ಬರಿ ಹಲವು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಮೂರು ವರ್ಷಗಳ ಹಿಂದೆ 2020 ಜುಲೈನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿತ್ತು.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮೋದಿ ಹೇಳಿದ್ದೇನು?

ಶಿಕ್ಷಣ ಕ್ಷೇತ್ರದಲ್ಲಿ ಮಾತೃ ಭಾಷೆಗೆ ಆದ್ಯತೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸುಮಾರು ವರ್ಷಗಳಿಂದ ಮಾತೃಭಾಷಾ ಕಲಿಕೆಗೆ ಒತ್ತು ನೀಡಿ ಎಂದು ಆಗ್ರಹಿಸುತ್ತಲೇ ಇದ್ದಾರೆ. ಹೀಗಾಗಿ ಇನ್ಮುಂದೆ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಕಲಿಯಬೇಕು. ಕೇವಲ ಜ್ಞಾನ ಸಂಪಾದನೆ ಮಾತ್ರವಲ್ಲ ಬದುಕು ಕಟ್ಟಿಕೊಡುವುದು ಶಿಕ್ಷಣದ ಉದ್ದೇಶವಾಗಬೇಕು. ಕೃಷಿ, ತೋಟಗಾರಿಕೆ, ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಾಭಿವೃದ್ಧಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು, ಉತ್ತಮ ಸಂಬಳ ಪಡೆಯುವ ಜ್ಞಾನ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ ಎಂದಿದ್ದರು.

ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಜಾರಿ

ಇನ್ನು, ಸದ್ಯ ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ತೆಗೆದು ಹಾಕಿದೆ. ಜತೆಗೆ ಈ ವರ್ಷದಿಂದಲೇ ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾರಕ. ಧಾರ್ಮಿಕ, ಸಾಂಸ್ಕೃತಿಕ, ಭಾಷಾವಾರು ವೈವಿಧ್ಯತೆ ಹೊಂದಿರುವ ಭಾರತದಂತಹ ದೇಶಗಳಿಗೆ ಏಕರೂಪ ಶಿಕ್ಷಣ ನೀತಿ ಸರಿ ಹೊಂದುವುದಿಲ್ಲ. ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕತೆ ದೃಷ್ಟಿಕೋನದಿಂದ ಹೊಸ ಶಿಕ್ಷಣ ನೀತಿ ತರಲಾಗುವುದು. ನಾವು ಜಾರಿ ಮಾಡುವ ಹೊಸ ಶಿಕ್ಷಣ ನೀತಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ. ಯುವಜನತೆ ಜಾಗತಿಕವಾಗಿ ಪ್ರಬಲ ಸ್ಪರ್ಧೆಯೊಡ್ಡಲಿದ್ದಾರೆ. ಅಪಾರ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಗೆ ಆರಂಭದಿಂದಲೂ ಕಾಂಗ್ರೆಸ್​ ವಿರೋಧ

ಪ್ರಧಾನಿ ಮೋದಿ ಸರ್ಕಾರ ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಪಕ್ಷ ಆರಂಭದಿಂದಲೂ ವಿರೋಧಿಸುತ್ತಾ ಬಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹಲವು ಲೋಪದೋಷಗಳನ್ನು ಹೊಂದಿದೆ. ಇದು ಯಾವುದೇ ಭಾರತೀಯ ಶಿಕ್ಷಣವನ್ನು ಸುಧಾರಿಸುವ ಉದ್ದೇಶ ಹೊಂದಿಲ್ಲ. ಬದಲಿಗೆ ಮಕ್ಕಳಲ್ಲಿ ಕಲಿಕೆಗೆ ಬದಲಿಗೆ ತಾರತಮ್ಯವನ್ನು ಹರಡಲಿದೆ ಎಂದು ಕಾಂಗ್ರೆಸ್​ ವಿರೋಧ ಮಾಡಿತ್ತು.

2 ವರ್ಷಗಳ ಹಿಂದೆ ಬೊಮ್ಮಾಯಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ

ಕರ್ನಾಟಕದಲ್ಲಿ 2 ವರ್ಷಗಳ ಹಿಂದೆ ಅಂದಿನ ಸಿಎಂ ಬಸವರಾಜ್​ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಸಿಎನ್ ಅಶ್ವತ್ಥನಾರಾಯಣ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರು. ಎನ್​​ಇಪಿ ಹೊಸ ಭಾರತ ನಿರ್ಮಾಣ ಮಾಡುವ ಪ್ರಬಲ ಶಕ್ತಿ ಹೊಂದಿದೆ. ಆಧುನಿಕ ದೃಷ್ಟಿಕೋನ, ದೇಶದ ಅಗತ್ಯಗಳು, ಜಾಗತಿಕ ಸವಾಲು. ಹೀಗೆ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರೂಪಿಸಲಾದ ಪರಿಪೂರ್ಣ ಶಿಕ್ಷಣ ನೀತಿ ಇದು. ದೇಶ ತಾಂತ್ರಿಕವಾಗಿ, ವೈಜ್ಞಾನಿಕವಾಗಿ ನಾಗಾಲೋಟದಲ್ಲಿ ಸಾಗುತ್ತಿದೆ. ಇಂಥ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ಪದ್ಧತಿ ಇರಲೇಬೇಕು. ಮೋದಿ ಸರ್ಕಾರ ಶಿಕ್ಷಣ ಪದ್ಧತಿಯಲ್ಲಿ ಏಕರೂಪತೆ ತರುವುದು, ಸರ್ವರಿಗೂ ಶಿಕ್ಷಣ ನೀಡುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದಿದ್ದರು.

ವಿದ್ಯಾರ್ಥಿಗಳ ಭವಿಷ್ಯವೇನು..?

ಕಳೆದ ಎರಡು ವರ್ಷಗಳಿಂದ ರಾಜ್ಯದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎನ್​​ಇಪಿ ಪ್ರಕಾರ ವಿದ್ಯಾರ್ಥಿಗಳು ಡಿಗ್ರಿಯನ್ನು 4 ವರ್ಷ ಓದಬೇಕಿದೆ. ಪಠ್ಯವೂ ಬದಲಾಗಿದ್ದು, ವಿದ್ಯಾರ್ಥಿಗಳು ಈಗಾಗಲೇ ತಮಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಿರುವಾಗ ಕನಿಷ್ಠ ಇನ್ನು ಮೂರು ವರ್ಷ ಎನ್​​ಇಪಿ ಅಡಿಯಲ್ಲೇ ಮಕ್ಕಳು ಶಿಕ್ಷಣ ಮುಂದುವರಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ದಿಢೀರ್​ ಆದೇಶದಿಂದ ರಾಜ್ಯದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಈ ಸಮಸ್ಯೆಯನ್ನು ಸರ್ಕಾರ ಯಾವ ರೀತಿ ಬಗೆಹರಿಸಲಿದೆ ಎಂಬುದು ಪ್ರಶ್ನಾರ್ಹ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಮುಖ 10 ಅಂಶಗಳು ಹೀಗಿತ್ತು!

1. ಪ್ರಾದೇಶಿಕ ಭಾಷೆಯಲ್ಲೇ 5ನೇ ತರಗತಿಯವರೆಗೆ ಶಿಕ್ಷಣ. 8ನೇ ತರಗತಿವರೆಗೂ ಎಲ್ಲಾ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಸ್ಥಳೀಯ ಭಾಷೆಯೇ ಆಗಿರಬೇಕು.

2. 10+2 ರಚನೆಯನ್ನು 5+3+3+4 ನೊಂದಿಗೆ ಬದಲಾಯಿಸಲಾಗಿತ್ತು. ಇದು 12 ವರ್ಷಗಳ ಶಾಲೆ ಮತ್ತು ಮೂರು ಅಂಗನವಾಡಿ ಅಥವಾ ಪೂರ್ವ ಶಾಲೆಯನ್ನು ಒಳಗೊಂಡಿದೆ.

3. ಪ್ರತಿವರ್ಷ ನಡೆಯುವ ಪರೀಕ್ಷೆಗಳ ಬದಲು, ಶಾಲಾ ವಿದ್ಯಾರ್ಥಿಗಳು ಕೇವಲ 3, 5 ಮತ್ತು 8 ನೇ ತರಗತಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಇತರ ವರ್ಷಗಳಲ್ಲಿ ಮೌಲ್ಯಮಾಪನವು ನಿಯಮಿತ ಮತ್ತು ರಚನಾತ್ಮಕ ಶೈಲಿಗೆ 7 ಪದವಿ ಹಂತದಲ್ಲಿ ಬಹು ಬದಲಾಗುತ್ತದೆ.

4. 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಇವುಗಳನ್ನು ಸಹ ಸಮಗ್ರ ಅಭಿವೃದ್ಧಿಯೊಂದಿಗೆ ಮರು ವೃತ್ತಿಪರ ಕೋರ್ಸ್ ಅಧ್ಯಯನ ಮಾಡಬಹುದು.

5. ಕಲೆ, ವಿಜ್ಞಾನ, ವಾಣಿಜ್ಯ ಕೋರ್ಸ್​​ಗಳಲ್ಲಿ ಯಾರು ಯಾವ ವಿಷಯ ಬೇಕಾದ್ರೂ ಓದಬಹುದು.

6. ಐಐಟಿಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳು 2040 ರ ವೇಳೆಗೆ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕಲೆ ಮತ್ತು ಮಾನವಿಕ ವಿಷಯಗಳ ಸೇರ್ಪಡೆಯೊಂದಿಗೆ ಸಮಗ್ರ ಶಿಕ್ಷಣ ದತ್ತ ಸಾಗಲು ದಾರಿಯಾಗುತ್ತದೆ.

7. ಉನ್ನತ ಶಿಕ್ಷಣವನ್ನು ನಿಯಂತ್ರಿಸಲು ಭಾರತದ ಉನ್ನತ ಶಿಕ್ಷಣ ಮಂಡಳಿ (ಎಚ್‌ಇಸಿಐ) ಸ್ಥಾಪಿಸಲಾಗುವುದು.

ಲೇಖನ: ಗಣೇಶ್​​ ನಚಿಕೇತು, ನ್ಯೂಸ್​​ಫಸ್ಟ್​​​

ಮಕ್ಕಳ ಭವಿಷ್ಯದೊಂದಿಗೆ ರಾಜಕೀಯ; ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು; ವಿದ್ಯಾರ್ಥಿಗಳ ಪಾಡೇನು..?

https://newsfirstlive.com/wp-content/uploads/2023/07/Siddaramaiah_123.jpg

Load More