newsfirstkannada.com

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸುತ್ತಾ ಹೊಸ ವಿವಾದ; ₹495 ರೂಪಾಯಿ ಪೆನ್ನಿನ ಮೇಲೆ ಅತಿದೊಡ್ಡ ಅನುಮಾನ ಯಾಕೆ?

Share :

28-06-2023

  ಖಾಸಗಿ ವಿಮಾನ, ದುಂದುವೆಚ್ಚಗಳಿಂದಲೇ ಸುದ್ದಿಯಾಗಿದ್ದ ಸುನಕ್

  ಬ್ರಿಟನ್ ಪ್ರಧಾನಿ ಕೈಯಲ್ಲಿರೋ ಪೆನ್‌ ಮೇಲೆ ಯಾಕೆ ಎಲ್ಲರ ಕಣ್ಣು?

  ಪ್ರಧಾನಿ ಬಳಸೋ ಪೆನ್ನಿನಿಂದಲೇ ಅತಿದೊಡ್ಡ ಅವಾಂತರವಾಗುತ್ತಾ!

ಲಂಡನ್: ಬ್ರಿಟನ್ ಪ್ರಧಾನಿ, ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಅವರು ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ಇಷ್ಟು ದಿನ ರಿಷಿ ಸುನಕ್ ಬಳಸೋ ಖಾಸಗಿ ವಿಮಾನ, ಸರ್ಕಾರದ ದುಂದುವೆಚ್ಚಗಳಿಂದ ಹೆಚ್ಚು ಸುದ್ದಿಯಾಗಿದ್ದರು. ಈ ಬಾರಿ ರಿಷಿ ಸುನಕ್ ಬಳಸೋ ಒಂದು ಪೆನ್‌ ಈ ವಿವಾದದ ಕೇಂದ್ರಬಿಂದುವಾಗಿದ್ದು, ಇಂಗ್ಲೆಂಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.

ಪ್ರಧಾನಿ ರಿಷಿ ಸುನಕ್ ಅವರು ಬಳಸುವ ಸರ್ಕಾರಿ ಕಾರ್ಯಾಲಯದ ಪೆನ್ನು ಟೀಕಾಕಾರಿಗೆ ಆಯುಧವಾಗಿದೆ. ರಿಷಿ ಸುನಕ್ ಅಧಿಕೃತ ಪತ್ರಗಳು, ದಾಖಲೆಗಳ ಮೇಲೆ ಸಹಿ ಮಾಡಲು ಪೈಲಟ್ ವಿ ಪೆನ್ನು ಬಳಸುತ್ತಿದ್ದಾರೆ. ಈ ಪೆನ್ನಿನಲ್ಲಿ ಅಳಿಸಬಹುದಾದ ಇಂಕ್‌ ಅನ್ನು ಬಳಸಲಾಗುತ್ತದೆ. ಈ ಪೆನ್ನಿನಿಂದ ಬರೆದ ಟಿಪ್ಪಣಿಯನ್ನು ಅಳಿಸಬಹುದಾಗಿದೆ ಅನ್ನೋದು ವಿವಾದ ಸೃಷ್ಟಿಸಿದೆ. ಇದಕ್ಕೆ ಪ್ರಧಾನಿ ರಿಷಿ ಸುನಕ್ ಅವರ ಕಾರ್ಯಾಲಯ ಸ್ಪಷ್ಟನೆಯನ್ನು ನೀಡಿದೆ.

ಬ್ರಿಟನ್ ವರದಿಯ ಪ್ರಕಾರ ಪ್ರಧಾನಿ ರಿಷಿ ಸುನಕ್‌ ಅವರು ಬಳಸುವ ಪೆನ್ನುಗಳನ್ನು ರಿಟೇಲ್‌ ಅಂದ್ರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಅಳಿಸಬಹುದಾದ ಇಂಕ್‌ಗಳನ್ನ ಬಳಸಲಾಗುತ್ತದೆ. ಈ ಪೆನ್ನುಗಳಿಂದ ಬರೆದ ಲೇಖನ, ಟಿಪ್ಪಣಿಗಳಲ್ಲಿ ತಪ್ಪು ಮಾಡಿದರೆ ಅಳಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಬ್ರಿಟನ್ ಪ್ರಧಾನಿಯ ಅಧಿಕೃತ ಸಹಿ ಮತ್ತು ಟಿಪ್ಪಣಿಗಳು ಮಹತ್ವವಾಗಿದ್ದು, ಅಳಿಸಬಹುದಾದ ಪೆನ್ನುಗಳನ್ನ ಬಳಸುತ್ತಿರುವುದು ಆಂತಕಕ್ಕೆ ಕಾರಣವಾಗಿದೆ.

ರಿಷಿ ಸುನಕ್ ಅವರು ಕಳೆದ 15 ದಿನಗಳ ಹಿಂದೆ ಕ್ಯಾಬಿನೆಟ್‌ನಲ್ಲಿ ಅಳಿಸಬಹುದಾದ ಇಂಕ್‌ನ ಪೆನ್ ಅನ್ನು ಬಳಸಿದ್ದಾರೆ. ಯುರೋಪಿಯನ್ ದೇಶದ ಪ್ರವಾಸದ ಸಂದರ್ಭದಲ್ಲಿ ಸರ್ಕಾರದ ಅಧಿಕೃತ ಪತ್ರಗಳಿಗೆ ಸಹಿ ಹಾಕುವಾಗ ಇದೇ ಪೆನ್ನನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಿಷಿ ಸುನಕ್ ಅವರ ಮಾಧ್ಯಮ ಕಾರ್ಯದರ್ಶಿ, ಇದು ನಾಗರಿಕ ಸೇವೆಯಿಂದ ಒದಗಿಸಲಾದ ಮತ್ತು ವ್ಯಾಪಕವಾಗಿ ಬಳಸಲಾಗುವ ಪೆನ್ ಆಗಿದೆ. ಪ್ರಧಾನಿ ಅಳಿಸುವ ಇಂಕ್‌ ಅನ್ನು ಒಳಗೊಂಡ ಪೆನ್ನುಗಳನ್ನ ಎಂದಿಗೂ ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸುತ್ತಾ ಹೊಸ ವಿವಾದ; ₹495 ರೂಪಾಯಿ ಪೆನ್ನಿನ ಮೇಲೆ ಅತಿದೊಡ್ಡ ಅನುಮಾನ ಯಾಕೆ?

https://newsfirstlive.com/wp-content/uploads/2023/06/Rishi-Sunak-Pen-1.jpg

Load More