ಏನಿದು ನೂತನ ಸಂಸತ್ ಭವನದ ವಿವಾದ?
19ವಿಪಕ್ಷಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಬಹಿಷ್ಕಾರ!
ವಿಪಕ್ಷಗಳ ನಡೆ ‘ದುರಾದೃಷ್ಟಕರ’ ಎಂದ ಕೇಂದ್ರ ಸರ್ಕಾರ
ಇಡೀ ದೇಶದ ಆಡಳಿತದ ಪ್ರಮುಖ ನಿರ್ಧಾರಗಳು ಕಾಯ್ದೆ ಕಾನೂನುಗಳಾಗುವ ಪವಿತ್ರವಾದ ಸ್ಥಳ ಸಂಸತ್ ಭವನದ ನೂತನವಾಗಿ ತಲೆ ಎತ್ತಿದೆ. 28ಕ್ಕೆ ಈ ನೂತನ ಭವನದ ಉದ್ಘಾಟನೆಯಾಗ್ತಿದೆ. ಆದ್ರೆ ಈ ಭವನ ಉದ್ಘಾಟನೆಯ ವಿಚಾರದಲ್ಲೂ ಹೊಸ ವಿವಾದವೊಂದು ಸುತ್ತಿಕೊಂಡಿದೆ. ಕಾಂಗ್ರೆಸ್ ಹಾಗೂ ಇತರೆ ಮಿತ್ರಪಕ್ಷಗಳು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿವೆ.
2010ರ ಡಿಸೆಂಬರ್ 10ರಂದು ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದರು. ಸುಮಾರು ಎರಡೂವರೆ ವರ್ಷಗಳ ಬಳಿಕ ಹೊಸ ಸಂಸತ್ ಭವನದ ನಿರ್ಮಾಣ ಕಾರ್ಯ ಮುಗಿದಿದ್ದು ಉದ್ಘಾಟನೆ ಹಂತಕ್ಕೆ ಬಂದು ತಲುಪಿದೆ. ಇದೇ ಮೇ 28ರಂದು ಉದ್ಘಾಟನೆಗೆ ಸಿದ್ಧವಾಗಿದ್ದು ಉದ್ಘಾಟನೆ ವಿಚಾರಕ್ಕೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ.
ಪ್ರಧಾನಿ ಮೋದಿ ಉದ್ಘಾಟನೆಗೆ 19 ವಿಪಕ್ಷಗಳಿಂದ ವಿರೋಧ!
ನಾಲ್ಕೇ ದಿನದಲ್ಲಿ ನೂತನ ಸಂಸತ್ ಭವನ ಉದ್ಘಾಟನೆ ಆಗಲಿದೆ. ಸುಮಾರು 862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಸಂಸತ್ ಭವನವನ್ನು ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಆದ್ರೆ ರಾಷ್ಟ್ರಪತಿಯವರನ್ನು ಬಿಟ್ಟು ಪ್ರಧಾನಿಯವರೇ ಸಂಸತ್ ಭವನ ಉದ್ಘಾಟನೆ ಮಾಡ್ತಿದ್ದಾರೆ, ಇದು ಗಂಭೀರ ಅಪಮಾನ ಮಾತ್ರವಲ್ಲ, ಪ್ರಜಾಪ್ರಭುತ್ವದ ಮೇಲಿನ ನೇರವಾದ ಹಲ್ಲೆ ಅಂತ ವಿಪಕ್ಷಗಳು ಕಿಡಿಕಾರಿವೆ.. ರಾಷ್ಟ್ರಪತಿಗಳು ರಾಷ್ಟ್ರದ ಮುಖ್ಯಸ್ಥರಷ್ಟೇ ಅಲ್ಲ, ಸಂಸತ್‌ನ ಅವಿಭಾಜ್ಯ ಅಂಗ ಅಂತ ವಾದ ಮಂಡಿಸಿವೆ. ಕಾಂಗ್ರೆಸ್, ಟಿಎಂಸಿ, ಎಎಪಿ, ಶಿವಸೇನೆ ಸೇರಿದಂತೆ ಸುಮಾರು 19 ವಿರೋಧ ಪಕ್ಷಗಳು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಇನ್ನು ಈ ನಿರ್ಧಾರಕ್ಕೆ ಸಿಪಿಐ ಮತ್ತು ಸಿಪಿಎಂ, ಎಸ್ಪಿ, ಎನ್ಸಿಪಿ, ಆರ್ಜೆಡಿ, ಆರ್ಎಲ್ಡಿ, ಎಂಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸಹಿ ಹಾಕಿವೆ.
ಸಂಸತ್ ಭವನವನ್ನು ಪ್ರಧಾನಿ ಉದ್ಘಾಟನೆ ಮಾಡ್ತಿರೋದಕ್ಕೆ ಕಿಡಿಕಾರಿರುವ ಆಪ್ ಮುಖಂಡ ಸಂಜಯ್ ಸಿಂಗ್ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರನ್ನ ಕೈ ಬಿಟ್ಟಿದ್ದು ಸರಿಯಲ್ಲ, ಇದು ಇಡೀ ದೇಶದ ಬುಡಕಟ್ಟು ಜನಾಂಗಗಳಿಗೆ ಅಪಚಾರ ಮಾಡಿದಂತೆ. ಹೀಗಾಗಿ ಆಪ್ ಈ ಕಾರ್ಯಕ್ರಮವನ್ನು ಬಹಿಷ್ಕರಿಸಲಿದೆ ಅಂತ ಟ್ವೀಟ್ ಮಾಡಿದ್ದಾರೆ.

ವಿಪಕ್ಷಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಇದೊಂದು ದುರಾದೃಷ್ಟಕರ ಬೆಳವಣಿಗೆ ಅಂತ ಕಿಡಿಕಾರಿದ್ದಾರೆ. ವಿವಾದವೇ ಇಲ್ಲದ ವಿಷಯದಲ್ಲಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಲೋಕಸಭೆಯ ಸಭಾಧ್ಯಕ್ಷರು ಸಂಸತ್‌ನ ಪಾಲಕರಾಗಿದ್ದು ಅವರೇ ಖುದ್ದಾಗಿ ಪ್ರಧಾನಿ ಮೋದಿಗೆ ಉದ್ಘಾಟನೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಭಾರತದ ಸಂಸತ್ ಭವನ ಸ್ವಾತಂತ್ರ್ಯಪೂರ್ವದಲ್ಲೇ ಅಂದ್ರೆ 1921 ರಿಂದ 1927 ರವರೆಗೆ 6 ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿತ್ತು.. ಈ ಭವನದ ವಿನ್ಯಾಸ ಮತ್ತು ನಿರ್ಮಾಣವನ್ನು ವಾಸ್ತುಶಿಲ್ಪಿ ಎಡ್ವಿನ್ ಲೂಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಹಿಸಿಕೊಂಡು ಪೂರ್ಣಗೊಳಿಸಿದ್ದರು. ಇದನ್ನು ಹೌಸ್ ಆಫ್ ಪಾರ್ಲಿಮೆಂಟ್ ಅಂತ ಕರೆಯಲಾಗ್ತಿತ್ತು. 2026ರ ವೇಳೆಗೆ 848 ಲೋಕಸಭಾ ಸದಸ್ಯರನ್ನು ಹೊಂದುವ ಸಾಧ್ಯತೆಯಿದ್ದು ಜಾಗ ಸಾಕಾಗುತ್ತಿರಲಿಲ್ಲ.. ಹೀಗಾಗಿ 1200ಕ್ಕೂ ಹೆಚ್ಚು ಸದಸ್ಯರಿಗೆ ಸರಿ ಹೊಂದುವಂತೆ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. ಮೇ 28 ರಂದು ಭಾನುವಾರ ಮಧ್ಯಾಹ್ನ 12ಗಂಟೆಗೆ ನೂತನ ಸಂಸತ್ ಭವನಕ್ಕೆ ಮುಹೂರ್ತ ನಿಗದಿಯಾಗಿದೆ.. ವಿಪಕ್ಷಗಳು ಕಾರ್ಯಕ್ರಮ ಬಹಿಷ್ಕರಿಸಿದ್ದು ಸಂಸತ್ ಭವನ ರಾಷ್ಟ್ರಪತಿಯವರಿಂದಲೇ ಉದ್ಘಾಟನೆಯಾಗುತ್ತಾ ಅಂತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ