10 ವರ್ಷದ ಬಳಿಕ ರಾಯಲ್ಟಿ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆ
ಪರ್ವತಾರೋಹಿಗಳು ಎಷ್ಟು ಲಕ್ಷ ರೂಪಾಯಿ ಕಟ್ಟಬೇಕು ಗೊತ್ತಾ?
ಮೌಂಟ್ ಎವರೆಸ್ಟ್ ಹತ್ತುವವರ ಹಣಕಾಸಿನ ಭಾರ ಹೆಚ್ಚಳ ಪಕ್ಕಾ!
ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಬೇಕೆಂಬ ಸಾಹಸಿಗರಿಗೆ ನೇಪಾಳ ಸರ್ಕಾರ ಶಾಕ್ ಕೊಡಲು ಮುಂದಾಗಿದೆ. ಈ ಶಿಖರವನ್ನು ಏರಲು ನಿಗಧಿ ಪಡಿಸಲಾದ ರಾಯಲ್ಟಿ ಶುಲ್ಕವನ್ನು ಇನ್ಮುಂದೆ 3 ಲಕ್ಷದಿಂದ 12 ಲಕ್ಷ ರೂಪಾಯಿಗಳವರೆಗೆ ಹೆಚ್ಚಳ ಮಾಡಲು ಮುಂದಾಗಿದೆ. ಈ ಬಗ್ಗೆ ನೇಪಾಳ ಸರ್ಕಾರ ಕ್ಯಾಬಿನೆಟ್ ಸಭೆಯ ಅನುಮೋದನೆ ಒಂದೇ ಬಾಕಿ ಇದೆ.
ನೇಪಾಳದಲ್ಲಿರುವ ಮೌಂಟ್ ಎವರೆಸ್ಟ್ 8,848.86 ಮೀಟರ್ ಎತ್ತರವಾಗಿದ್ದು ವಿಶ್ವದಲ್ಲಿ ಅತಿ ಎತ್ತರದ ಶಿಖರವಾಗಿದೆ. ಸದ್ಯ ಇದರ ತುತ್ತ ತುದಿಯನ್ನು ಮುಟ್ಟಬೇಕು ಎನ್ನುವ ವಿದೇಶಿ ಪರ್ವತಾರೋಹಿಗಳು ₹9,14,967 ರೂಪಾಯಿಗಳನ್ನು ಪಾವತಿಸಿದ್ರೆ, ನೇಪಾಳಿಯರು ಕೇವಲ 75,000 ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ. ಇದು 2015 ಜನವರಿಯಲ್ಲಿ ಈ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಆದ್ರೆ ಇನ್ಮುಂದೆ ಶಿಖರ ಏರುವ ಪರ್ವತಾರೋಹಿಗಳ ರಾಯಲ್ಟಿ ಶುಲ್ಕ ಹೆಚ್ಚಳ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮೌಂಟ್ ಎವರೆಸ್ಟ್ ಏರುವ ಪ್ರತಿ ಒಬ್ಬ ವಿದೇಶಿ ಪರ್ವತಾರೋಹಿ ₹ 3,33,174 ರಿಂದ ₹12,46,372 ಗಳಷ್ಟು ಹೊಸ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಸಿಕ್ಕ ಬಳಿಕ ಇದು 2025ರಿಂದ ಅನ್ವಯವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ವಕ್ತಾರ ಯುವರಾಜ್ ಖತಿವಾಡ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ