ಈ ಸೆಂಗೋಲ್ ತನ್ನದೆ ಆದ ಚರಿತ್ರೆಯನ್ನ ಹೊಂದಿದೆ
ಬ್ರಿಟಿಷರು ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ನೀಡಿದ್ದರು
ರಾಜರ ಆಡಳಿತ ನೆನಪಿಸುವ ಚಾರಿತ್ರ್ಯಿಕ ಮಹತ್ವ ಸಾರಲಿರುವ ಸೆಂಗೋಲ್
ನೂತನ ಸಂಸತ್ ಭವನ ಹತ್ತಾರು ವೈಭವಗಳಿಗೆ, ಹೊಸ ಹೊಸ ವಿಚಾರಗಳಿಗೆ ಸಾಕ್ಷಿಯಾಗಲಿದೆ. ಲೋಕಾರ್ಪಣೆಯಾಗಲಿರುವ ಕಟ್ಟಡದ ಪ್ರಮುಖ ಆಕರ್ಷಣೆಗಳಲ್ಲಿ ಐತಿಹಾಸಿಕ ವಸ್ತುವೊಂದು ಸೇರಿಕೊಳ್ಳಲಿದೆ.
ಅತ್ಯಾಧುನಿಕ ಕಟ್ಟಡದಲ್ಲಿ ದೇಶದ ಸ್ವಾತಂತ್ರ್ಯ ಕಾಲ ಹಾಗೂ ರಾಜರ ಆಡಳಿತವನ್ನು ನೆನಪಿಸುವ ‘ಸೆಂಗೋಲ್’ ಕಂಗೊಳಿಸಲಿದೆ. ನೂತನ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯ ಸ್ಪೀಕರ್ ಆಸನದ ಸಮೀಪದಲ್ಲಿ ಐತಿಹಾಸಿಕ ಚಿನ್ನದ ರಾಜದಂಡವನ್ನು ಸೆಂಗೋಲ್ ಅಳವಡಿಸಲಿದ್ದಾರೆ.
ಈ ಸೆಂಗೋಲ್ ತನ್ನದೆ ಆದ ಚರಿತ್ರೆಯನ್ನ ಹೊಂದಿದೆ. ಬ್ರಿಟಿಷರು ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ನೀಡಿದ್ರು. ಅಂದು ಅಧಿಕಾರ ಹಸ್ತಾಂತರದ ಸಂಕೇತವಾಗಿ ಏನನ್ನು ನೀಡ್ಬೋದು ಅನ್ನೋದ್ರ ಬಗ್ಗೆ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಜವಹರಲಾಲ್ ನೆಹರೂರನ್ನು ಕೇಳಿದ್ರು. ಈ ವೇಳೆ ಚೋಳರ ಅರಸ ಮನೆತನದಲ್ಲಿ, ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರ ವರ್ಗಾವಣೆ ಮಾಡುವ, ರಾಜ ಪುರೋಹಿತರ ಆಶೀರ್ವಾದ ಹೊಂದಿರುವ ಅತ್ಯಂತ ಪವಿತ್ರ ರಾಜದಂಡದ ಬಗ್ಗೆ ಸಂಶೋಧನೆಯಿಂದ ತಿಳಿದುಬಂದಿತ್ತು.
ಇದರಿಂದ ರಾಜಾಜಿಯವರು ತಮಿಳುನಾಡಿನ ತಂಜಾವೂರು ಅಂದಿನ ತಂಜೋರೆ ಜಿಲ್ಲೆಯ ಬ್ರಾಹ್ಮಣೇತರ ಸನ್ಯಾಸಿಗಳ ಪ್ರಮುಖ ಮಠ ತಿರುವಾವಡುದುರೈ ಅಧೀನಂನ್ನು ಕ್ವಾಂಟ್ಯಾಕ್ಟ್ ಮಾಡಿದ್ರು. ಚೋಳರ ಕಾಲದ ರಾಜದಂಡವನ್ನು ಹೋಲುವ ಸೆಂಗೋಲ್ನ ಅಗತ್ಯವನ್ನು ವಿವರಿಸಿದ್ದರು. ನಂತರ 1947ರಲ್ಲಿ ಕೇಂದ್ರ ಸರ್ಕಾರದ ಮನವಿಯ ಮೇಲೆ ತಮಿಳುನಾಡಿನ ಶೈವ ಮಠವೊಂದರ ಸೂಚನೆಯಂತೆ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಕುಟುಂಬ ರಾಜದಂಡವನ್ನು ತಯಾರಿಸಿ ಕೊಟ್ಟಿತ್ತು.
ಈ ಐತಿಹಾಸಿಕ ಸೆಂಗೋಲ್ಅನ್ನು ಇಲ್ಲಿಯ ತನಕ ಇದನ್ನ ಅಲಹಾಬಾದ್‌ನ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ರಾಜರ ಆಡಳಿತವನ್ನು ನೆನಪಿಸುವ ಚಾರಿತ್ರ್ಯಿಕ ಮಹತ್ವ ಹೊಂದಿರುವ ತುಣುಕೊಂದು ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ