ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂಬ 3 ದ್ವಾರ
ಆಟೋಮ್ಯಾಟಿಕ್ ಮೈಕ್ ಸಿಸ್ಟಮ್ ಅಳವಡಿಸಲಾಗಿದೆ!
ಸಂಸದರು ನಿಗದಿತ ಸಮಯ ಮಾತ್ರ ಮಾತನಾಡಬೇಕು
ನವದೆಹಲಿ: 75 ವರ್ಷಗಳಿಂದ ಸಂಸದರ ಗಲಾಟೆ, ಗದ್ದಲ ಕೇಳಿದ್ದ, ಅದೆಷ್ಟೋ ಕಾನೂನುಗಳ ಜಾರಿಗೆ ಕನ್ನಡಿಯಾಗಿದ್ದ ಹಳೇ ಸಂಸತ್ ಭವನ ಇತಿಹಾಸದ ಪುಟಕ್ಕೆ ಸೇರಿದೆ. ಭಾರತದ ಸಂಸತ್ತಿನ 75ನೇ ವರ್ಷಾಚರಣೆ ಹೊತ್ತಲ್ಲಿ ದೇಶದ ನವಯುಗ ಆರಂಭವಾಗಿದೆ. ಹೊಸ ಸಂಸತ್ ಭವನ ಕಾರ್ಯಾರಂಭವಾಗಿದ್ದು, ದೇಶದ ಎಲ್ಲಾ ಸಂಸದರ ಸಮಾಗಮಕ್ಕೆ ಸಾಕ್ಷಿಯಾಗಿದೆ.
ಹಳೇ ಬೇರು ಹೊಸ ಚಿಗುರು ಎನ್ನುವಂತೆ ಭವ್ಯ ಭಾರತ ಎರಡು ಮಹತ್ವದ ಸಂಗತಿಗಳಿಗೆ ಸಾಕ್ಷಿಯಾಗಿದೆ. 96 ವರ್ಷದ ದೆಹಲಿಯ ಹಳೇ ಸಂಸತ್ ಭವನ ಇತಿಹಾಸದ ಪುಟಗಳನ್ನ ಸೇರಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ಕಟ್ಟಿದ್ದ ಕಟ್ಟಡ ಇನ್ಮೇಲೆ ಸಂವಿಧಾನ ಸದನ ಸ್ಮಾರಕವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ನವಭಾರತದ ಹೊಸ ಸಂಸತ್ ಭವನದ ನವ ಅಧ್ಯಾಯ ಆರಂಭವಾಗಿದೆ.
ಇತಿಹಾಸದ ಪುಟ ಸೇರಿದ ದೇಶದ ಹಳೇ ‘ಸಂಸತ್ ಭವನ’
ಪ್ರಜಾಪ್ರಭುತ್ವದ ದೇಗುಲದ ಮುಂದೆ ಫೋಟೋಶೂಟ್!
ಹಳೇ ಸಂಸತ್ ಭವನದಲ್ಲಿ ಲೋಕಸಭೆ, ರಾಜ್ಯಸಭೆ ಅಧಿವೇಶನಕ್ಕೆ ವಿದಾಯ ಹೇಳಲಾಗಿದೆ. 5 ದಿನಗಳ ವಿಶೇಷ ಅಧಿವೇಶನದ 2ನೇ ದಿನವಾದ ಇಂದು ಹಳೇ ಸಂಸತ್ ಭವನದ ಆಡಳಿತ ಅಂತ್ಯವಾಗಿದೆ. ಈ ಹೊತ್ತಲ್ಲಿ ಹಳೇ ಸಂಸತ್ ಭವನದ ಮುಂದೆ 552 ಸಂಸದರ ಸಮಾಗಮವಾಗಿತ್ತು. ಹಳೇ ಪಾರ್ಲಿಮೆಂಟ್ ಕಟ್ಟಡಕ್ಕೆ ನಿವೃತ್ತಿ ಹೇಳುವ ಹೊತ್ತಲ್ಲಿ ಅತೀ ದೊಡ್ಡ ಫೋಟೋ ಶೂಟ್ ನಡೀತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಂಸದ ರಾಹುಲ್ ಗಾಂಧಿ, ಸಂಸದೆ ಸೋನಿಯಾ ಗಾಂಧಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶದ ಎಲ್ಲಾ ಸಂಸದರು ಹಳೇ ಸಂಸತ್ ಭವನದ ಮುಂದೆ ನಡೆದ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದರು.
ಇನ್ಮೇಲೆ ಹಳೇ ಸಂಸತ್ ಭವನ ‘ಸಂವಿಧಾನ ಸದನ’
ಪಾರ್ಲಿಮೆಂಟ್‌ಗೆ ಹೊಸ ಹೆಸರಿಟ್ಟ ಪ್ರಧಾನಿ ಮೋದಿ
ಹಳೇ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಪ್ರಧಾನಿ ಮೋದಿ ಕೊನೆಯ ಭಾಷಣ ಮಾಡಿದ್ರು. ಅರ್ಥವ್ಯವಸ್ಥೆಯಲ್ಲಿ ಭಾರತ ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಬರಲಿದೆ. ವಿಶ್ವದಲ್ಲಿ ಇಂದು ಭಾರತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಭಾರತದಲ್ಲಿನ ವೇಗದ ಅಭಿವೃದ್ಧಿ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದ್ರು. ಅಲ್ಲದೇ ಹಳೇ ಸಂಸತ್ ಭವನಕ್ಕೆ ಹೊಸ ಹೆಸರನ್ನ ಘೋಷಿಸಿದ್ದರು. ಇನ್ಮೇಲೆ ಹಳೇ ಸಂಸತ್ ಭವನ ಸಂವಿಧಾನ ಸದನವಾಗಿ ದೇಶದ ಹೆಮ್ಮೆಯಾಗಿ ಇರಲಿದೆ ಎಂದರು.
ಅನೇಕ ಕಾನೂನು, ಸಂಶೋಧನೆಗಳು, ಸುಧಾರಣೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿವರೆಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹತ್ತತ್ರ 4 ಸಾವಿರ ಕಾನೂನುಗಳು ಪಾಸ್ ಆಗಿವೆ. ಭವಿಷ್ಯದಲ್ಲಿ ಮಹನೀಯರಾದ ನೀವು ಒಪ್ಪಿಕೊಂಡ್ರೆ ಇದಕ್ಕೆ ಸಂವಿಧಾನ ಸದನ ಎಂದು ಕರೆಯೋಣ.
– ನರೇಂದ್ರ ಮೋದಿ, ಪ್ರಧಾನಮಂತ್ರಿ
ಹಳೇ ಸಂಸತ್‌ಗೆ ವಿದಾಯ.. ನವ ಸಂಸತ್‌ನತ್ತ ಹೆಜ್ಜೆ
ಹಳೇ ಸಂಸತ್ ಭವನದ ಮುಂದೆ ಫೋಟೋ ಶೂಟ್ ಬಳಿಕ ನೂತನ ಸಂಸತ್ ಭವನದತ್ತ ಪ್ರಧಾನಿ ಮೋದಿ ಹೆಜ್ಜೆ ಹಾಕ್ತಿದ್ರೆ, ಎಲ್ಲಾ ಸಂಸದರ ಅವರನ್ನ ಹಿಂಬಾಲಿಸಿದ್ರು. ಪಾದಯಾತ್ರೆ ಮೂಲಕ ಘೋಷಣೆಯನ್ನ ಕೂಗುತ್ತಾ ಬಿಜೆಪಿ ಸಂಸದರು ನೂತನ ಪಾರ್ಲಿಮೆಂಟ್‌ನ ಪ್ರವೇಶಿಸಿದ್ರು.
ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ
ನೂತನ ಸಂಸತ್‌ನಲ್ಲಿ ವಿಶೇಷ ಅಧಿವೇಶನದ ಮೊದಲ ಕಲಾಪ ನಡೀತು. 2ನೇ ದಿನದ ವಿಶೇಷ ಅಧಿವೇಶನದಲ್ಲಿ ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆಗಳು ನಡೆದವು. ಇನ್ನೂ ಹೊಸ ಸಂಸತ್‌ನ ಭವನದ ಮೊದಲ ಭಾಷಣ ಮಾಡಿದ ಪ್ರಧಾನಿ ಮೋದಿ, ಸಂಸತ್ ಭವನ ನಿರ್ಮಾಣಕ್ಕೆ ಕಾರಣವಾದ ಕೈಗಳಿಗೆ ಧನ್ಯವಾದ ತಿಳಿಸಿದ್ದರು. ಕೊರೊನಾ ಕಾಲದಲ್ಲೂ 30 ಸಾವಿರ ಕಾರ್ಮಿಕರು ಹೊಸ ಸಂಸತ್ ನಿರ್ಮಿಸಿದ್ದಾರೆ. ದೇಶದ 140 ಕೋಟಿ ಜನರ ಪರವಾಗಿ ಶ್ರಮಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ಪ್ರಧಾನಿ ಹೇಳಿದ್ದಾರೆ.
ಹೊಸ ಸಂಸತ್ ಭವನ ಆಧುನಿಕ ಭಾರತದ ಭವ್ಯತೆಯನ್ನ ಸಾರುತ್ತದೆ. ನಮ್ಮ ಕಾರ್ಮಿಕರು, ನಮ್ಮ ಎಂಜಿನಿಯರ್‌ಗಳು, ನಮ್ಮ ಕೆಲಸಗಾರರ ಬೆವರು ಸುರಿಸಿದ್ದಾರೆ. ಕೊರೊನಾ ಕಾಲದಲ್ಲೂ ಸಾವಿರಾರು ಕಾರ್ಮಿಕರು ಈ ಹೊಸ ಸಂಸತ್ ನಿರ್ಮಿಸಿದ್ದಾರೆ.
ಇನ್ನೂ ನೂತನ ಪಾರ್ಲಿಮೆಂಟ್‌ನಲ್ಲಿ ಇವತ್ತು ಮಹತ್ವದ ಮಸೂದೆಗಳು ಮಂಡನೆಯಾಯ್ತು. ಬಳಿಕ ಸದನವನ್ನ ನಾಳೆಗೆ ಮುಂದೂಡಲಾಯ್ತು. ಒಟ್ಟಾರೆ, ಹೊಸ ಚಿಗುರು ಬಂದ್ಮೇಲೆ ಒಣಗಿದ ಎಲೆ ಅದಕ್ಕೆ ಜಾಗ ಮಾಡಿಕೊಡಲೇ ಬೇಕು. ಅದರಂತೆ ಇನ್ಮೇಲೆ ಹಳೇ ಕಟ್ಟಡ ಸಂವಿಧಾನ ಸದನವಾಗಿ ಇರಲಿದೆ. ಈ ಕಟ್ಟಡವನ್ನ ಕೆಡವದೇ ರಿಟ್ರೊಫಿಟ್ ಮಾಡಲಾಗುತ್ತೆ ಎಂದು ತಿಳಿದುಬಂದಿದೆ. ಅಲ್ಲದೇ ಹಳೆಯ ಕಟ್ಟಡದ ಒಂದು ಭಾಗವನ್ನು ಮ್ಯೂಸಿಯಂ ಆಗಿ ಪರಿವರ್ತಿಸಬಹುದು ಎನ್ನಲಾಗ್ತಿದೆ. ಒಟ್ಟಾರೆ, ಹೊಸಸಂಸತ್ ಭವನದ ಕಾರ್ಯಾರಂಭವಾಗಿದ್ರೆ, ಹಳೇ ಸಂಸತ್ ಭವನ ದೇಶದ ಪುರಾತತ್ವ ಆಸ್ತಿಯಾಗಿ ಇತಿಹಾಸದ ಪುಟ ಸೇರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ