newsfirstkannada.com

ಸಾರ್ವಜನಿಕರೇ ಎಚ್ಚರ! ಕೋವಿಡ್​​ ಆಯ್ತು, ಓಮಿಕ್ರಾನ್ ಆಯ್ತು, ಈಗ ಹೊಸ ವೈರಸ್ ಪತ್ತೆ!

Share :

07-08-2023

    ಸಾರ್ವಜನಿಕರು ಓದಲೇಬೇಕಾದ ಸ್ಟೋರಿ

    ಕೋವಿಡ್​ ಆಯ್ತು, ಓಮಿಕ್ರಾನ್​ ಆಯ್ತು..!

    ಈ ಬೆನ್ನಲ್ಲೀಗ ಬಂದಿದೆ ಡೇಂಜರಸ್​​ ವೈರಸ್​​

ನವದೆಹಲಿ: ಮೂರು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ಕೊರೋನಾ ಎಂಬ ಮಹಾಮಾರಿ ಬೆಂಬಿಡದೇ ಕಾಡಿತ್ತು. ಈ ಕೋವಿಡ್​​ ಎಂಬ​​ ಸಾಂಕ್ರಾಮಿಕ ರೋಗಕ್ಕೆ ಇಡೀ ಜಗತ್ತಿನಾದ್ಯಂತ ಲಕ್ಷಾಂತರ ಜನ ಬಲಿಯಾದರು. ಅದರಲ್ಲೂ ಚೀನಾ, ಅಮೆರಿಕಾದಲ್ಲಂತೂ ಕೊರೋನಾ ಅಟ್ಟಹಾಸಕ್ಕೆ ಅಸುನೀಗಿದವರ ಸಂಖ್ಯೆ ಎಷ್ಟು ಎಂದು ಎಣಿಸಲು ಸಾಧ್ಯವೇ ಇಲ್ಲ. ಭಾರತದಲ್ಲೂ ಇದೇ ಕಥೆ.

ಇನ್ನೇನು ಕೋವಿಡ್​​ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಇದರ ರೂಪಾಂತರಿ ಓಮಿಕ್ರಾನ್ ವೈರಾಣು ವಕ್ಕರಿಸಿತ್ತು. ಓಮಿಕ್ರಾನ್​ನಿಂದಲೂ ಇಡೀ ದೇಶಾದ್ಯಂತ ಹತ್ತಾರು ಸಾವಿರ ಜನ ತಮ್ಮ ಜೀವವನ್ನೇ ಕಳೆದುಕೊಂಡರು. ಕೋವಿಡ್​​ ರೂಪಾಂತರಿ ಓಮಿಕ್ರಾನ್ ತೀವ್ರತೆಯೂ ಕಡಿಮೆಯಾಗಿ ಜನ ಎಂದಿನಂತೆ ಸಹಜ ಜೀವನಕ್ಕೆ ಮರಳಿದರು. ಈ ಕರಾಳ ವೈರಸ್​​​ ಮಾನವ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಯನ ಆಗಿತ್ತು. ಎಲ್ಲವೂ ಮುಗಿದು ಹೋಗಿದೆ, ಮತ್ತೆ ಈ ರೋಗದ ಸುಳಿವು ಕಾಣಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದ ಜನರಿಗೆ ಆತಂಕಕಾರಿ ಸುದ್ದಿಯೊಂದಿದೆ.

ಕೋವಿಡ್​​​ ರೂಪಾಂತರಿ ಓಮಿಕ್ರಾನ್ ಉಪ ತಳಿ ಎಂದೇ ಕರೆಯಲಾಗುವ ಹೊಸ ವೈರಾಣುವೊಂದು ಪತ್ತೆಯಾಗಿದೆ. ಇದರ ಹೆಸರು EG.5.1, ಇದನ್ನು ಇರೀಸ್​​ ಎಂದು ಕೂಡ ಕರೆಯಲಾಗುತ್ತದೆ.

ಇರೀಸ್​ ವೈರಾಣು ಸದ್ಯ ಬ್ರಿಟನ್​​​ ಎಂದರೆ ಯೂನೈಟೆಡ್​ ಕಿಂಗ್​ಡಮ್​​ ಭಾಗದಲ್ಲಿ ಪತ್ತೆಯಾಗಿದೆ. ಇದು ಕೊರೋನಾಗಿಂತಲೂ ಬಹಳ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಕೋವಿಡ್​​​ಗಿಂತಲೂ ಅತೀ ವೇಗವಾಗಿ ಹರಡಬಲ್ಲ ರೋಗ ಇದಾಗಿದೆ.

ಇರೀಸ್​​ ಲಕ್ಷಣಗಳೇನು?

ಶೀತ, ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ ಇದರ ಪ್ರಮುಖ ಲಕ್ಷಗಳು. ಇರೀಸ್​ ಕಾಣಿಸಿಕೊಂಡ ಹಲವರು ಇದಕ್ಕಿಂತಲೂ ಅಪಾಯಕಾರಿ ಲಕ್ಷಣಗಳನ್ನು ಹೊಂದಿದ್ದಾರೆ. ಉಸಿರಾಟದ ತೊಂದರೆ, ಎದೆ ನೋವು ಕೂಡ ಕಾಣಿಸಿಕೊಂಡಿದೆ.

ತಡೆಗಟ್ಟುವುದು ಹೇಗೆ?

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು, ಸರಿಯಾಗಿ ಕೈ ತೊಳೆಯುವುದು, ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಂದೇ ಪರಿಹಾರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರೇ ಎಚ್ಚರ! ಕೋವಿಡ್​​ ಆಯ್ತು, ಓಮಿಕ್ರಾನ್ ಆಯ್ತು, ಈಗ ಹೊಸ ವೈರಸ್ ಪತ್ತೆ!

https://newsfirstlive.com/wp-content/uploads/2023/08/corona.jpg

Load More