newsfirstkannada.com

ಅಮೆರಿಕದಲ್ಲಿ ‘Modi Ji Thali’ ಎಂಬ ಸ್ಪೆಷಲ್ ಊಟ ಲಾಂಚ್.. ಏನೆಲ್ಲ ಇರಲಿದೆ ಗೊತ್ತಾ?

Share :

12-06-2023

  ಮೋದಿಗೆ ಸ್ವಾಗತಕ್ಕೆ ಸ್ಪೆಷಲ್ ಊಟ ರೆಡಿ

  ಯಾರ ಒತ್ತಾಯಕ್ಕೆ ರೆಡಿ ಆಗಿದೆ ಗೊತ್ತಾ?

  ಇದನ್ನು ಮಾಡ್ತಿರುವ ಬಾಣಸಿಗ ಯಾರು?

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳಾಂತ್ಯದಲ್ಲಿ ಅಮೆರಿಕ ಪ್ರವಾಸ ಬೆಳಸಲಿದ್ದಾರೆ. ಮೋದಿ ಅವರಿಗೆ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಜೊತೆಗೆ ಪ್ರಧಾನಿಗೆ ‘ವಿಶೇಷ ಭೋಜನ’ ಡೆಡಿಕೇಟ್ ಮಾಡಲಾಗಿದೆ.

ನ್ಯೂ ಜೆರ್ಸಿ ಮೂಲದ ರೆಸ್ಟೋರೆಂಟ್​ನಲ್ಲಿ ‘ಮೋದಿ ಜೀ ಥಾಲಿ’ ಎಂಬ ವಿಶೇಷ ಭೋಜನ ವ್ಯವಸ್ಥೆ ಸಿಗುತ್ತಿದೆ. ಈ ಊಟವನ್ನು ಬಾಣಸಿಗ ಶ್ರೀಪಾದ ಕುಲಕರ್ಣಿ ಅನ್ನೋರು ತಯಾರಿಸುತ್ತಿದ್ದಾರೆ. ಭಾರತೀಯ ಸಾಂಪ್ರದಾಯಿಕ ಆಹಾರ ಪದಾರ್ಥಗಳಾದ ಕಿಚಡಿ, ರಸಗುಲ್ಲಾ, ಸರ್ಸೊನ್ ಕಾ ಸಾಗ್ (sarson ka saag), ಕಾಶ್ಮೀರಿ ದಮ್ ಆಲೂ, ಇಡ್ಲಿ, ಧೋಕ್ಲಾ, ಚಾಂಚ್ ( chaanch ), ಪಾಪಡ್​ ಈ ‘ಮೋದಿ ಜೀ ಥಾಲಿ’ಯಲ್ಲಿ ಇರಲಿದೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರ ಒತ್ತಾಯದ ಮೇರೆಗೆ ಈ ಭೋಜನ ತಯಾರಾಗುತ್ತಿದೆ. ಭಾರತ ಸರ್ಕಾರದ ಶಿಫಾರಸ್ಸಿನಂತೆ ವಿಶ್ವಸಂಸ್ಥೆಯು ಈ ವರ್ಷ ರಾಗಿಯನ್ನು International Year of Millets ಎಂದು ಘೋಷಣೆ ಮಾಡಿದೆ. ಇದರ ಗೌರವಾರ್ಥವಾಗಿ ‘Modi Ji Thali’ಯನ್ನು ಮಾಡುತ್ತಿದ್ದೇವೆ ಎಂದು ಕುಲಕರ್ಣಿ ಹೇಳಿದ್ದಾರೆ.

ಜೈ ಶಂಕರ್ ಹೆಸರಲ್ಲೂ ವಿಶೇಷ ಊಟ

ಇನ್ನು ರೆಸ್ಟೋರೆಂಟ್​ ಮಾಲೀಕರು ಇನ್ನೊಂದು ಸ್ಪೆಷಲ್ ಥಾಲಿಯನ್ನು ಮಾಡಲು ನಿರ್ಧರಿಸಿದ್ದಾರೆ. ಅದರು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್ ಅವರಿಗೆ ಅರ್ಪಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಮೋದಿ ಹೆಸರಲ್ಲಿ ‘ಸ್ಪೆಷಲ್ ಊಟ’ ತಯಾರಿಸೋದು ಇದೇ ಮೊದಲೇನಲ್ಲ. ಮೋದಿಯ ಹುಟ್ಟುಹಬ್ಬದ ದಿನ ಅಂದರೆ ಕಳೆದ ಸೆಪ್ಟೆಂಬರ್​ 17 ರಂದು ದೆಹಲಿ ಮೂಲದ ವ್ಯಕ್ತಿ ತಮ್ಮ ರೆಸ್ಟೊರೆಂಟ್​ನಲ್ಲಿ ‘56-inch Modi Ji’ ಎಂಬ ಥಾಲಿಯನ್ನು ಪರಿಚಯಿಸಿದ್ದರು. ಮೋದಿ ಅವರು ಜೂನ್ 21 ರಿಂದ ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರಲಿದ್ದಾರೆ. ಜೂನ್ 22 ರಂದು ಅಲ್ಲಿನ ಅಧ್ಯಕ್ಷ ಜೋ ಬೈಡನ್ ಮತ್ತು ಅಮೆರಿಕ ಫಸ್ಟ್​ ಲೇಡಿ ಜೊತೆ ಮೋದಿ ಅವರು ಊಟ ಸವಿಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದಲ್ಲಿ ‘Modi Ji Thali’ ಎಂಬ ಸ್ಪೆಷಲ್ ಊಟ ಲಾಂಚ್.. ಏನೆಲ್ಲ ಇರಲಿದೆ ಗೊತ್ತಾ?

https://newsfirstlive.com/wp-content/uploads/2023/06/PM_MODI.jpg

Load More