newsfirstkannada.com

ಚೀನಾ ಜತೆ ಸೇರಿ ಭಾರತದ ವಿರುದ್ಧವೇ ಕುತಂತ್ರ ಮಾಡಿತಾ ಮಾಲ್ಡೀವ್ಸ್..? ಏನಿದು ಹೊಸ ವಿವಾದ..?

Share :

21-11-2023

    ಚೀನಾ ಜೊತೆ ಸೇರಿ ಕುತಂತ್ರ ಮಾಡಿತಾ ಮಾಲ್ಡೀವ್ಸ್?

    ಭಾರತ ವಿರೋಧಿ ನಿಲುವು.. ಸೇನೆ ವಾಪಸ್​​ಗೆ ಒತ್ತಾಯ

    ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಮಯಿಝು ಆಯ್ಕೆ!

ಮಾಲ್ಡೀವ್ಸ್‌ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರೋ ದ್ವೀಪ ರಾಷ್ಟ್ರ. ನೀಲಿ ಸಮುದ್ರದಿಂದ ಸುತ್ತವರಿದಿರೋ ಸುಂದರ ಸ್ಥಳ. ಹೀಗೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸೋ ಮಾಲ್ಡೀವ್ಸ್‌-ಭಾರತದ ಸಂಬಂಧ ಮುರಿದುಬೀಳುವ ಸನ್ನಿವೇಶ ಎದುರಾಗಿದೆ. ನೂತನ ಅಧ್ಯಕ್ಷನ ಆಯ್ಕೆಯಾಗ್ತಿದ್ದಂತೆ ಭಾರತ ವಿರೋಧಿ ನಿಲುವು ತಳೆದಿದೆ. ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಭಾರತದ ವಿರುದ್ಧ ಸೆಟೆದು ನಿಂತಿದ್ದಾರೆ.

ಮಾಲ್ಡೀವ್ಸ್‌ ನೂತನ ಅಧ್ಯಕ್ಷನಿಂದ ಭಾರತ ವಿರೋಧಿ ನೀತಿ!

ನವೆಂಬರ್‌ 17ರಂದು ಮಾಲ್ಡೀವ್ಸ್‌ನ 8ನೇ ಅಧ್ಯಕ್ಷರಾಗಿ ಮೊಹಮ್ಮದ್ ಮುಯಿಝು ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗೆ ಪ್ರೆಸಿಡೆಂಟ್ ಆದ ಮರುಕ್ಷಣವೇ ಚೀನಾದ ಕಡೆ ಒಲವು ಹೊಂದಿರುವ ಮುಯಿಝು ಭಾರತದ ಸೇನೆಯನ್ನ ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಒತ್ತಾಯಿಸಿದ್ದಾರೆ. ಕಳೆದ ಶುಕ್ರವಾರ ನಡೆದಿದ್ದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ತೆರಳಿದ್ರು. ಈ ವೇಳೆ ಭಾರತದ ಸೇನೆ ಮಾಲ್ಡೀವ್ಸ್ ತೊರೆಯುವಂತೆ ರಿಜಿಜುಗೆ ಮುಯಿಝು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಯಿಝು ಹೇಳಿದ್ದೇನು?

ಹಿಂದೂ ಮಹಾಸಾಗರದಲ್ಲಿ ಕಾರ್ಯತಂತ್ರವಾಗಿ ನೆಲೆಗೊಂಡಿರುವ ವಿದೇಶಿ ಮಿಲಿಟರಿಯಿಂದ ಮಾಲ್ಡೀವ್ಸ್‌ ಅನ್ನು ಮುಕ್ತವಾಗಿಸಲು ಬದ್ಧವಾಗಿದ್ದೇನೆ. ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ನಾನು ಧೃಡವಾದ ಬದ್ಧತೆ ಹೊಂದಿದ್ದೇನೆ. ಮಾಲ್ಡೀವ್ಸ್‌ ದೇಶವನ್ನು ಸ್ವತಂತ್ರವಾಗಿಡುವ ನಿಟ್ಟಿನಲ್ಲಿ ವಿದೇಶಿ ಸೇನೆಯನ್ನು ಹೊರಕಳಿಸಲಾಗುತ್ತದೆ.

-ಮೊಹಮ್ಮದ್ ಮುಯಿಝು, ಮಾಲ್ಡೀವ್ಸ್ ಅಧ್ಯಕ್ಷ

ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದೆ ಭಾರತದ ಸಣ್ಣ ತುಕಡಿ

ಅಂದ್ಹಾಗೆ ಮಾಲ್ಡೀವ್ಸ್‌ ಭದ್ರತೆಗಾಗಿ ಭಾರತ ನಾಲ್ಕು ಬೇಹುಗಾರಿಕಾ ವಿಮಾನಗಳನ್ನ ಉಡುಗೊರೆಯಾಗಿ ನೀಡಿತ್ತು. ಅಲ್ಲದೇ ಯುದ್ಧ ವಿಮಾನಗಳ ನಿರ್ವಹಣೆಗಾಗಿ 77 ಭಾರತೀಯ ಸೈನಿಕರನ್ನ ನಿಯೋಜನೆ ಮಾಡಿತ್ತು. ಇದೀಗ ಮುಯಿಝು ಈ 77 ಸೈನಿಕರ ತುಕಡಿಯನ್ನ ಮರಳಿ ಭಾರತಕ್ಕೆ ಕಳಿಸಲು ನಿರ್ಧಸಿದ್ದಾರೆ ಎನ್ನಲಾಗ್ತಿದೆ.

100 ಒಪ್ಪಂದ ಮರುಪರಿಶೀಲನೆಗೂ ಮುಯಿಝು ನಿರ್ಧಾರ

ಈ ಹಿಂದೆ ಸುನಾಮಿ, ಆಂತರಿಕ ಸಂಘರ್ಷ ಸಂದರ್ಭಗಳಲ್ಲಿ ಭಾರತವೇ ಮಾಲ್ಡೀವ್ಸ್‌ಗೆ ಮೊದಲ ನೆರವು ನೀಡಿತ್ತು. ಆದ್ರೆ, ಇದನ್ನೆಲ್ಲಾ ಮರೆತಿರುವ ಮಾಲ್ಡೀವ್ಸ್‌ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಚೀನಾದ ಕುತಂತ್ರಗಳಿಗೆ ತಲೆಬಾಗ್ತಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಈ ಹಿಂದಿನ ಅಧ್ಯಕ್ಷ ಸೋಲಿಹ್‌ ಅವಧಿಯಲ್ಲಿ ಭಾರತದೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನ ಮುರಿಯಲು ಸಜ್ಜಾಗಿದ್ದಾರಂತೆ.. ಭಾರತದ ಜೊತೆ ಮಾಡಿಕೊಂಡಿದ್ದ 100ಕ್ಕೂ ಹೆಚ್ಚು ಒಪ್ಪಂದಗಳನ್ನ ಮರುಪರಿಶೀಲನೆ ನಡೆಸಲಾಗುತ್ತಿದೆ ಎಂಬ ಮಾತನ್ನಾಡಿದ್ದಾರೆ.

ಮುಯಿಝು ನಿರ್ಧಾರದ ಹಿಂದೆ ಚೀನಾದ ಕೈವಾಡ ಶಂಕೆ!

ನರಿಬುದ್ಧಿ ಚೀನಾ ಇತ್ತ ಪಾಕಿಸ್ತಾನವನ್ನ ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆ. ಶ್ರೀಲಂಕಾ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ.. ಇದೀಗ ಹಿಂದೂ ಮಹಾಸಾಗರದ ಮೇಲೆ ನಿಯಂತ್ರಣ ಸಾಧಿಸಲು ಭಾರತದ ವಿರುದ್ಧ ಮಾಲ್ಡೀವ್ಸ್‌ನ ಎತ್ತಿಕಟ್ಟುತ್ತಿದೆ ಎನ್ನಲಾಗ್ತಿದೆ.

ಒಟ್ಟಾರೆ, ಮಾಲ್ಡೀವ್ಸ್‌ನಿಂದ ಭಾರತದ ಸೇನೆ ಹಿಮ್ಮೆಟ್ಟಿದ್ರೆ ಹಿಂದೂಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯ ಬೆಳೆಸೋದು ಪ್ಲಾನ್‌.. ಈ ನಿಟ್ಟಿನಲ್ಲಿ ಮುಯಿಝು ಮೂಲಕ ಚೀನಾ ಈ ಕುತಂತ್ರಕ್ಕೆ ಕೈ ಹಾಗಿದೆ. ಆದ್ರೀಗ ಡ್ರ್ಯಾಗನ್ ದೇಶದ ಆಟಕ್ಕೆ ಭಾರತ ಹೇಗೆ ಚೆಕ್ ಮೇಟ್ ಇಡುತ್ತೆ ಅನ್ನೋದೆ ಮುಂದಿರೋ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾ ಜತೆ ಸೇರಿ ಭಾರತದ ವಿರುದ್ಧವೇ ಕುತಂತ್ರ ಮಾಡಿತಾ ಮಾಲ್ಡೀವ್ಸ್..? ಏನಿದು ಹೊಸ ವಿವಾದ..?

https://newsfirstlive.com/wp-content/uploads/2023/11/Maldives.jpg

Load More