‘NDAಗೆ ಬೇಕಾಗಿರುವುದು ರಾಷ್ಟ, ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ’
2014, 2019ರಲ್ಲಿ ಬಿಜೆಪಿಗೆ ಬಹುಮತ, ಆದರು NDA ಸರ್ಕಾರ ರಚನೆ
ಮುಂಬರುವ 25 ವರ್ಷಗಳಲ್ಲಿ ದೊಡ್ಡ ಗುರಿ ನಾವು ಸಾಧಿಸಬೇಕಾಗಿದೆ..!
ನವದೆಹಲಿ: ಎನ್ಡಿಎ ಮೈತ್ರಿಕೂಟ ದೇಶದ ಜನರ ವಿಶ್ವಾಸ ಗಳಿಸಿದ್ದು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಎನ್ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್ಮೆಂಟ್ ಆಸ್ಪಿರೇಷನ್ (NDA means N-New India, D-Development, A-Aspiration) ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಎನ್ಡಿಎ ಒಕ್ಕೂಟದ ಮಿತ್ರಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೊದಿ ವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಅವರು, ರಾಷ್ಟ, ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ ಜೊತೆ ಜೊತೆಗೆ ಜನರ ಸಬಲೀಕರಣವೇ ಎನ್ಡಿಎಗೆ ಮೊದಲು ಬೇಕಾಗಿರುವುದು. ಎನ್ಡಿಎಯ 25 ವರ್ಷಗಳ ಪ್ರಯಾಣದಲ್ಲಿ ದೇಶಕ್ಕಾಗಿಯೇ ದುಡಿಯುತ್ತಿದೆ. ಹಾಗೇ ನಮ್ಮ ದೇಶವು ಮುಂಬರುವ 25 ವರ್ಷಗಳಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಹೆಜ್ಜೆಗಳನ್ನು ಇಡಲು ಇದು ಸುಸಂದರ್ಭ. ಭಾರತ ಈಗ ಸ್ವಾವಲಂಬಿ ದೇಶವಾಗಿದೆ ಎಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟರು.
ಎನ್ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು..?
ರಾಜಕೀಯದಲ್ಲಿ ಪೈಪೋಟಿ ಇರಬೇಕು. ಆದರೆ ನಾಯಕರು ಶತ್ರುಗಳಂತೆ ವರ್ತಿಸಬಾರದು. ಎನ್ಡಿಎ ಮೈತ್ರಿಕೂಟವು ದೇಶದ ಎಲ್ಲ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ. ದೇಶದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಜಾಗತಿಕವಾಗಿ ಭಾರತದ ಮೇಲೆ ಭರವಸೆಗಳು ಹೆಚ್ಚಿವೆ. ಹೀಗಾಗಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ಆಶಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ 9 ವರ್ಷಗಳಲ್ಲಿ ನಮ್ಮ ಸರ್ಕಾರವು 30 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಅಕೌಂಟ್ಗೆ ಹಾಕಿದ್ದೇವೆ. ಇದರಿಂದ 3 ಲಕ್ಷ ಕೋಟಿಯಷ್ಟು ಭ್ರಷ್ಟಾಚಾರ ತಡೆದಿದ್ದೇವೆ. ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದ್ದ ಎಲ್ಲ ಭ್ರಷ್ಟಾಚಾರವನ್ನು ಹೋಗಲಾಡಿಸಿದ್ದೇವೆ. ಸರ್ಕಾರದ ಯೋಜನೆಗಳಲ್ಲಿ ಆಗುತ್ತಿದ್ದ ಲೀಕೇಜ್ ಅನ್ನು ತಡೆದು ಜನರಿಗೆ ಒಳ್ಳೆಯದು ಮಾಡಲಾಗಿದೆ. ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಕಷ್ಟು ಶ್ರಮಿಸಲಾಗಿದೆ. ಈ ಬಗ್ಗೆ ಸಂಶೋಧಕರು, ಶಿಕ್ಷಣ ತಜ್ಞರು ಬೆಳಕು ಚೆಲ್ಲಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ