newsfirstkannada.com

×

INDvsNED: ಅಜೇಯ ಭಾರತಕ್ಕೆ ನೆದರ್​​ರ್ಲೆಂಡ್ಸ್‌ ಚಾಲೆಂಜ್‌.. ಪ್ಲೇಯಿಂಗ್-11ನಲ್ಲಿ ಯಾರು ಇನ್? ಯಾರು ಔಟ್‌?

Share :

Published November 12, 2023 at 10:18am

Update November 12, 2023 at 10:31am

    8 ಪಂದ್ಯ ಗೆದ್ದು ಸೆಮಿಸ್​​ ತಲುಪಿರುವ ಟೀಮ್ ಇಂಡಿಯಾ

    ಔಪಚಾರಿಕ ಪಂದ್ಯದಲ್ಲಿ ಯಾರು ಇನ್​​ ? ಯಾರು ಔಟ್​​..?

    ತ್ರಿಮೂರ್ತಿ ಕೀ ಬೌಲರ್ಸ್​ಗೆ ರೆಸ್ಟ್ ನೀಡ್ತಾರಾ ರೋಹಿತ್​​..?

ವಿಶ್ವಕಪ್​​​​ನಲ್ಲಿ ಅಜೇಯ ಓಟ ಮುಂದುವರಿಸಿರುವ ಟೀಮ್ ಇಂಡಿಯಾ ಇಂದು ನೆದರ್​ರ್ಲೆಂಡ್ಸ್​​​ ತಂಡವನ್ನ ಎದುರಿಸಲಿದೆ. ಭಾರತಕ್ಕೆ ಇದು ಔಪಚಾರಿಕ ಪಂದ್ಯ. ಆಲ್​ರೆಡಿ ಸೆಮಿ​​ಫೈನಲ್​ ಟಿಕೆಟ್ ಖಾತ್ರಿ ಆಗಿದೆ. ಹಾಗಾಗಿ ಕೀ ಬೌಲರ್ಸ್​ಗೆ ರೆಸ್ಟ್​​​ ನೀಡಿ, ಬೆಂಚ್​​​ ಸ್ಟ್ರೆಂಥ್​​ ಹೆಚ್ಚಿಸಲು ಟೀಮ್ ಇಂಡಿಯಾ ಪ್ಲಾನ್ ಮಾಡಿದೆ.

ಒಂದು ವಾರದ ಬಳಿಕ ಇಂಡಿಯನ್​ ಟೈಗರ್ಸ್​ ಘರ್ಜಿಸಲು ಸಜ್ಜಾಗಿದ್ದಾರೆ. ವಿಶ್ವಕಪ್​​​​​​​​ ಬ್ಯಾಟಲ್​​ನ ಫೈನಲ್​ ಗ್ರೂಪ್​ ಸ್ಟೇಜ್​​ ಮ್ಯಾಚ್​​​ನಲ್ಲಿ ಇಂದು ನೆದರ್​​ರ್ಲೆಂಡ್​​​​​ ತಂಡವನ್ನ ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಕ್ಲ್ಯಾಶ್​​​ ರೋಹಿತ್​​​​​​​ ಪಡೆಗೆ ಔಪಚಾರಿಕವೆನಿಸಿದೆ. ಯಾಕಂದ್ರೆ 8 ಪಂದ್ಯಗಳನ್ನ ಗೆದ್ದು ಸೆಮಿಫೈನಲ್​​​​​​​​​​​​​​​ಗೆ ಎಂಟ್ರಿಕೊಟ್ಟಿದೆ.

ಭಾರತಕ್ಕೆ ಸೆಮಿಸ್​​ ಟಿಕೆಟ್​ ಆಲ್​ರೆಡಿ ಕನ್ಫಮ್ ಆಗಿರೋದ್ರಿಂದ ಯಾವುದೇ ಟೆನ್ಷನ್ ಇಲ್ಲ. ಲೀಗ್​​ನ ಕೊನೆ​ ಪಂದ್ಯ ಸೋತರೂ ರಿಸಲ್ಟ್ ಮೇಲೆ ಪರಿಣಾಮ ಬೀರಲ್ಲ. ಹೀಗಾಗಿ ಟೀಮ್ ಮ್ಯಾನೇಜ್​​​​ಮೆಂಟ್​​ ಕೆಲ ಕೀ ಪ್ಲೇಯರ್​ಗಳಿಗೆ ರೆಸ್ಟ್​​ ನೀಡಲು ಪ್ಲಾನ್ ಮಾಡಿದೆ. ಆ ಮೂಲಕ ಬೆಂಚ್​​ ಸ್ಟ್ರೆಂಥ್​ ಹೆಚ್ಚಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಹಾಗಾದ್ರೆ ನೆದರ್​​ರ್ಲೆಂಡ್ಸ್​ ಎದುರಿನ ಪಂದ್ಯದಿಂದ ಯಾವೆಲ್ಲಾ ಆಟಗಾರರಿಗೆ ರೆಸ್ಟ್​ ನೀಡಬಹುದು ಅನ್ನೋದನ್ನ ತೋರಿಸ್ತೀವಿ ನೋಡಿ.

ಬೂಮ್ರ ಔಟ್​​​​, ಕನ್ನಡಿಗ ಪ್ರಸಿದ್ಧ್​ ಕೃಷ್ಣ ಇನ್​​​​..?

ಇಂಡಿಯನ್​ ಪೇಸರ್ಸ್​ ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. 8 ಪಂದ್ಯಗಳಿಂದ 15 ವಿಕೆಟ್​​ ಬೇಟೆಯಾಡಿರೋ ಜಸ್​ಪ್ರೀತ್​ ಬೂಮ್ರಾ ಭಾರತಕ್ಕೆ ಕೀ ಬೌಲರ್​​​. ಸೆಮೀಸ್​​ನಲ್ಲಿ ಭಾರತ ಬಲಿಷ್ಠ ನ್ಯೂಜಿಲೆಂಡ್​ ತಂಡವನ್ನ ಎದುರಿಸಲಿದೆ. ಹೀಗಾಗಿ ಮ್ಯಾನೇಜ್​​ಮೆಂಟ್​ ರಿಸ್ಕ್​​ ತೆಗೆದುಕೊಳ್ಳಲು ಸಿದ್ಧವಿಲ್ಲ. ಇಂದಿನ ಪಂದ್ಯದಲ್ಲಿ ಬೂಮ್ರಾಗೆ ರೆಸ್ಟ್​​ ನೀಡಿ ಕನ್ನಡಿಗ ಪ್ರಸಿದ್ಧ್​ ಕೃಷ್ಣರನ್ನ ಕಣಕ್ಕಿಳಿಸುವ ಪ್ಲಾನ್ ಮಾಡಿದೆ.

ಸ್ವಿಂಗ್​ ಮಾಸ್ಟರ್ ಶಮಿ ಬದಲಿ ಶಾರ್ದುಲ್​​ ಕಣಕ್ಕೆ..?

ವಿಶ್ವಕಪ್​​​​​ ರಣರಂಗದಲ್ಲಿ ಮೊಹಮ್ಮದ್ ಶಮಿ ತಮ್ಮ ಬೆಂಕಿಯುಂಡೆಯಂತಹ ದಾಳಿಯಿಂದ ಬ್ಯಾಟ್ಸ್​​ಮನ್​ಗಳನ್ನ ಕಂಗೆಡಿಸಿದ್ದಾರೆ. ಆಡಿದ 4 ಪಂದ್ಯದಿಂದ 16 ವಿಕೆಟ್ ಕಬಳಿಸಿದ್ದಾರೆ. ಈ ಸ್ವಿಂಗ್ ಮಾಸ್ಟರ್​​​ ರಿದಮ್​​ ಸೆಮೀಸ್​​​ನಲ್ಲಿ ಭಾರತಕ್ಕೆ ಅತಿ ಅಗತ್ಯ. ಇದನ್ನ ಮನಗಂಡಿರೋ ಕ್ಯಾಪ್ಟನ್ ರೋಹಿತ್​ ನೆದರ್​ರ್ಲೆಂಡ್ಸ್​ ವಿರುದ್ಧ ಶಮಿಗೆ ವಿಶ್ರಾಂತಿ ನೀಡಲು ಬಯಸಿದೆ. ಇವರ ಬದಲಿ ಆಲ್​​ರೌಂಡರ್​ ಶಾರ್ದುಲ್ ಠಾಕೂರ್​​​​​ ಆಡುವ ಸಾಧ್ಯತೆ ಇದೆ.

ಚೈನಾಮ್ಯಾನ್​ ಕುಲ್​ದೀಪ್​ಗೆ ರೆಸ್ಟ್​​​​​​, ಅಶ್ವಿನ್​​ಗೆ ಚಾನ್ಸ್​​..?

ಈ ವಿಶ್ವಕಪ್​​ನಲ್ಲಿ ಚೈನಾಮ್ಯಾನ್​ ಕುಲ್ದೀಪ್​​ ಯಾದವ್, ಸ್ಪಿನ್​ ಮೋಡಿಗೆ ಫಿದಾ ಆಗದವರಿಲ್ಲ. 12 ವಿಕೆಟ್​​ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸ್ತಿದ್ದಾರೆ. ಸತತ ಎಂಟು ಪಂದ್ಯವಾಡಿರೋ ವಿಕೆಟ್ ಟೇಕರ್​​ ಬಳಲಿದ್ದಾರೆ. ಲೀಗ್​​​ನ ಕೊನೆ ಮ್ಯಾಚ್​​ನಿಂದ ರಿಸ್ಟ್​ ಸ್ಪಿನ್ನರ್​ಗೆ ವಿಶ್ರಾಂತಿ ನೀಡಲು ಕ್ಯಾಪ್ಟನ್ ರೋಹಿತ್​​​-ಕೋಚ್ ದ್ರಾವಿಡ್​ ಚಿಂತಿಸ್ತಿದ್ದಾರೆ. ಒಂದು ವೇಳೆ ಇವರಿಗೆ ರೆಸ್ಟ್​ ನೀಡಿದ್ದೆ ಆದ್ರೆ ಆರ್​​ ಅಶ್ವಿನ್​ಗೆ ಜಾಕ್​​ಪಾಟ್​​ ಹೊಡೆಯಲಿದೆ.

ಒಟ್ಟಿನಲ್ಲಿ ಮೇಲಿನ ಆಟಗಾರರಿಗೆ ರೆಸ್ಟ್​​ ನೀಡಿ ಬೌಲಿಂಗ್​​ ಸ್ಟ್ರೆಂಥ್​​ ಹೆಚ್ಚಿಸಲು ಟೀಮ್ ಮ್ಯಾನೇಜ್​​ಮೆಂಟ್​ ಪ್ಲಾನ್ ಮಾಡಿದೆ. ಇವರಷ್ಟೇ ಅಲ್ಲದೇ ಬ್ಯಾಟಿಂಗ್ ನಲ್ಲಿ​​ ಪ್ರಯೋಗಕ್ಕೆ ಮುಂದಾಗುತ್ತಾ ? ಆದ್ರೆ ಯಾರು ಇನ್​​​, ಯಾರು ಔಟ್ ಆಗಬಹುದು ಅನ್ನುವ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsNED: ಅಜೇಯ ಭಾರತಕ್ಕೆ ನೆದರ್​​ರ್ಲೆಂಡ್ಸ್‌ ಚಾಲೆಂಜ್‌.. ಪ್ಲೇಯಿಂಗ್-11ನಲ್ಲಿ ಯಾರು ಇನ್? ಯಾರು ಔಟ್‌?

https://newsfirstlive.com/wp-content/uploads/2023/11/India-vs-NE.jpg

Load More