newsfirstkannada.com

ಹಠಾತ್ ಸಂಭವಿಸುವ ಹೃದಯಾಘಾತಕ್ಕೆ ಹೊಸ ಕಾರಣ ಬಿಚ್ಚಿಟ್ಟ ಹೃದ್ರೋಗ ತಜ್ಞರು; ಆಘಾತಕಾರಿ ಸುದ್ದಿ

Share :

07-11-2023

  ಯುವಕರು,‌ ಮಕ್ಕಳಲ್ಲಿ ಹೆಚ್ಚಾಗ್ತಿದೆ ಹೃದಯಾಘಾತ

  ಮಾಲಿನ್ಯದಿಂದ‌ ಶೇ.10ರಷ್ಟು ಹೃದ್ರೋಗ ಸಮಸ್ಯೆ

  ಡಾ.ಸಿ.ಎನ್.ಮಂಜುನಾಥ್ ಅವರಿಂದ ಶಾಕಿಂಗ್ ಮಾಹಿತಿ

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಯುವಕರು, ‌ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ. ಹಠಾತ್ ಸಂಭವಿಸುವ ಹೃದಯಾಘಾತಕ್ಕೆ ಹೃದ್ರೋಗ ತಜ್ಞರು ಇದೀಗ ಹೊಸ ಕಾರಣವನ್ನು ತಿಳಿಸಿದ್ದಾರೆ.

ಒತ್ತಡ, ಆಹಾರ ಕ್ರಮ, ಬೊಜ್ಜು ಮಾತ್ರವಲ್ಲದೇ ವಾಯು ಮಾಲಿನ್ಯದಿಂದಲೂ ಹೃದಯಾಘಾತ ಆಗುತ್ತಿದೆ. ವಾಯು ಮಾಲಿನ್ಯದಿಂದ‌ ಶೇಕಡಾ 10ರಷ್ಟು ಜನರಿಗೆ ಹೃದ್ರೋಗ ಸಮಸ್ಯೆ ಕಾಡುತ್ತಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಮಾಲಿನ್ಯದ ಅಪಾಯಕಾರಿ ಅಂಶಗಳು ಹೃದಯಕ್ಕೆ ಹಾನಿ ಮಾಡ್ತಿವೆ. ವಾಯು ಮಾಲಿನ್ಯವು ಹೃದಯದ ರಕ್ತನಾಳದ ಕಾಯಿಲೆಗಳಿಗೆ ಪ್ರಮುಖ‌ ಕಾರಣವಾಗ್ತಿದೆ. ಬ್ರಾಂಕೈಟಿಸ್ ( Bronchitis) ಅಥವಾ ಅಸ್ತಮಾದಂತಹ ಸಮಸ್ಯೆಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡ್ತಿದೆ. 2.5 ಮೈಕ್ರಾನ್‌ಗಳಿಗಿಂತ ಕಡಿಮೆಯಿರುವ ಪರ್ಟಿಕ್ಯುಲೇಟ್ ಮ್ಯಾಟರ್​ನಿಂದ ಅಪಾಯ.

ಪರ್ಟಿಕ್ಯುಲೇಟ್ ಮ್ಯಾಟರ್ ಶ್ವಾಸಕೋಶದ ತಡೆಗೋಡೆಗಳ ಮೂಲಕ ಹಾದುಹೋಗುತ್ತದೆ. ಎಂಡೋಥೀಲಿಯಲ್ ರಕ್ತನಾಳಗಳ ಸಮರ್ಥ ನಿರ್ವಹಣೆಗೆ ಅಡ್ಡಿ ಮಾಡುತ್ತದೆ. ಹೃದಯ ಪರಿಧಮನಿಗಳಲ್ಲಿ ನಿಧಾನಗತಿಯ ರಕ್ತ ಹರಿವಿಗೆ ಕಾರಣವಾಗುತ್ತದೆ. ಜೊತೆಗೆ ಹೃದಯದ ರಕ್ತ ಹೆಪ್ಪುಗಟ್ಟುವುದಲ್ಲದೇ ಹೃದಯಕ್ಕೆ ಹಲವು ಅಡೆತಡೆ ಆಗುತ್ತದೆ. ವಾಯು ಮಾಲಿನ್ಯದಿಂದಲೇ ಭಾರತದಲ್ಲಿ 22 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಡಾ.ಸಿ.ಎನ್.‌ಮಂಜುನಾಥ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಠಾತ್ ಸಂಭವಿಸುವ ಹೃದಯಾಘಾತಕ್ಕೆ ಹೊಸ ಕಾರಣ ಬಿಚ್ಚಿಟ್ಟ ಹೃದ್ರೋಗ ತಜ್ಞರು; ಆಘಾತಕಾರಿ ಸುದ್ದಿ

https://newsfirstlive.com/wp-content/uploads/2023/07/DR-CN-Manjunath.jpg

Load More