newsfirstkannada.com

ಯಡಿಯೂರಪ್ಪ ಮಗ ಎಂದು ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿಲ್ಲ.. ವಿಜಯೇಂದ್ರ ಖಡಕ್​​ ಮಾತು!

Share :

10-11-2023

    ಅಧ್ಯಕ್ಷರಾಗಿ ನೇಮಕವಾದ ಮೇಲೆ ಮಾತನಾಡಿದ ಬಿವೈ ವಿಜಯೇಂದ್ರ

    ರಾಜ್ಯಾದ್ಯಂತ ಪ್ರವಾಸ, ಲೋಕಸಭೆ ಎಲೆಕ್ಷನ್​ ಗೆಲ್ಲುವುದೇ ಮುಖ್ಯ ಗುರಿ

    ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಮಾಜಿ ಸಿಎಂ ಪುತ್ರ

ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಶಾಸಕ ಬಿವೈ ವಿಜಯೇಂದ್ರ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ನೂರಾರು ಕಾರ್ಯಕರ್ತರು ಅವರ ನಿವಾಸದ ಬಳಿ ತೆರಳಿ ಅವರಿಗೆ ಹೂವು ಗುಚ್ಚ ನೀಡಿ ಸಿಹಿ ತಿನಿಸಿ, ಶುಭಾಶಯಗಳನ್ನು ತಿಳಿಸಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಗ್ ಅಪ್​ಡೇಟ್​ವೊಂದನ್ನು ಕೊಟ್ಟರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಂಘಟನೆಯ ಬಿ.ಎಲ್​ ಸಂತೋಷ್ ಅವರು ಎಲ್ಲರು ಸೇರಿ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆಲ್ಲ ಕೃತಜ್ಞೆತೆಗಳನ್ನು ಸಲ್ಲಿಸುತ್ತೇನೆ. ಹೈಕಮಾಂಡ್ ನಾಯಕರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಪ್ರವಾಸ, ಹೆಚ್ಚು ಸ್ಥಾನಗಳನ್ನು ಗೆಲ್ಲಿಸಲಾಗುವುದು

2024ರ ಲೋಕಸಭಾ ಎಲೆಕ್ಷನ್​ ನಮ್ಮ ಮುಂದಿನ ಮುಖ್ಯ ಗುರಿಯಾಗಿದೆ. ಈ ಕ್ಷಣದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಲಾಗುವುದು. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬಲಿಷ್ಠಗೊಳಿಸಲಾಗುವುದು. ಕರ್ನಾಟಕದಿಂದ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

BSY ಅವರು ಪುತ್ರನಿಗೆ ಸಿಹಿ ತಿನಿಸುತ್ತಿರುವುದು

ಬಿಜೆಪಿ ಅಧ್ಯಕ್ಷರು, ಪ್ರಧಾನಿ, ಅಮಿತ್ ಶಾ, ಸಂಘಟನೆಯ ಬಿಎಲ್​ ಸಂತೋಷ್ ಎಲ್ಲರೂ ಸಮಾಲೋಚನೆ ಮಾಡಿ ಈ ದೊಡ್ಡ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಹಿರಿಯರಾದ ಬೊಮ್ಮಾಯಿ, ಈಶ್ವರಪ್ಪ, ಯತ್ನಾಳ್ ಹಾಗೂ ಸೋಮಣ್ಣ ಅವರ ನೆರವಿನಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ರಾಜ್ಯದ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಸೂಕ್ತವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರ ಮಗ ಅಂತೇನು ನನಗೆ ಆ ಸ್ಥಾನ ಕೊಟ್ಟಿಲ್ಲ. ಉತ್ತಮ ಅವಕಾಶವನ್ನು ಹೈಕಮಾಂಡ್ ನೀಡಿದೆ. ಅದನ್ನು ಸೂಕ್ತವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ. ನನ್ನ ಕರ್ತವ್ಯವನ್ನು ನಿಷ್ಠವಂತನಾಗಿ ಮಾಡಿಕೊಂಡು ಹೋಗುತ್ತೇನೆ. ಇದರಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ರು.

ಇದನ್ನು ಓದಿ: BREAKING: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ ವಿಜಯೇಂದ್ರ ನೇಮಕ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನ ಹೆಸರು ಘೋಷಣೆ ಆಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಫೋನ್ ಮೂಲಕ ಮಾತನಾಡಿದ್ದೇನೆ. ಅವರು ನನಗೂ ವಿಶ್ ಮಾಡಿದ್ದಾರೆ. ಇದೇ ವೇಳೆ ಮುಂದಿನ ಶುಕ್ರವಾರ ಅಂದರೆ ನವೆಂಬರ್ 17 ರಂದು ರಾಜ್ಯಕ್ಕೆ ಕೇಂದ್ರ ನಾಯಕರು ಬರುತ್ತಾರೆ. ಈ ವೇಳೆ ಶಾಸಕಂಗ ಪಕ್ಷದ ಸಭೆ ಕರೆದು ಎಲ್ಲ ಶಾಸಕರ ಸಲಹೆ ಪಡೆದು, ವಿರೋಧ ಪಕ್ಷದ ನಾಯಕರು ಯಾರೆಂಬುದನ್ನು ಅಂತಿಮವಾಗಿ ನಿರ್ಧಾರ ಮಾಡುತ್ತಾರೆ ಎಂದು ಹೇಳುವ ಮೂಲಕ ವಿಜಯೇಂದ್ರ ಅವರು ಬಿಗ್ ಅಪ್​ಡೇಟ್ ಸುದ್ದಿಯೊಂದನ್ನು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಡಿಯೂರಪ್ಪ ಮಗ ಎಂದು ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿಲ್ಲ.. ವಿಜಯೇಂದ್ರ ಖಡಕ್​​ ಮಾತು!

https://newsfirstlive.com/wp-content/uploads/2023/11/BY_VIJAYENDRA_JP_NADDA.jpg

Load More