ಭವ್ಯ ಭವನದ ಸುತ್ತಾ ನವನವೀನ ಕಥೆಗಳು ಕೂಡ ಇವೆ
1927ರಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಕಟ್ಟಡ ಸಣ್ಣದಾಗಿತ್ತು
ಲೋಕಸಭೆ, ರಾಜ್ಯಸಭೆಗಳಲ್ಲಿರುವ ಅಷ್ಟೂ ಸಂಸದರು ಒಟ್ಟಿಗೆ ಕೂರಲು ಕಷ್ಟವಾಗ್ತಿತ್ತು
ಉದ್ಘಾಟನೆಗೆ ಸಜ್ಜಾಗಿರುವ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್ ಭವನ ಹಲವು ರಹಸ್ಯಗಳನ್ನ ಹೊದ್ದು ನಿಂತಿದೆ. ಇಂಡಿಯನ್ ಪವರ್ಹೌಸ್ನ ರಚನೆಯ ಹಿಂದೆ ಕೂಡ ಸೀಕ್ರೆಟ್ ಅಡಗಿದೆ.
ಭವ್ಯ ಭವನದ ಸುತ್ತಾ ನವನವೀನ ಕಥೆಗಳು ಕೂಡ ಇವೆ. ಅಂದಹಾಗೆ ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಸಾಕಷ್ಟು ಕಾರಣಗಳಿವೆ. ನಿಮಗೆಲ್ಲಾ ಗೊತ್ತಿರುವಂತೆ ಹೀಗಿರುವ ಸಂಸತ್ ಭವನ 9 ದಶಕದ ಹಳೆಯದ್ದು. 1927ರಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಕಟ್ಟಡ ಸಣ್ಣದಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿರುವ ಅಷ್ಟೂ ಸಂಸದರು ಒಟ್ಟಿಗೆ ಕೂರಲು ಕಷ್ಟವಾಗ್ತಿತ್ತು ಅನ್ನೋ ಮಾತಿದೆ. ಇವಿಷ್ಟೇ ಅಲ್ಲ.
ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಜಾಗ ಸಾಕಾಗ್ತಿರಲಿಲ್ಲ. 9 ದಶಕಗಳ ಹಿಂದಿನ ಕಟ್ಟಡದಲ್ಲಿ ಕೆಲಸ ಮಾಡುವವರ ಮತ್ತು ಸಂದರ್ಶಕರ ಸಂಖ್ಯೆಯು ಸದ್ಯ ಎರಡು ಪಟ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ 2010ರಲ್ಲಿ ನೂತನ ಕಟ್ಟಡ ಆಗ್ಬೇಕು ಅನ್ನೋ ಕೂಗು ಮೊಳಗಿತ್ತು. 2026ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಗುವ ಸಾಧ್ಯತೆ ಇದ್ದು, ಒಂದು ವೇಳೇ ಕ್ಷೇತ್ರ ವಿಂಗಡಣೆಯಾದ್ರೆ, ಸಂಸದರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಈ ಎಲ್ಲಾ ಕಾರಣಗಳಿಂದ ಹೊಸ ಸಂಸತ್ ಭವನ ರಚನೆಯಾಗಿದ್ದು, ಉದ್ಘಾಟನೆಗೆ ಗಂಟೆಗಳನ್ನ ಎಣಿಸುತ್ತಿದೆ.
ಮೋದಿ ಪ್ರಧಾನಿಯಾಗುವ ಮುನ್ನವೇ ಸಂಸತ್ ಭವನಕ್ಕೆ ಶಿಫಾರಸು?
ಸಂಸತ್ ಭವನದ ಉದ್ಘಾಟನೆಯ ಕಾರ್ಯಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗ್ತಿವೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎಡಪಕ್ಷಗಳು, ತೃಣಮೂಲ ಮತ್ತು ಸಮಾಜವಾದಿ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಪ್ರಜಾಪ್ರಭುತ್ವದ ಆತ್ಮವನ್ನೇ ಹೀರಿರುವಾಗ ಹೊಸ ಸಂಸತ್ ಭವನದಲ್ಲಿ ಯಾವುದೇ ಮೌಲ್ಯಗಳು ಕಾಣುತ್ತಿಲ್ಲ. ಹೀಗಾಗಿ ಸಮಾರಂಭವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ವಿಪಕ್ಷಗಳು ಹೇಳಿಕೊಂಡಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಬದಲು ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟನೆ ಮಾಡಿತ್ತಿರುವುದು ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಹೀಗೆ ಹೊಸ ಸಂಸತ್ ಭವನಕ್ಕೆ ಒಂದು ಕಡೆ ವಿಪಕ್ಷಗಳಿಂದ ವಿರೋಧದ ಬಣ ಎದುರಾಗ್ತಿದ್ರೆ, ಅತ್ತ ಕಡೆಯಲ್ಲಿ ಸಂಸತ್ ರಚನೆಯ ಹಿಂದಿನ ರಹಸ್ಯವನ್ನ ವರದಿಯೊಂದು ಬಿಚ್ಚಿಟ್ಟಿದೆ. 2012ರಲ್ಲಿ ಮೋದಿಯವರು ಪ್ರಧಾನಿ ಆಗೋ ಮುನ್ನವೇ ಅಂದಿನ ಸ್ಪೀಕರ್ ಮೀರಾ ಕುಮಾರ್ ಸಮಿತಿಯೊಂದನ್ನ ರಚನೆ ಮಾಡಿದ್ದರು. ಆ ಸಮಿತಿ ಕೂಡಾ ನೂತನ ಕಟ್ಟಡ ರಚನೆಗೆ ಶಿಫಾರಸ್ಸು ಮಾಡಿತ್ತು. ಸಮಿತಿ ನೂತನ ಕಟ್ಟಡದ ರಚನೆಗೆ ಅಸ್ತು ಎಂದಿದ್ರೂ ಕೂಡ, ಯೋಜನೆ ಜಾರಿಯಾಗುವಲ್ಲಿ ಸಾಕಷ್ಟು ವಿಳಂಬವಾಗಿತ್ತು.
ಅಂತಿಮವಾಗಿ 2019ರಲ್ಲಿ ಮೋದಿ ಸರ್ಕಾರ ಮುದ್ರೆವೊತ್ತಿದ್ದರ ಪರಿಣಾಮ, 2020 ಡಿಸೆಂಬರ್ 10 ರಂದು ಪ್ರಧಾನಿ ಮೋದಿಯವರು ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ರು. ಹೀಗೆ ಪ್ರಧಾನಿ ಮೋದಿಯವರ ಸತತ ಪ್ರಯತ್ನದಿಂದ ಇಂದು ಇಂಡಿಯನ್ ಪವರ್ ಹೌಸ್ ಉದ್ಘಾಟನೆಗೆ ರೆಡಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ