ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು
ನೇಪಾಳದ ಜಜಾರ್ಕೋಟ್ನಲ್ಲಿ ಭೂಕಂಪನ
ಭೂಮಿ ಕಂಪಿಸಿದ ಭಾಗದಲ್ಲಿ 19 ಲಕ್ಷ ಜನಸಂಖ್ಯೆ ಇದೆ
ನಿನ್ನೆ ತಡರಾತ್ರಿ ಹಿಮಾಲಯದ ತಪ್ಪಲು ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿ 69 ಮಂದಿ ಮೃತಪಟ್ಟಿದ್ದಾರೆ.
ನೇಪಾಳದ ಜಜಾರ್ಕೋಟ್ನ ಪಶ್ಚಿಮ ಭಾಗದಲ್ಲಿ 6.4 ತೀವ್ರತೆಯ ಭೂಕಂಪನ ದಾಖಲಾಗಿದೆ. ಇದು ಬೆಟ್ಟ-ಗುಡ್ಡಪ್ರದೇಶವಾಗಿದ್ದು ಸುಮಾರು 19 ಲಕ್ಷ ಜನಸಂಖ್ಯೆ ಹೊಂದಿದೆ. ಜಜಾರ್ಕೋಟ್ ಜಿಲ್ಲೆಯಲ್ಲಿ 34 ಮಂದಿ ಹಾಗೂ ಪಕ್ಕದ ಪಶ್ಚಿಮ ರುಕುಮ್ ಜಿಲ್ಲೆಯಲ್ಲಿ 35 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.
ನೇಪಾಳ ಪ್ರಧಾನಿ ಘಟನೆಗೆ ಸಂತಾಪ ಸೂಚಿಸಿದ್ದು ದೇಶದ 3 ಭದ್ರತಾ ಏಜೆನ್ಸಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಜಜಾರ್ಕೋಟ್ ಕಠ್ಮಂಡುವಿನಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿದೆ. ನೇಪಾಳ ಭಾಗದಲ್ಲಿ ಅಕ್ಟೋಬರ್ 3 ರಿಂದ ಭೂಕಂಪ ಸಂಭವಿಸುತ್ತಲೇ ಇದೆ. ಅದರ ಪರಿಣಾಮ ಉತ್ತರ ಭಾರತ ಮತ್ತು ದೆಹಲಿ ಎನ್ಸಿಆರ್ ಪ್ರದೇಶದಲ್ಲೂ ಪರಿಣಾಮ ಬೀರುತ್ತಿದೆ. 2022, ನವೆಂಬರ್ನಲ್ಲಿ ಸಂಭವಿಸಿದ ಭೂಕಂಪದಿಂದ 6 ಜನ ಮೃತಪಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ