newsfirstkannada.com

ನಾನು ಹೇಳಿದ್ದೇ ನಡಿಬೇಕೋ ಅನ್ನೋ ಗತ್ತು.. ನಟಿ ಪ್ರೀತಿ ಶ್ರೀನಿವಾಸ್ ಅಭಿನಯಕ್ಕೆ ವೀಕ್ಷಕರು ಫುಲ್ ಫಿದಾ!

Share :

Published June 28, 2024 at 5:54am

  ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿರೋ ಸುಂದರಿ ಪ್ರೀತಿ ಶ್ರೀನಿವಾಸ್

  ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎಂದೆನಿಸಿಕೊಂಡಿರುವ ನಟಿ

  ಬ್ರಹ್ಮಗಂಟು ಸೀರಿಯಲ್​ ಮೂಲಕ ಮತ್ತೆ ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ ಪ್ರೀತಿ

ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿರೋ ಸುಂದರಿ. ನಾಯಕ ಚಿರಾಗ್​ಗೆ ಹೆತ್ತ ತಾಯಿಯ ನೆನಪು ಬಾರದಂತೆ ನೋಡಿಕೊಳ್ತಿರೋ ಮುದ್ದಿನ ಅತ್ತಿಗೆ. ಕುಟುಂಬದಲ್ಲಿ ನಾನು ಹೇಳಿದ್ದೇ ನಡೆಯಬೇಕು ಅನ್ನೋ ಗತ್ತು, ತಾಕತ್ತು ಹೊಂದಿರೋ ಗಟ್ಟಿಗಿತ್ತಿ ಈಕೆ. ಸೌಂದರ್ಯ ಆಸ್ತಿ, ಅಂದನೇ ಎಲ್ಲಾ ಅಂತಾ ನಂಬಿರೋ ಪಾತ್ರ ಸೌಂದರ್ಯ.

ಇದನ್ನೂ ಓದಿ: ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್‌.. ಪೆಡಿಕ್ಯೂರ್‌, ಮೆಡಿಕ್ಯೂರ್‌ ಬೆನ್ನಲ್ಲೇ ಲಿಪ್‌ಸ್ಟಿಕ್ ರಹಸ್ಯ ಬಯಲು

ಬ್ರಹ್ಮಗಂಟು ಧಾರಾವಾಹಿಯ ಸೌಂದರ್ಯ ಪಾತ್ರಕ್ಕೆ ಬಣ್ಣ ಹಚ್ಚಿರೋದು ನಟಿ ಪ್ರೀತಿ ಶ್ರೀನಿವಾಸ್​. ಇವರನ್ನು ಎಲ್ಲೋ ನೋಡಿದ್ದೀವಲ್ಲ ಅಂತ ಅಂದುಕೊಳ್ಳುತ್ತಿರೋ  ವೀಕ್ಷಕರಿಗೋಸ್ಕರನೇ ಈ ಮಾಹಿತಿ ನೀಡಲಾಗಿದೆ. ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿರೋ ನಟಿ ಕೊನೆದಾಗಿ ನಟಿಸಿದ್ದೇ ವರಲಕ್ಷ್ಮೀ ಸ್ಟೋರ್ಸ್​. ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು ವರಲಕ್ಷ್ಮೀ ಸ್ಟೋರ್ಸ್ ಧಾರಾವಾಹಿ. ಇದರಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದರು ನಟಿ ಪ್ರೀತಿ ಶ್ರೀನಿವಾಸ್. ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಪಡಮಟ್ಟಿ ಸಂದ್ಯಾರಾಗಮ್​ ಇವರ ಫೇಮಸ್​ ಸೀರಿಯಲ್ ಆಗಿದೆ​. ಇದು ಸಂದ್ಯಾರಾಗ ಟೈಟಲ್​ನಲ್ಲಿ ಕನ್ನಡಕ್ಕೂ ಡಬ್​ ಆಗಿತ್ತು. ಸದ್ಯ ಜಗದಾತ್ರಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನೂ, ಪ್ರೀತಿ ಶ್ರೀನಿವಾಸ್​ ಅವರು ಬೆಂಗಳೂರಿನಲ್ಲೇ ವಾಸ ಮಾಡ್ತಿದ್ದು, ಶೂಟಿಂಗ್​ ಇದ್ದಾಗ ಹೈದ್ರಾಬಾದ್​ಗೆ ಹೋಗ್ತಾರೆ. ಈಗ ಬ್ರಹ್ಮಗಂಟು ಮೂಲಕ ಕನ್ನಡಕ್ಕೆ ಮತ್ತೆ ಕಮ್​ಬ್ಯಾಕ್​ ಮಾಡಿರೋದ್ರಿಂದ ಕನ್ನಡ, ತೆಲುಗು ಎರಡು ಭಾಷೆಯಲ್ಲೂ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ಮುದ್ದಾದ ಕುಟುಂಬ ಹೊಂದಿರೋ ಪ್ರೀತಿ ಫ್ರೀ ಇದ್ದಾಗ ಮಗ ಹೃದಯ್​ ಹಾಗೂ ಪತಿ ಜೊತೆ ಜಾಲಿ ಟ್ರಿಪ್​ ಮಾಡ್ತಿರ್ತಾರೆ. ಒಟ್ಟಿನಲ್ಲಿ ಬ್ರಹ್ಮಗಂಟು ಸೀರಿಯಲ್​ನಲ್ಲಿ ಪ್ರೀತಿ ಅವರ ಅಭಿನಯಕ್ಕೆ, ಸ್ಕ್ರೀನ್​ ಪ್ರೆಸೆನ್ಸ್​ಗೆ ವೀಕ್ಷಕರು ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಹೇಳಿದ್ದೇ ನಡಿಬೇಕೋ ಅನ್ನೋ ಗತ್ತು.. ನಟಿ ಪ್ರೀತಿ ಶ್ರೀನಿವಾಸ್ ಅಭಿನಯಕ್ಕೆ ವೀಕ್ಷಕರು ಫುಲ್ ಫಿದಾ!

https://newsfirstlive.com/wp-content/uploads/2024/06/prethi.jpg

Load More