newsfirstkannada.com

ಭವ್ಯ​ ಭವನದ 3 ದ್ವಾರಗಳು ಹೆಸರುಗಳು ಏನು ಗೊತ್ತಾ? ಹೊಸ ಸಂಸತ್​​ ವಿಶೇಷತೆ ಇಲ್ಲಿದೆ..!

Share :

28-05-2023

    ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ

    ಕಟ್ಟಡದ ಒಳಾಂಗಣದಲ್ಲಿ ಸಚಿವರಿಗೆ, ಅಧಿಕಾರಿಗಳಿಗೆ ಕಚೇರಿಯ ವ್ಯವಸ್ಥೆಯಿದೆ

    ದೊಡ್ಡ ದೊಡ್ಡ ಸಭಾಂಗಣಗಳು, ಕಚೇರಿಗಳು ಜೊತೆ ಪಾರ್ಕಿಂಗ್ ವ್ಯವಸ್ಥೆ

ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಕಾಲವಿದು. ರಾಷ್ಟ್ರ ರಾಜಧಾನಿಯಲ್ಲಿ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಲೋಕಾರ್ಪಣೆಗೆ ಸಜ್ಜಾಗಿದೆ. ಕಣ್ಮನ ಸೆಳೆಯುವ ಭವ್ಯ ಭವನದಲ್ಲಿ ಹತ್ತು ಹಲವು ವಿಶೇಷತೆಗಳು ಅಡಗಿವೆ. ನೂತನ ಸಂಸತ್​ ಭವನ ಉದ್ಘಾಟನೆಯ ಅಪೂರ್ವ ಕ್ಷಣವನ್ನ ನೋಡಲು ಇಡೀ ದೇಶವೇ ಕಾಯ್ತಿದೆ.

ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಮೂರು ಮುಖ್ಯದ್ವಾರಗಳನ್ನ ಮಾಡಲಾಗಿದೆ. ಅದಕ್ಕೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ. ಕಟ್ಟಡದ ಒಳಾಂಗಣದಲ್ಲಿ ಸಚಿವರಿಗೆ, ಅಧಿಕಾರಿಗಳಿಗೆ ಕಚೇರಿಯ ವ್ಯವಸ್ಥೆಯಿದೆ. ದೊಡ್ಡ ದೊಡ್ಡ ಸಭಾಂಗಣಗಳು, ಕಚೇರಿಗಳು, ಕೋಣೆಗಳು ಪಾರ್ಕಿಂಗ್ ವ್ಯವಸ್ಥೆ ನೂತನ ಕಟ್ಟಡದಲ್ಲಿದೆ. ಇದಲ್ಲದೆ ಸಾಂವಿಧಾನಿಕ ಭವನ ಅನ್ನೋ ಮತ್ತೊಂದು ಹಾಲ್ ಕೂಡಾ ಇದೆ.. ಕಚೇರಿಗಳಂತೂ ವಿಶಾಲವಾಗಿ ಹಾಗೂ ಅತ್ಯಾಧುನಿಕ ವಿನ್ಯಾಸದಿಂದ ಕೂಡಿವೆ. ಆಡಿಯೋ ಮತ್ತು ವಿಡಿಯೋ ಕಾನ್ಫರೆನ್ಸ್​ ನಡೆಸಲು ಸಭಾಂಗಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ದೊಡ್ಡ ಗ್ರಂಥಾಲಯವನ್ನ ಕೂಡ ನಿರ್ಮಿಸಲಾಗಿದೆ.  

ಭವ್ಯ​ ಭವನದ ವಿಶೇಷತೆ..!

  • ಕಟ್ಟಡದ ಎತ್ತರ –50 ಮೀಟರ್
  • ಸಂಸತ್​​​ ಭವನ ಸುತ್ತಳತೆ- 13 ಎಕರೆ
  • ಒಟ್ಟು ವಿಸ್ತೀರ್ಣ- 64,500 ಚದರ್ ಮೀಟರ್
  • ನಿರ್ಮಾಣ ವಿಸ್ತೀರ್ಣ – 58,700 ಚದರ ಮೀಟರ್​​
  • ಒಟ್ಟು ನಿರ್ಮಾಣ ವೆಚ್ಚ – 971 ಕೋಟಿ ರೂಪಾಯಿ
  • ಸಂಸದರ ಆಸನ ಸಾಮರ್ಥ್ಯ- 1,224
  • ಹೆಚ್ಚುವರಿ ಆಸನ -1,140
  • ಲೋಕಸಭಾ ಸದಸ್ಯರಿಗೆ ಆಸನ ವ್ಯವಸ್ಥೆ- 888
  • ರಾಜ್ಯಸಭೆ ಸದಸ್ಯರಿಗೆ ಆಸನ ವ್ಯವಸ್ಥೆ- 384
  • ಪ್ರದರ್ಶಿತ ಕಲಾಕೃತಿ- 5,000
  • ಕಬ್ಬಿಣ ಬಳಕೆ- 26,045 ಮೆಟ್ರಿಕ್​ ಟನ್
  • ಸಿಮೆಂಟ್​ ಬಳಕೆ – 63,807 ಮೆಟ್ರಿಕ್​ ಟನ್​​
  • ಉದ್ಯೋಗ ಸೃಷ್ಟಿ- 23,04,095
  • ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ – 5000

ಟಾಟಾ ಪ್ರಾಜೆಕ್ಟ್​​ ಲಿಮಿಟೆಡ್​ನಿಂದ ನಿರ್ಮಿಸಲಾಗಿರುವ ಭವ್ಯ ಭವನಕ್ಕೆ ಬರೋಬ್ಬರಿ 1200 ಕೋಟಿ ರೂಪಾಯಿ ವೆಚ್ಛ ತಗುಲಿದೆ.. ಕೇಂದ್ರೀಯ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಕಾರಿಡಾರ್‌ ಅನ್ನು ನವೀಕರಿಸಲಾಗಿದೆ. ಹೊಸ ಸಂಸತ್‌ ಭವನವು ಈಗಿರುವ ಸಂಸತ್‌ ಭವನಕ್ಕಿಂತ ದೊಡ್ಡದಾಗಿದ್ದು, ಆಕರ್ಷಕವಾಗಿ ಮತ್ತು ಆಧುನಿಕ ಸೌಲಭ್ಯಗಳಿಂದ ಕೂಡಿದೆ.. ಡಿಸೆಂಬರ್‌ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್‌ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು, ಇದನ್ನು ಕೇಂದ್ರ ನಗರ ವಸತಿ ಮತ್ತು ಅಭಿವೃದ್ಧಿ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ.

ಸಂಸತ್​ ಭವನದಲ್ಲಿ ಕಂಗೊಳಿಸುತ್ತಿದೆ ಇಂದೋರ್​​​ನ ಅಶೋಕಚಕ್ರ..!
ನವಭಾರತ ನಿರ್ಮಾಣದ ಸ್ಫೂರ್ತಿಯಾಗಲಿರೋ ನೂತನ ಸಂಸತ್​ ಭವನ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಯ ಕಚ್ಚಾವಸ್ತುಗಳನ್ನ ಬಳಸಲಾಗಿದೆ.. ಹೊರ ದೇಶಗಳಿಂದಲೂ ಕೆಲವು ವಸ್ತುಗಳನ್ನ ಆಮದು ಮಾಡಿಕೊಳ್ಳಲಾಗಿದೆ.. ಹೊಸ ಸಂಸತ್ತಿನಲ್ಲಿ ಬಳಸಲಾದ ತೇಗದ ಮರವನ್ನ ನಾಗ್ಪುರದಿಂದ ತರಿಸಿದ್ರೆ, ರಾಜಸ್ಥಾನದ ಸಮರ್ಥುರಾದಿಂದ ಕೆಂಪು ಮತ್ತು ಬಿಳಿ ಮಾರ್ಬಲ್​ಗಳನ್ನ ತರಿಸಲಾಗಿದೆ.. ಉತ್ತರ ಪ್ರದೇಶದ ಮಿರ್ಜಾಪುರದಿಂದ ಕಾರ್ಪೆಟ್​ ತರಿಸಿದ್ದು, ಭವನದ ನೆಲದ ಮೇಲೆ ಹಾಸಲಾಗಿದೆ.

ಇನ್ನು ಕಟ್ಟಡದಲ್ಲಿ ಅಗರ್ತಲಾದಿಂದ ತಂದ ಬಿದಿರನ್ನು ಬಳಸಲಾಗಿದ್ದು, ರಾಜಸ್ಥಾನದ ರಾಜನಗರ ಮತ್ತು ನೋಯ್ಡಾದಿಂದ ಕಲ್ಲಿನ ಜಾಲರಿಗಳನ್ನ ತಂದು ಸ್ಥಾಪಿಸಲಾಗಿದೆ.. ಇಡೀ ಸಂಸತ್​ ಭವನದಲ್ಲೇ ಕಂಗೊಳಿಸುವ ಅಶೋಕಚಕ್ರವನ್ನ ಇಂದೋರ್​ನಿಂದ ಆಮದು ಮಾಡಿಕೊಳ್ಳಲಾಗಿದ್ದು, ಮುಂಬೈನಿಂದ ತಂದ ಪೀಠೋಪಕರಣಗಳನ್ನ ಬಳಸಲಾಗಿದೆ.. ಇನ್ನು ಕಲ್ಲಿನ ಕೆತ್ತನೆಗೆ ದೇಶದ ವಿವಿಧ ಭಾಗಗಳಿಂದ ಶಿಲ್ಪಿಗಳನ್ನ ಕರೆಸಲಾಗಿದ್ದು, ಭವ್ಯ ಸಂಸತ್​ ಭವನ ರಾಷ್ಟ್ರ ರಾಜಧಾನಿಯಲ್ಲಿ ಕಂಗೊಳಿಸುತ್ತಿದೆ.

ಇಂಡಿಯನ್​ ಪವರ್​​ಹೌಸ್​​ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.. ಈ ಮಧ್ಯೆ ಸ್ಪೀಕರ್​ ಪಕ್ಕದಲ್ಲೇ ಸ್ಥಾಪಿಸಲಾಗುವ ರಾಜದಂಡದ ಬಗ್ಗೆ ಚರ್ಚೆಗಳು ಜೋರಾಗಿವೆ.. ಹತ್ತಾರು ರಾಜಕೀಯ ಪಕ್ಷಗಳು ಸಂಸತ್​ ಭವನದ ಉದ್ಘಾಟನೆಯನ್ನ ಬಹಿಷ್ಕರಿಸಿದ್ದು, ಈ ಎಲ್ಲಾ ಗೊಂದಲಗಳ ನಡುವೆಯೇ ಲೋಕಾರ್ಪಣೆಗೆ ಸಿದ್ಧವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭವ್ಯ​ ಭವನದ 3 ದ್ವಾರಗಳು ಹೆಸರುಗಳು ಏನು ಗೊತ್ತಾ? ಹೊಸ ಸಂಸತ್​​ ವಿಶೇಷತೆ ಇಲ್ಲಿದೆ..!

https://newsfirstlive.com/wp-content/uploads/2023/05/NEW_PRALIMENT-2.jpg

Load More