ಬಿವೈ ವಿಜಯೇಂದ್ರನಿಗೆ ಹೈಕಮಾಂಡ್ನಿಂದ ದೀಪಾವಳಿಯ ಬಿಗ್ ಗಿಫ್ಟ್
ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಟೀಮ್ ಅನ್ನ ಕಟ್ಟಿ ಹಾಕ್ತಾರಾ?
2024ರ 'ಲೋಕ'ಗೆಲ್ಲಲು ದೊಡ್ಡ ದಾಳ ಉರುಳಿಸಿದ್ರಾ ಕೇಸರಿ ಕಲಿಗಳು..?
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಮೋದಿ-ಶಾ ದೀಪಾವಳಿ ಗಿಫ್ಟ್. ಯಡಿಯೂರಪ್ಪ ಪುತ್ರನಿಗೇ ಮಣೆ ಹಾಕಿದ್ದೇಕೆ ಹೈಕಮಾಂಡ್? – ಆ ‘5’ ಕಾರಣ.. ಸಾಕಷ್ಟು ಲೆಕ್ಕಾಚಾರ.. ಶಿಕಾರಿವೀರನೇ ಫೈನಲ್! – ಸಿದ್ದು-ಡಿಕೆ ಶಿವಕುಮಾರ್ ಪಾಳಯ ಕಟ್ಟಿ ಹಾಕ್ತಾರಾ ಬಿಜೆಪಿ ಭೀಷ್ಮನ ಪುತ್ರ?.
ರಾಜ್ಯ ಬಿಜೆಪಿಯಲ್ಲಿ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿಯ ಸದ್ದು ಜೋರಾಗಿರುತ್ತೆ.. ಯಾಕಂದ್ರೆ ಪಟಾಕಿ ಯಾರದೇ ಆಗಿದ್ರೂ ಅಂಟಿಸೋದು ನಾವೇ ಅಂತ ಹೇಳೋಕೆ ಮರಿ ರಾಜಾಹುಲಿ ಬಿ.ವೈ ವಿಜಯೆಂದ್ರ ಸಜ್ಜಾಗಿದ್ದಾರೆ. ದವಳಗಿರಿ ನಿವಾಸದ 2ನೇ ತಲೆಮಾರಿಗೆ ಬಿಜೆಪಿ ರಾಜ್ಯಧ್ಯಕ್ಷನ ಪಟ್ಟ 2ನೇ ಬಾರಿ ಒಲಿದು ಬಂದಿದೆ. ವಿಜಯೇಂದ್ರಗೆ ದೀಪಾವಳಿ ಗಿಫ್ಟ್ ಕೊಟ್ಟಿರುವ ಹೈಕಮಾಂಡ್ ಬಿಎಸ್‌ವೈ ಪುತ್ರನನ್ನೆ ಬಿಜೆಪಿ ಸಾರಥಿಯನ್ನಾಗಿ ಆಯ್ಕೆ ಮಾಡಿದ್ಯಾಕೆ? ವಿಜಯೇಂದ್ರರನ್ನ ನೂತನ ಸಾರಥಿಯಾಗಿ ಆಯ್ಕೆ ಮಾಡಿದರ ಹಿಂದಿನ ಲೆಕ್ಕಚಾರಗಳೇನು? ಸಿದ್ದು-ಡಿಕೆ ಪಾಳಯವನ್ನು ಮರಿ ರಾಜಾಹುಲಿ ಕಟ್ಟಿ ಹಾಕ್ತಾರಾ?.
ಜಸ್ಟ್ ಕೆಲವು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಪ್ರಬಲವಾಗಿತ್ತು.. ಇವತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿತ್ತು. ಬಿಜೆಪಿ ಅದೆಷ್ಟು ಸ್ಟ್ರಾಂಗ್ ಆಗಿತ್ತು ಅಂದ್ರೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದು ಅಧಿಕಾರಕ್ಕೇರುವುದು ಪಕ್ಕಾ ಅಂತಾ ಹಲವು ಸಮೀಕ್ಷೆಗಳು ಭವಿಷ್ಯ ಬರೆದಿದ್ವು. ಆದ್ರೆ, ಕಮಲ ಪಡೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಸೋಲು ಕಾಣ್ತು. ಅದ್ಯಾವಾಗ ಊಹೆಗೂ ಮೀರಿದಂತ ಅಪಜಯ ಬಿಜೆಪಿಗೆ ಉಂಟಾಯ್ತೋ, ಅಲ್ಲಿಂದ ರಾಜ್ಯ ಕೇಸರಿ ಸೇನೆಯ ಮೇಲೆ ಹೈಕಮಾಂಡ್ಗೆ ನಂಬಿಕೆ ಹೊರಟು ಹೋಗಿದ್ಯಾ ಅನ್ನೋ ಪ್ರಶ್ನೆ ಕಾಡಿತ್ತು. ಯಾಕಂದ್ರೆ, ಚುನಾವಣೆ ಮುಗಿದು ತಿಂಗಳುಗಳೇ ಕಳೆದ್ರೂ ಪಕ್ಷಕ್ಕೆ ವಿಪಕ್ಷ ನಾಯಕನಾಗಲಿ, ರಾಜ್ಯಾಧ್ಯಕ್ಷರನ್ನಾಗಲಿ ಆಯ್ಕೆ ಮಾಡಿರಲಿಲ್ಲ. ಬಟ್, ದೀಪಾವಳಿ ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿರೋವಾಗ್ಲೇ ಬಿಜೆಪಿ ಹೈಕಮಾಂಡ್ ಧಮಾಕ ಸೃಷ್ಟಿಸುವಂತ ಸುದ್ದಿಯನ್ನ ರಾಜ್ಯಕ್ಕೆ ಕೊಟ್ಟಿದೆ. ರಾಜ್ಯ ಬಿಜೆಪಿಯ ಭೀಷ್ಮ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರನನ್ನ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಪಟ್ಟಕ್ಕೆ ಕೂರಿಸಿದೆ. ಈ ಮೂಲಕ ಬಾಡಿ ಬೆಂಡಾಗಿದ್ದ ಕಮಲಕ್ಕೆ ಹೊಸ ಸಾರಥಿಯ ನೇಮಕ ಭರ್ಜರಿ ಬೂಸ್ಟ್ ನೀಡಿದೆ. ಬಿವೈ ವಿಜಯೇಂದ್ರರನ್ನ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ನೇಮಿಸಿ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ, ಯಡಿಯೂರಪ್ಪ ಹಾಗೂ ವಿಜಯೇಂದ್ರರ ಅನುಯಾಯಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ವಿಧಾನಸಭೆ ಚುನಾವಣೆ ಬಳಿಕ ಕಮಲ ಪಕ್ಷಕ್ಕೆ ರಾಜ್ಯದಲ್ಲಿ ಇನ್ನಿಲ್ಲದ ಹಿನ್ನಡೆಯಾಗಿತ್ತು.. ಬಿಎಸ್‌ವೈ ಪುತ್ರನಿ ರಾಜ್ಯಧ್ಯಕ್ಷ ಸ್ಥಾನ ನೀಡಬೇಕು ಅನ್ನೋ ಕೂಗು ಕಮಲ ಕಾರ್ಯಕರ್ತರಲ್ಲಿ ಜೋರಾಗಿತ್ತು..ಆದ್ರೀಗ, ಈ ಕೂಗಿಗೆ ಫಲ ಸಿಕ್ಕಿದೆ. ಅಂದುಕೊಂಡಂತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರರವರೇ ನೇಮಕಗೊಂಡಿದ್ದಾರೆ. ಹೊಸ ಸಾರಥಿಯ ಸಾರಥ್ಯದಲ್ಲಿ ಕಮಲ ಪಕ್ಷ ಕಮಾಲ್ ಮಾಡಲು ಸಜ್ಜಾಗಿದೆ.
ಯುಗಾದಿಯಂದು ಬಿಎಸ್‌ವೈ, ದೀಪಾವಳಿಗೆ ವಿಜಯೇಂದ್ರನಿಗೆ ಪಟ್ಟ
ರಾಜ್ಯ ಬಿಜೆಪಿಯ ರಾಜಾಹುಲಿ.. ಸಂಘಟನಾ ಚತುರ.. ಶಿಕಾರಿವೀರ ಅಂದ್ರೆ ಅದು ಬಿ.ಎಸ್ ಯಡಿಯೂರಪ್ಪ. ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡಿದ್ದ ಮಾಜಿ ಸಿಎಂ 2016ರ ಏಪ್ರಿಲ್ ನಲ್ಲಿ ಯುಗಾದಿಯಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ರು. ಇದೀಗ ದೀಪಾವಳಿ ಹಬ್ಬಕ್ಕೆ ಬಿಎಸ್‌ವೈ ಪುತ್ರ ವಿಜಯೆಂದ್ರನಿಗೆ ಅಧ್ಯಕ್ಷ ಪಟ್ಟ ಸಿಕ್ಕಿರೋದು ಹಬ್ಬಗಳ ವೇಳೆ ಅಪ್ಪ-ಮಗ ಇಬ್ಬರಿಗೂ ಉಡುಗೊರೆ ಸಿಕ್ಕಂತಾಗಿದ್ದು, ಬಿಜೆಪಿಯಲ್ಲಿ ಇನ್ನಿಲ್ಲದ ಸಂತಸ ತಂದಿದೆ.
ಮಗನಿಗೆ ಸಿಹಿ ತಿನ್ನಿಸಿ ಶುಭ ಕೋರಿದ ರಾಜ್ಯ ಬಿಜೆಪಿ ಭೀಷ್ಮ!
ಉಪಾಧ್ಯಕ್ಷರಾಗಿ ರಾಜ್ಯ ಬಿಜೆಪಿಯನ್ನ ಸಂಘಟಿಸುವಲ್ಲಿ ವಿಜಯೇಂದ್ರ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಪುತ್ರನಿಗೆ ಬಿಜಪಿ ರಾಜ್ಯಾಧ್ಯಕ್ಷನ ಪಟ್ಟ ಸಿಕ್ಕಿರೋದು ತಂದೆಯಾದ ಬಿಎಸ್ವೈಗೂ ಇನ್ನಿಲ್ಲದ ಸಂತಸ ತಂದಿದೆ. ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರು ಘೋಷಣೆಯಾಗ್ತಿದ್ದಂತೆ ಯಡಿಯೂರಪ್ಪ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮವಾಗಿರುವ ಸುದ್ದಿ ಹೊರ ಬೀಳ್ತಿದ್ದಂತೆ ವಿಜಯೇಂದ್ರ ತಂದೆ ಕಾಲು ಮುಗಿದು ಆಶಿರ್ವಾದ ಪಡೆದ್ರು. ಅತ್ತ ಬಿಎಸ್‌ವೈ ಕೂಡ ಮಗನಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದ್ರು.
ಅಂತಿಮವಾಗಿ ವಿಜಯೇಂದ್ರನಿಗೆ ಮಣೆ ಹಾಕಿದ ಕಮಲ ಪಡೆ
2023ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಹೈಕಮಾಂಡ್ ತೆಗೆದುಕೊಂಡು ಕೆಲ ನಿರ್ಧಾರಗಳು ಪಕ್ಷಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಪರಿಣಾಮ ರಾಜ್ಯದಲ್ಲಿ ಬಿಜೆಪಿ ಕೇವಲ 66 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿತ್ತು. ಇದಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕೂಗು ಜೋರಾಗಿತ್ತು. ಆದ್ರೆ ಯಾರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಅನ್ನೋದು ಹೈಕಮಾಂಡ್ಗೆ ಟೆನ್ಷನ್ ಆಗಿತ್ತು. ಈ ರೇಸ್‌ನಲ್ಲಿ ಸಿಟಿ ರವಿಯಿಂದ ಹಿಡಿದು ಶೋಭಾ ಕರಂದ್ಲಾಜೆ ಹೆಸರು ರಾಜ್ಯಾಧ್ಯಕ್ಷರ ಪಟ್ಟಿಯಲ್ಲಿರೋದು ಸುದ್ದಿಯಾಗಿತ್ತು. ಹೀಗಾಗಿ ಯಾರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕೊಡ್ಬೇಕು ಅನ್ನೋದು ದೊಡ್ಡ ತಲೆನೋವಾಗಿತ್ತು.. ಆದ್ರೆ, ಇದೀಗ ಗಟ್ಟಿ ನಿರ್ಧಾರ ಮಾಡಿರುವ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಕೊನೆಗೆ ಬಿಎಸ್‌ವೈ ಪುತ್ರನಿಗೆ ಅಧ್ಯಕ್ಷನ ಪಟ್ಟ ಕೊಟ್ಟಿದೆ. ಅಂತಿಮವಾಗಿ ವಿಜಯೇಂದ್ರನಿಗೆ ಮಣೆ ಹಾಕಿ ಪಕ್ಷದಲ್ಲಿದ್ದ ಎಲ್ಲ ಗೊಂದಲಗಳಿಗೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.
ರಾಜಾಹುಲಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತಾದ್ರೂ, ಹಲವು ಕಮಲ ಕಲಿಗಳು ಪೈಪೋಟಿ ಕೊಡ್ತಿದ್ರು. ಬಹುದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಆ ನಾಯಕನ ಹೆಸರು ಫೈನಲ್ ಆಗಿದ್ಯಂತೆ. ನಾವು ಅಂದುಕೊಂಡಿದ್ದಕ್ಕಿಂತ ಸರ್ಪ್ರೈಸ್ ಹೆಸರು ಘೋಷಣೆಯಾಗುತ್ತಂತೆ’ ಎಂಬ ಸುದ್ದಿಗಳು ಸುನಾಮಿಯಂತೆ ಅಪ್ಪಳಿಸುತ್ತಿದ್ವು. ಎಲ್ಲಕ್ಕಿಂತ ರೋಚಕ ಸಂಗತಿ ಏನ್ ಗೊತ್ತಾ? ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿ ಬಿಜೆಪಿ ಫೈರ್ ಬ್ರ್ಯಾಂಡ್ ಸಿಟಿ ರವಿ ಹೆಸರುಗಳು ಭರ್ಜರಿ ಸದ್ದು ಮಾಡಿದ್ವು.
ನಮ್ದೇನಿದ್ರೂ ಒಪನ್ ವಾರ್
ವಿಜಯೇಂದ್ರ, ಶೋಭಾ ಕರಂದ್ಲಾಜೆ, ಸಿಟಿ ರವಿ ಸೇರಿದಂತೆ ಹಲವರ ಹೆಸರುಗಳು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗ್ತಿವೆ ಎಂಬ ಸುದ್ದಿಗಳು ಒಂದು ಕಡೆಯಾದ್ರೆ, ತೆರೆಮರೆಯಲ್ಲಿ ಹಲವು ಬಿಜೆಪಿ ನಾಯಕರು ರಾಜ್ಯಾಧ್ಯಕ್ಷ ಪಟ್ಟಕ್ಕೆ ಟವೆಲ್ ಹಾಕಿಬಂದಿದ್ರು ಅನ್ನೋ ಮಾಹಿತಿ ಇದೆ.. ನಾವು ಸೀಕ್ರೆಟ್ ಗೇಮ್ ಆಡೋರಲ್ಲ, ನಮ್ದೇನಿದ್ರೂ ಒಪನ್ ವಾರ್ ಅಂತ ಅಖಾಡಕ್ಕೆ ಧುಮುಕಿದ್ದ ಮಾಜಿ ಸಚಿವ ವಿ.ಸೋಮಣ್ಣ.. ರಾಜ್ಯಾಧ್ಯಕ್ಷ ಹುದ್ದೆ ನನಗೇ ಕೊಡಿ ಅಂತ ನೇರವಾಗಿ ಅಹವಾಲು ಇಟ್ಟಿದ್ರು. ಅದು ಆಗೋದಲ್ಲ, ಹೋಗೋದಲ್ಲ ಅನ್ನೋದು ಎಲ್ಲರಿಗೂ ಗೊತ್ತಿತ್ತು ಅನ್ನೋದು ರಹಸ್ಯವೇನಲ್ಲ. ಅಂತೆಯೇ ಆಗಿನ ಬಿಜೆಪಿ ಸಾರಥಿಯಾಗಿದ್ದ ಕಟೀಲ್ ಸಾಹೆಬ್ರು ಆಸೆ ಪಡೋದ್ ತಪ್ಪೇನಿಲ್ಲ ಬಿಡ್ರಿ ಅಂತ ಮಾರ್ಮಿಕವಾಗೇ ಎಲ್ಲವನ್ನೂ ಹೇಳಿಬಿಟ್ಟಿದ್ರು.
ಆದಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹೆಸರು, ನಂತರ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಹೆಸ್ರು, ಮತ್ತೊಬ್ಬ ಮಾಜಿ ಸಚಿವ ಆರ್.ಅಶೋಕ್ ಹೆಸರು.. ಎಲ್ಲರೂ ಮುಗಿದ ಮೇಲೆ ಮುಂಚೂಣಿಗೆ ಬಂದಿತ್ತು ವಿಜಯೇಂದ್ರ ಹೆಸರು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಎದುರು 3 ಹೆಸರುಗಳು ಫೈನಲ್ ಆಗಿದ್ವು ಎನ್ನಲಾಗಿತ್ತು. ಅದು ಬಿಎಸ್‌ವೈ ಪುತ್ರ ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸಿಟಿ ರವಿಯ ಹೆಸರುಗಳಾಗಿತ್ತು. ಈ ಮೂವರ ನಡುವೆ ಪಟ್ಟದ ರೇಸ್ ಶುರುವಾಗಿತ್ತು. ಹೈಕಮಾಂಡ್ ನಾಯಕರು ಅಳೆದು ತೂಗಿ ಯಾರಿಗೆ ಪಟ್ಟ ಕಟ್ಟೋದು ಅಂತ ತಲೆಕೆಡಿಸ್ಕೊಂಡು ಕೂತಿದ್ರು.
ಆದ್ರೀಗ.. ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನ ಪಟ್ಟಾಭಿಷೇಕ ಮಾಡಲಾಗಿದೆ. ಬಹುತೇಕರ ತಲೆಯಲ್ಲಿ ಸಳಿದಾಡಿದ್ದ ಹೆಸರೇ ಡಿಸೈಡ್ ಆಗಿದೆ. ಯಾಕಂದ್ರೆ, ಬಿಎಸ್‌ವೈ ಪುತ್ರ ವಿಜಯೇಂದ್ರ ಶೋಭಾ ಮತ್ತು ಸಿಟಿ ರವಿ ಅವರಿಗಿಂತ ಮುಂದಿದ್ರು. ಅದಕ್ಕೆ ಪ್ರಮುಖ ಕಾರಣಗಳು ಅಂದ್ರೆ ತಂದೆಯ ವರ್ಚಸ್ಸು ಮತ್ತು ವಿಜಯೇಂದ್ರರ ಚುನಾವಣಾ ಸಂಘಟನಾ ಚತುರತೆ.
ವಿಜಯೇಂದ್ರ ಪಟ್ಟಾಭಿಷೇಕದ ಹಿಂದೆ ‘ಲೋಕ’ ಶಿಕಾರಿ ರಹಸ್ಯ?
ಘಟಾನುಘಟಿಗಳ ಪೈಪೋಟಿಯ ಅಖಾಡದಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ ದಕ್ಕಿಸಿಕೊಂಡಿರೋದರ ಹಿಂದೆ ಭಾರೀ ದೊಡ್ಡ ಲೆಕ್ಕಾಚಾರಗಳು ಇರೋ ಬಗ್ಗೆ ಚರ್ಚೆಗಳು ಭುಗಿಲೆದ್ದಿವೆ. ಎಲ್ಲರನ್ನೂ ಸೈಡಿಗೆ ದೂಡಿ ವಿಜಯೇಂದ್ರರಿಗೆ ಸಾರಥ್ಯ ನೀಡಿರೋದ್ರ ಹಿಂದೆ ಲೋಕಸಭಾ ಚುನಾವಣೆಯ ರಹಸ್ಯವೂ ಇದೆ ಅಂತ ಹೇಳಲಾಗ್ತಿದೆ. ರಾಜಕಾರಣ ಫಾಲೋ ಮಾಡೋರಿಗೆ ಚೆನ್ನಾಗಿ ಗೊತ್ತಿರುವಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟ ವಿಚಾರಗಳಲ್ಲಿ ಲಿಂಗಾಯತ ಸಮುದಾಯದಿಂದ ಕಡಿಮೆ ವೋಟು ಬಿದ್ದಿದ್ದು ಕೂಡ ಒಂದು.
ಅದಕ್ಕೆ ಕಾರಣ ಹಲವು. ಕೊನೇ ಗಳಿಗೆಯಲ್ಲಿ ಪಕ್ಷ ಬಿಟ್ಟು ಹೋದ ಪ್ರಮುಖ ಲಿಂಗಾಯತ ನಾಯಕರು. ಯಡಿಯೂರಪ್ಪರನ್ನು ಸೈಡ್‌ಲೈನ್ ಮಾಡ್ತಿದ್ದಾರೆಂಬ ಇತರೆ ಪಕ್ಷಗಳ ಪ್ರಚಾರ. ಹೀಗೆ.. ಯಾವ ಮತಬ್ಯಾಂಕ್ನೊಂದಿಗೆ ಬಿಜೆಪಿ ಮತಬುಟ್ಟಿ ತುಂಬಿಸಿಕೊಳ್ತಿತ್ತೋ.. ಅದೇ ಸಮುದಾಯ ಕೊಂಚ ವಾಲಿದ್ದು ಬಿಜೆಪಿಗೆ ಹೊಡೆತ ಕೊಟ್ಟಿತ್ತು. ಅದನ್ನು ಸರಪಡಿಸೋ ತಂತ್ರಗಾರಿಕೆಯ ಮುಂದುವರಿದ ಭಾಗವೇ ವಿಜಯೇಂದ್ರ ಪಟ್ಟಾಭಿಷೇಕ ಅನ್ನೋದು ರಾಜಕೀಯ ವಲಯದ ಚರ್ಚೆ.
ಈಗ ಬಿಎಸ್‌ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡೋ ಮೂಲಕ ಹೈಕಮಾಂಡ್ ನಾಯಕರು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಬೀಳ್ಸೋ ಲೆಕ್ಕಾಚಾರ ಮಾಡ್ಕೊಂಡಿದ್ದಾರೆ ಅಂದ್ರೂ ತಪ್ಪಿಲ್ಲ. ಮೊದಲನೆಯದು ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡ್ತಿದ್ದಾರೆ ಎಂಬ ವದಂತಿಗಳನ್ನು ಪುಡಿಗಟ್ಟೋದು. ಎರಡನೆಯದು ಬಿಜೆಪಿಯಲ್ಲಿ ಲಿಂಗಾಯತರಿಗೆ ಮನ್ನಣೆ ನೀಡ್ತಿಲ್ಲ ಎಂಬ ಪ್ರಚಾರಗಳನ್ನು ಛಿದ್ರಮಾಡಿ, ಲಿಂಗಾಯತರು ಅಂದ್ರೆ ಬಿಜೆಪಿ. ಬಿಜೆಪಿ ಅಂದ್ರೆ ಲಿಂಗಾಯತರು ಎಂಬ ಸಂದೇಶವನ್ನ ಸಮುದಾಯಕ್ಕೆ ರವಾನಿಸೋದು.
ಪರೋಕ್ಷವಾಗಿ ಪಟ್ಟದ ಗುಟ್ಟು ಹೇಳಿದ್ರಾ ಶ್ರೀರಾಮುಲು?
ಇಲ್ಲಿಗೆ ವಾರದ ಹಿಂದಷ್ಟೇ ಶ್ರೀರಾಮುಲು ಬಾಯಲ್ಲಿ ಅಚ್ಚರಿಯ ಹೇಳಿಕೆ ಹೊರಬಿದ್ದಿತ್ತು. ನಾನು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ರೇಸ್‌ನಲ್ಲಿದ್ದೆ. ಕರ್ನಾಟಕ ಬಿಜೆಪಿ ಸಾರಥ್ಯ ವಹಿಸಿಕೊಳ್ಳೋಕೆ ಪ್ರಯತ್ನ ಪಟ್ಟಿದ್ದೆ. ಆದ್ರೆ, ನನ್ನ ಆಸೆ ಫಲಿಸೋದಿಲ್ಲ ಅಂತ ಗೊತ್ತಾಯ್ತು. ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಗೋದಿಲ್ಲ ಅಂತ ಮಾಹಿತಿ ಬಂತು. ಹಾಗಾಗಿ, ಆ ರೇಸ್‌ನಿಂದ ಹಿಂದೆ ಸರಿದಿದ್ದೇನೆ ಅಂತ ಓಪನ್ ಸ್ಟೇಟ್‌ಮೆಂಟ್ ಕೊಟ್ಟಿದ್ರು. ಹಾಗಾದ್ರೆ, ಶ್ರೀರಾಮುಲು ಸಾಹೆಬ್ರಿಗೆ ಒಂದು ವಾರದ ಹಿಂದೆಯೇ ವಿಜಯಸಾರಥ್ಯದ ಸುಳಿವು ಸಿಕ್ಕಿತ್ತಾ? ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಫಿಕ್ಸ್ ಅನ್ನೋದು ನಿಕ್ಕಿಯಾಗಿತ್ತಾ? ಖಂಡಿತ ಗೊತ್ತಿಲ್ಲ. ಆದ್ರೆ… ಇನ್ಮುಂದೆ ಬಿಜೆಪಿಯಲ್ಲಿ ರಾಜಾಹುಲಿ ಪುತ್ರ ಮರಿ ರಾಜಾಹುಲಿಯ ಘರ್ಜನೆ ಶುರುವಾಗಲಿದೆ.
ಹಾಗಾದ್ರೆ, ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ವಿಜಯೇಂದ್ರರನ್ನೇ ಆಯ್ಕೆ ಮಾಡಿದ್ಯಾಕೆ? ಮರಿರಾಜಾಹುಲಿಗೆ ರಾಜ್ಯಾಧ್ಯಕ್ಷ ಪಟ್ಟಾಭಿಷೇಕದ ರಹಸ್ಯವೇನು? ವಿಜಯೇಂದ್ರ ಆಯ್ಕೆ ಹಿಂದಿನ ಆ ಪಂಚ ಕಾರಣಗಳು ಯಾವುವು? ವಿಜಯ ಸಾರಥ್ಯದಿಂದಾಗಿ ಕಾಂಗ್ರೆಸ್ ಎದುರಾಗಲಿರೋ ಸವಾಲುಗಳು ಯಾವುವು?.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ