ಶಿಕ್ಷಣ ಇಲಾಖೆಯಿಂದ ಅಡುಗೆ ಸಿಬ್ಬಂದಿಗೆ ವಿವಾದಾತ್ಮಕ ಗೈಡ್ಲೈನ್ಸ್
ಗೈಡ್ಲೈನ್ಸ್ಗೆ ಬೆನ್ನಲ್ಲೇ ಕೆಲ ಸಂಪ್ರದಾಯಸ್ಥ ಅಡುಗೆ ಸಿಬ್ಬಂದಿ ಬೇಸರ
ಇದು ಸಿದ್ದು ಸರ್ಕಾರದ ದ್ವೇಷದ ಆಡಳಿತ ಎಂದ ಹಿಂದೂ ಪರ ಸಂಘಟನೆ
ಬೆಂಗಳೂರು: ಬಿಸಿಯೂಟ ತಯಾರು ಮಾಡುವಾಗ ಅಡುಗೆ ಸಿಬ್ಬಂದಿ ಕೈಗೆ ಬಳೆ ತೊಟ್ಟಿರಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶ, ಕೆಲವು ಹಿಂದೂ ಸಂಪ್ರದಾಯಸ್ಥ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಕರ್ನಾಟಕ ಸರ್ಕಾರ ಸುತ್ತೋಲೆ ಒಂದನ್ನು ಹೊರಡಿಸಿದೆ. ಶಿಕ್ಷಣ ಇಲಾಖೆಯು ಪಿಎಂ ಪೋಷಣ್ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮದ ಪ್ರತಿದಿನ ಬಿಸಿಯೂಟ ವಿತರಣೆಯ ಪೂರ್ವದಲ್ಲಿ ಎಸ್ಡಿಎಂಸಿ ಸಮಿತಿ ಶಾಲೆಗೆ ಭೇಟಿ ನೀಡಬೇಕು. ಭೇಟಿ ವೇಳೆ ಅಡುಗೆ ಸಿಬ್ಬಂದಿ ಮಕ್ಕಳಿಗೆ ವಿತರಿಸಲು ಸಿದ್ಧಪಡಿಸಿರುವ ಬಿಸಿಯೂಟದ ಶುಚಿ-ರುಚಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು ಅಂತಾ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಲ್ಲಿ ಏನೆಲ್ಲ ಎಸ್ಡಿಎಂಸಿ ಸದಸ್ಯರು ಏನೆಲ್ಲ ಪರಿಶೀಲನೆ ಮಾಡಬೇಕು ಅನ್ನೋದ್ರ ಬಗ್ಗೆ ಗೈಡ್ಲೈನ್ಸ್ ಕೊಡಲಾಗಿದೆ. ಅದರ 7ನೇ ಕಾಲಂನಲ್ಲಿ ಅಡುಗೆ ಸಿಬ್ಬಂದಿ ಎಪ್ರಾನ್, ತಲೆಗವಸ ಮತ್ತು ಕೈಗವಸಗಳನ್ನು ಧರಿಸಿರಬೇಕು. ಕೈಗಳಲ್ಲಿ ಬಳೆಗಳನ್ನು ತೊಟ್ಟಿರಬಾರದು ಎಂದು ಬರೆಯಲಾಗಿದೆ. ಸರ್ಕಾರದ ಈ ಆದೇಶ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಸುಮಾರು 55 ಸಾವಿರ ಅಡುಗೆ ಸಿಬ್ಬಂದಿಯಿದ್ದು, ಅವರಲ್ಲಿ ಬಹುತೇಕ ಮಂದಿ ಕುಂಕುಮ, ಬಳೆ ತೊಡುವವರೇ ಹೆಚ್ಚಿದ್ದಾರೆ. ಇಲಾಖೆಯ ಈ ಆದೇಶ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ. ಮಕ್ಕಳ ಮೇಲೆ ಕಾಳಜಿ ಇದ್ದರೆ, ಈ ನಿಯಮವನ್ನು ಹಿಂದೆಯೇ ಮಾಡಬೇಕಿತ್ತು. ಅಷ್ಟಕ್ಕೂ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ? ಇದು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ದ್ವೇಷದ ರಾಜಕಾರಣ ಎಂದು ಹಿಂದೂ ಜನಜಾಗೃತಿ ವೇದಿಕೆಯ ಭವ್ಯ ಗೌಡ ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ