newsfirstkannada.com

World Cup: ಬಾಂಗ್ಲಾ ವಿರುದ್ಧ ಡಚ್ಚರಿಗೆ ಜಯಭೇರಿ.. ಪಾಯಿಂಟ್ ಟೇಬಲ್​ನಲ್ಲಿ ಇಂಗ್ಲೆಂಡ್, ಬಾಂಗ್ಲಾವನ್ನು ಹಿಂದಿಕ್ಕಿದ ನೆದರ್​ಲ್ಯಾಂಡ್ಸ್

Share :

28-10-2023

    ಬಾಂಗ್ಲಾವನ್ನು 142 ರನ್​ಗಳಿಗೆ ಕಟ್ಟಿ ಹಾಕಿ ಡಚ್ಚರು ಗೆಲುವಿನ ಕೇಕೆ

    ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದ ಕ್ಯಾಪ್ಟನ್ ಸ್ಕಾಟ್

    ಪಾಯಿಂಟ್​ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಏರಿದ ನೆದರ್​ಲ್ಯಾಂಡ್ಸ್​ ತಂಡ​

ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ನೆದರ್​ಲ್ಯಾಂಡ್ಸ್​ ಜಯಭೇರಿ ಬಾರಿಸಿದೆ. ಶಕೀಬ್​ ಅಲ್​ ಹಸನ್ ತಂಡವನ್ನು ಕೇವಲ 142 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ ಡಚ್ಚರು ಗೆಲುವಿನ ಕೇಕೆ ಹಾಕಿದರು. ಇದರಿಂದ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್​, ಬಾಂಗ್ಲಾವನ್ನು ಹಿಂದಕ್ಕೆ ತಳ್ಳಿ ನೆದರ್​​ಲ್ಯಾಂಡ್ಸ್​ 8ನೇ ಸ್ಥಾನಕ್ಕೆ ಹೋಗಿದೆ.

ಟಾಸ್ ಗೆದ್ದುಕೊಂಡ ನೆದರ್​​ಲ್ಯಾಂಡ್ಸ್ ಟೀಮ್​ನ ಕ್ಯಾಪ್ಟನ್​ ಸ್ಕಾಟ್ ಎಡ್ವರ್ಡ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ಓಪನರ್ಸ್​ ವಿಕ್ರಮ್​ಜಿತ್​ ಸಿಂಗ್ ಮತ್ತು ಮ್ಯಾಕ್ಸ್​, ತಂಡದ ಮೊತ್ತ ಕೇವಲ 4 ರನ್​ ಇರುವಾಗಲೇ ಪೆವಿಲಿಯನ್ ಸೇರಿದರು. ಇದರಿಂದ ಭಾರೀ ಕಷ್ಟದಲ್ಲಿ ಡಚ್ಚರು ಇದ್ದರು. ಆಗ ಬ್ಯಾಟಿಂಗ್​ ಮಾಡಲು ಬಂದ ಬ್ಯಾರೀಸ್ 41, ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್ 68 ರನ್​ಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತ ಹಿಗ್ಗಿಸಿದರು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 35, ವ್ಯಾನ್ ಬೀಕ್ 23 ರನ್​ಗಳ ನೆರವಿನಿಂದ ನೆದರ್​ಲ್ಯಾಂಡ್ಸ್​ ನಿಗದಿತ 50 ಓವರ್​ಗೆ 10 ವಿಕೆಟ್ ಕಳೆದುಕೊಂಡು 229 ರನ್​ಗಳ ಗುರಿಯನ್ನು ಬಾಂಗ್ಲಾಕ್ಕೆ ನೀಡಿದರು.

ಈ ಮೊತ್ತವನ್ನು ಬೆನ್ನತ್ತಿದ್ದ ಬಾಂಗ್ಲಾ ಆರಂಭದಲ್ಲಿ ಎಡವಿ ಬಿತ್ತು. ಓಪನರ್ ಲಿಟ್ಟನ್ ದಾಸ್ ಕೇವಲ 3 ರನ್​ಗೆ ಔಟ್ ಆಗುತ್ತಿದ್ದಂತೆ 15 ರನ್​ಗೆ ಹಸನ್ ಕೂಡ ಪೆವಿಲಿಯನ್​ಗೆ ನಡೆದರು. ಮಿರಾಜ್ 35 ರನ್ ಬಾರಿಸಿ ಆಡುವಾಗ ಸ್ಕಾಟ್ ಎಡ್ವರ್ಡ್ಸ್​​​ಗೆ ಕ್ಯಾಚ್​ ಕೊಟ್ಟು ಹೊರ ನಡೆದರು. ಇನ್ನು ಉಳಿದ ಆಟಗಾರರೆಲ್ಲ 20 ರನ್​ಗಳ ಗಡಿ ದಾಟಲು ಕಷ್ಟ ಪಟ್ಟರು. ಇದರಿಂದ ಬಾಂಗ್ಲಾ 42.2 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 142 ರನ್​ ಮಾತ್ರ ಗಳಿಸಿತು. ಹೀಗಾಗಿ ನೆದರ್​ಲ್ಯಾಂಡ್ಸ್​ 87 ರನ್​ಗಳ ಅಮೋಘ ವಿಜಯ ಸಾಧಿಸಿತು. ಇನ್ನು ಪಾಯಿಂಟ್​ ಪಟ್ಟಿಯಲ್ಲಿ ಬಾಂಗ್ಲಾ, ಇಂಗ್ಲೆಂಡ್​ ಅನ್ನು ಹಿಂದಕ್ಕೆ ತಳ್ಳಿ 8ನೇ ಸ್ಥಾನಕ್ಕೆ ನೆದರ್​ಲ್ಯಾಂಡ್ಸ್​ ಹೋಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup: ಬಾಂಗ್ಲಾ ವಿರುದ್ಧ ಡಚ್ಚರಿಗೆ ಜಯಭೇರಿ.. ಪಾಯಿಂಟ್ ಟೇಬಲ್​ನಲ್ಲಿ ಇಂಗ್ಲೆಂಡ್, ಬಾಂಗ್ಲಾವನ್ನು ಹಿಂದಿಕ್ಕಿದ ನೆದರ್​ಲ್ಯಾಂಡ್ಸ್

https://newsfirstlive.com/wp-content/uploads/2023/10/NED_vs_BAN.jpg

Load More