newsfirstkannada.com

MOMENT OF THE DAY: ಆಂಧ್ರದಲ್ಲಿ ಹೊಸ ಸರ್ಕಾರ.. ಮೋದಿ, ಚಿರಂಜೀವಿ, ಪವನ್ ಕಲ್ಯಾಣ್ ವಿಡಿಯೋ ವೈರಲ್‌!

Share :

Published June 12, 2024 at 1:31pm

Update June 12, 2024 at 1:34pm

  ಆಂಧ್ರದಲ್ಲಿ ಟಿಡಿಪಿ, ಜನಸೇನಾ, ಬಿಜೆಪಿ ನೇತೃತ್ವದ ನೂತನ ಸರ್ಕಾರ

  ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡ ಶುಭ ಕೋರಿದ ಮೋದಿ

  ವೇದಿಕೆ ಮೇಲಿದ್ದ ಚಿರಂಜೀವಿ ಅವರ ಕಾಲಿಗೆ ಬಿದ್ದ ಪವನ್ ಕಲ್ಯಾಣ್‌!

ಅಮರಾವತಿ: ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ, ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಾಲ್ಕನೇ ಬಾರಿ ಸಿಎಂ ಚಂದ್ರಬಾಬು ನಾಯ್ಡು ಅವರು ಅದ್ಧೂರಿ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ಚಿರಂಜೀವಿ ಅವರನ್ನು ತಬ್ಬಿಕೊಂಡು ಆತ್ಮೀಯವಾದ ಶುಭಾಶಯ ಕೋರಿದ್ದಾರೆ.

ಆಂಧ್ರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು ಅವರನ್ನು ಪ್ರಧಾನಿ ಮೋದಿ ಅವರು ತಬ್ಬಿಕೊಂಡು ಶುಭಾಶಯ ಕೋರಿದರು.

ಚಂದ್ರಬಾಬು ನಾಯ್ಡು ಅವರ ಬಳಿಕ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪದಗ್ರಹಣಕ್ಕೆ ಮುಂದಾದರು. ಆಗ ವೇದಿಕೆ ಮೇಲಿದ್ದ ಅಣ್ಣ ಚಿರಂಜೀವಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ವಿಶೇಷವಾಗಿತ್ತು.

ಇನ್ನು ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾ. ರಾ. ಲೋಕೇಶ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಜನಸೇನೆಯ ಮೂವರು ಶಾಸಕರು ಮತ್ತು ಬಿಜೆಪಿಯ ಓರ್ವ ಶಾಸಕರು ಸೇರಿದಂತೆ 24 ಸಚಿವರು ಚಂದ್ರಬಾಬು ನಾಯ್ಡು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವ ಬಂಡಿ ಸಂಜಯ್ ಮತ್ತು ಇತರೆ ಎನ್‌ಡಿಎ ನಾಯಕರು ಭಾಗಿಯಾಗಿದ್ದರು. ನಟರಾದ ಚಿರಂಜೀವಿ, ರಜನಿಕಾಂತ್, ಬಾಲಯ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಾಜರಿದ್ದರು.

ಇದನ್ನೂ ಓದಿ: ರಾಮನಾಗು ರಾವಣನಾದರೆ.. ದರ್ಶನ್ ಅರೆಸ್ಟ್‌ ಆಗ್ತಿದ್ದಂತೆ ಜಗ್ಗೇಶ್ ಯಾಕೆ ಹೀಗಂದ್ರು? ಕಾರಣವೇನು? 

ಒಟ್ಟು 175 ಕ್ಷೇತ್ರಗಳಲ್ಲಿ ನಡೆದ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ 135, ಜೆಎಸ್‌ಪಿ 21 ಮತ್ತು ಬಿಜೆಪಿ 8 ಸ್ಥಾನಗಳನ್ನು ದಾಖಲೆಯ ದಿಗ್ವಿಜಯ ಸಾಧಿಸಿದೆ.

ಇದನ್ನೂ ಓದಿ: ಇಟ್ಕೊಂಡವಳು ಇರೋ ತನಕ.. ಕಟ್ಕೊಂಡವಳು ಕಡೇ ತನಕ.. ದರ್ಶನ್​​, ಪವಿತ್ರಾಗೆ ಹಿಡಿ ಶಾಪ ಹಾಕಿದ ತಾಯಿ -Video 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MOMENT OF THE DAY: ಆಂಧ್ರದಲ್ಲಿ ಹೊಸ ಸರ್ಕಾರ.. ಮೋದಿ, ಚಿರಂಜೀವಿ, ಪವನ್ ಕಲ್ಯಾಣ್ ವಿಡಿಯೋ ವೈರಲ್‌!

https://newsfirstlive.com/wp-content/uploads/2024/06/Modi-Pawan-Kalyan-Chiranjeevi-1.jpg

Load More