newsfirstkannada.com

ಭವ್ಯ ಭವನಕ್ಕೆ 3 ದ್ವಾರಗಳು!! ಲೋಕಸಭೆ ರಾಷ್ಟ್ರಪಕ್ಷಿ ನವಿಲಿನ ಥೀಮ್​ನಲ್ಲಿ ನಿರ್ಮಾಣ.. ರಾಜ್ಯಸಭೆ ಸಭಾಂಗಣ..? 

Share :

28-05-2023

    ‘ನಮೋ’ ಸರ್ಕಾರಕ್ಕೆ 9 ವರ್ಷ ಪೂರೈಸಿದ ಬೆನ್ನಲ್ಲೆ ಉದ್ಘಾಟನೆ!

    ಭವ್ಯ ಭವನಕ್ಕೆ ಮೂರು ಮುಖ್ಯ ದ್ವಾರಗಳು.. ಏನಿದರ ವಿಶೇಷತೆ?

    ರಾಜ್ಯ ಸಭೆಯನ್ನು ಯಾವ ಥೀಮ್​ನಲ್ಲಿ ನಿರ್ಮಾಣ ಮಾಡಲಾಗಿದೆ

ಭಾರತಕ್ಕೆ ಇದು ಐತಿಹಾಸಿಕ ಕ್ಷಣ.. ಸ್ವತಂತ್ರ ಭಾರತ 75 ವರ್ಷಗಳನ್ನ ಪೂರೈಸಿದ ಈ ಹೊತ್ತಲ್ಲೇ ಇಂಡಿಯನ್​ ಪವರ್​​ಹೌಸ್​ನ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವು ನೂತನ ಸಂಸತ್​ ಭವನ, ರಾಷ್ಟ್ರ ರಾಜಧಾನಿಯಲ್ಲಿ ತಲೆ ಎತ್ತಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಭವ್ಯ ಸಂಸತ್​​ ಭವನ ತೀವ್ರ ವಿರೋಧದ ನಡುವೆಯೂ ಲೋಕಾರ್ಪಣೆಗೆ ಸಜ್ಜಾಗಿದೆ.

ಭಾರತದ ಏಕತೆಯ ಸಂಕೇತ.. ಪ್ರತಿಯೊಬ್ಬ ಭಾರತೀಯನ ಹೆಮ್ಮಯ ಪ್ರತೀಕ ನೂತನ ಸಂಸತ್​ ಭನವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆ ಎತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಕಣ್ಮನ ಸೆಳೆಯುವ ಭವ್ಯ ಸಂಸತ್​ ಭವನ ಲೋಕಾರ್ಪಣೆಗೆ ಸಜ್ಜಾಗಿದೆ.. ಇಡೀ ದೇಶವೇ ಕಾದು ಕುಳಿತಿದ್ದ ಆ ಅಪೂರ್ವ ಕ್ಷಣ ಬಂದಾಗಿದೆ. ಸುಮಾರು 13 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ನಾಲ್ಕು ಅಂತಸ್ಥಿನ ಸಂಸತ್​ ಕಟ್ಟಡ ಹತ್ತು ಹಲವು ವಿಶೇಷತೆಗಳನ್ನ ಒಳಗೊಂಡಿದೆ.

ಮೊನ್ನೆಯಷ್ಟೇ ರಾಜದಂಡವನ್ನ ಅನಾವರಣಗೊಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೂತನ ಸಂಸತ್​ ಭವನದ ಉದ್ಘಾಟನೆ ನಡೆಸಲಿದ್ದಾರೆ. ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಪ್ರತೀಕ ಅಂದಿರೋ ಪ್ರಧಾನಿ ನರೇಂದ್ರ ಮೋದಿ, ಹೊಸ ಸಂಸತ್ ಭವನದ ಒಳಾಂಗಣ ವಿಡಿಯೋವನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದೇಶದ ಜನರಿಗೆ ಮೈ ಪಾರ್ಲಿಮೆಂಟ್ ಮೈ ಪ್ರೈಡ್ ಅನ್ನೋ ಹ್ಯಾಷ್​ಟ್ಯಾಗ್​ ಬಳಸಿ ವಿಡಿಯೋ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಭಾನುವಾರ ಮುಂಜಾನೆ ಹೋಮ ಹವನ ಮತ್ತು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಬಳಿಕ ಔಪಚಾರಿಕವಾಗಿ ಲೋಕಾರ್ಪಣೆ ನೆರವೇರಲಿದೆ. ಶೈವ ಧರ್ಮದ ಪ್ರಧಾನ ಅರ್ಚಕರಿಂದ ವಿಧ್ಯುಕ್ತ ರಾಜದಂಡ ಸೆಂಗೋಲ್ ಅನ್ನು, ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಲಾಗುವುದು ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಸಂಸತ್ ಭವನದ ಸ್ಪೀಕರ್ ಪೀಠದ ಬಳಿ ಸೆಂಗೋಲ್ ಅಳವಡಿಸಲು ಈಗಾಗಲೇ ನಿರ್ಧರಿಸಲಾಗಿದೆ.. ಸಂಕೀರ್ಣದ ಔಪಚಾರಿಕ ಉದ್ಘಾಟನೆಯ ಸಂದರ್ಭದಲ್ಲಿ ಮಾಜಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ. ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಸಂಸತ್ ಕಟ್ಟಡ ಸುಮಾರು 17 ಸಾವಿರ ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ.

ನೂತನ ಸಂಸತ್​ ಭವನವನ್ನ ಕಟ್ಟಿರೋದು ಬರೋಬ್ಬರಿ 13 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ.. ತ್ರಿಕೋನಾಕಾರದಲ್ಲಿ ಕಟ್ಟಲಾಗಿರುವ ಭವ್ಯ ಭವನ ನಿರ್ಮಾಣವಾಗಿರೋದು ಹಳೆಯ ಸಂಸತ್ ಭವನದ ಪಕ್ಕದಲ್ಲೇ.. ಈ ಹೊಸ ಕಟ್ಟಡ ಬರೋಬ್ಬರಿ 150 ವರ್ಷ ಬಾಳಿಕೆ ಬರುತ್ತೆ ಅಂತಾ ತಜ್ಞರು ಅಭಿಪ್ರಯ ಪಟ್ಟಿದ್ದಾರೆ.. ಭೂಕಂಪದಂತಹ ಯಾವುದೇ ವ್ಯತಿರಿಕ್ತ ಬದಲಾವಣೆ ಆದ್ರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ಈ ಕಟ್ಟಡವನ್ನ ವಿನ್ಯಾಸ ಮಾಡಲಾಗಿದೆ.. ಹಳೆಯ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸ್ಥಳಾವಕಾಶ ಬಹಳ ಕಡಿಮೆ ಇತ್ತು.. ಆದ್ರೆ ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸಭಾಂಗಣಗಳು ವಿಶಾಲವಾಗಿವೆ.

ಲೋಕಸಭೆ ಸಭಾಂಗಣ ನವಿಲಿನ ಥೀಮ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಷ್ಟಕ್ಕೂ ನವಿಲು ನಮ್ಮ ದೇಶದ ರಾಷ್ಟ್ರೀಯ ಪಕ್ಷಿ. ಹೀಗಾಗಿ, ನವಿಲಿನ ರೀತಿಯಲ್ಲೇ ಲೋಕಸಭೆ ಹಾಲ್ ವಿನ್ಯಾಸ ಮಾಡಲಾಗಿದೆ. ಯಾವುದೇ ಕೊಟ್ಟಡಿಯಲ್ಲೂ ಗಾಳಿ ಬೆಳಕಿಗೆ ಕೊರತೆ ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ರಾಜ್ಯಸಭೆಯನ್ನ ಕಮಲದ ಥೀಮ್ ಅಡಿ ನಿರ್ಮಾಣ ಮಾಡಲಾಗಿದ್ದು, ಕಮಲದ ಹೂವಿಗೆ ನಮ್ಮ ಪುರಾಣಗಳಲ್ಲಿ ಮಾತ್ರವಲ್ಲ ಇಂದಿಗೂ ವಿಶೇಷ ಪ್ರಾಧಾನ್ಯತೆ ಇದೆ. ಅದು ನಮ್ಮ ರಾಷ್ಟ್ರೀಯ ಪುಷ್ಪ.. ಹೀಗಾಗಿ ರಾಜ್ಯಸಭೆಯನ್ನ ಕಮಲದ ಥೀಮ್​​ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಲೋಕಸಭೆಯಲ್ಲಿ ಸುಮಾರ 888 ಜನ ಕೂರುವಂತೆ ವಿನ್ಯಾಸ ಮಾಡಲಾಗಿದ್ದು, ರಾಜ್ಯಸಭೆಯಲ್ಲಿ 384 ಜನ ಕೂರಲು ವ್ಯವಸ್ಥೆ ಮಾಡಲಾಗಿದೆ.. ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ ಕೂಡಾ ಇಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗೋದಿಲ್ಲ ಎನ್ನಲಾಗಿದೆ. ಜೊತೆಗೆ ಸೆಂಟ್ರಲ್​ ಹಾಲ್​ ಇಲ್ಲದೇ ಇರೋದ್ರಿಂದ ಜಂಟಿ ಅಧಿವೇಶನ ನಡೆಸಬೇಕು ಅಂದ್ರೆ ಲೋಕಸಭೆಯಲ್ಲೇ ಸುಮಾರು 1,272 ಮಂದಿ ಕುಳಿತುಕೊಳ್ಳೋದಕ್ಕೆ ವ್ಯವಸ್ಥೆ ಮಾಡಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭವ್ಯ ಭವನಕ್ಕೆ 3 ದ್ವಾರಗಳು!! ಲೋಕಸಭೆ ರಾಷ್ಟ್ರಪಕ್ಷಿ ನವಿಲಿನ ಥೀಮ್​ನಲ್ಲಿ ನಿರ್ಮಾಣ.. ರಾಜ್ಯಸಭೆ ಸಭಾಂಗಣ..? 

https://newsfirstlive.com/wp-content/uploads/2023/05/new-Parliament-2.jpg

Load More