newsfirstkannada.com

ಹಳದಿ ಸೀರೆಯ ನಾರಿಯಿಂದ ಕೇದಾರನಾಥದಲ್ಲಿ ಹೊಸ ರೂಲ್ಸ್‌ ಜಾರಿ; ದೇವರನಾಡಲ್ಲಿ ಯುವಪ್ರೇಮಿಗಳಿಂದ ಫಜೀತಿ!

Share :

05-07-2023

    ಹಳದಿ ನಾರಿಯ ಪ್ರೀತಿಯಿಂದ ಕೇದಾರನಾಥ ಭಕ್ತರಿಗೆ ಹೊಸ ಸಂಕಷ್ಟ

    ಗೆಳೆಯನಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟು ಪ್ರಪೋಸ್ ಮಾಡಿದ್ದ ಯುವತಿ

    ಇನ್ಮುಂದೆ ಕೇದಾರನಾಥನ ದರ್ಶನಕ್ಕೆ ಬರೋ ಭಕ್ತರಿಗೆ ಷರತ್ತು ಅನ್ವಯ

ಪ್ರೀತ್ಸೋದ್ ತಪ್ಪಾ.. ಖಂಡಿತವಾಗಿಯೂ ಇಲ್ಲ. ತನಗೆ ಇಷ್ಟ ಬಂದ ಹುಡುಗಿಯನ್ನ, ಮನಮೆಚ್ಚಿದ ಹುಡುಗನನ್ನ ಪ್ರೇಮಿಸೋಕು ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆ. ಆದರೆ ಪ್ರೀತಿ, ಪ್ರೇಮ, ಪ್ರಣಯ ಸಾಮಾಜಿಕ ಚೌಕಟ್ಟಿನ ಎಲ್ಲೆ ಮೀರಬಾರದು ಅಷ್ಟೇ. ಇತ್ತೀಚೆಗೆ ಉತ್ತರಾಖಂಡದ ಕೇದಾರನಾಥದಲ್ಲಿ ಪ್ರೇಮ ನಿವೇದನೆಯ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಂಚಲನ ಸೃಷ್ಟಿಸುತ್ತಿದ್ದಂತೆ ಕೇದಾರನಾಥ ದೇವಸ್ಥಾನದ ಆಡಳಿತ ಮಂಡಳಿ ಕೆಂಡಾಮಂಡಲವಾಗಿದೆ.

ಕೇದಾರನಾಥನ ದರ್ಶನಕ್ಕೆ ಬಂದ ಹಳದಿ ಸೀರೆಯ ಯುವತಿ ದೇವಾಲಯದ ಮುಂದೆಯೇ ತನ್ನ ಸ್ನೇಹಿತನಿಗೆ ಪ್ರಪೋಸ್ ಮಾಡ್ತಾಳೆ. ಯುವಕನಿಗೆ ಉಂಗುರ ಕೊಟ್ಟ ಗೆಳತಿ ಸರ್‌ಪ್ರೈಸ್‌ ಕೊಟ್ಟು ಖುಷಿ ಪಡುತ್ತಾಳೆ. ಹಳದಿ ಬಟ್ಟೆ ತೊಟ್ಟಿದ್ದ ಯುವಕ, ಯುವತಿಯರ ಈ ಪ್ರೇಮ ಪ್ರಸಂಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಶೇರ್ ಮಾಡುವಂತೆ ಮಾಡಿದೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಹಲವರು ಪವಿತ್ರ ಕೇದಾರನಾಥನ ಸನ್ನಿಧಿಯಲ್ಲಿ ಈ ಪ್ರೀತಿ, ಪ್ರೇಮ ಬೇಕಿತ್ತಾ ಎಂದು ಕಿಡಿಕಾರಿದ್ದಾರೆ.

ಕೇದಾರನಾಥದಲ್ಲಿ ಪ್ರೇಮಿಗಳ ಈ ವಿಡಿಯೋ ವೈರಲ್ ಆದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಕೇದಾರನಾಥನ ಸನ್ನಿಧಿಯಲ್ಲಿ ಯಾರು ವಿಡಿಯೋ, ಶಾರ್ಟ್ಸ್‌, ರೀಲ್ಸ್‌ ಮಾಡಬಾರದು. ಇದೇ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸ್ಥಳೀಯ ಪೊಲೀಸರಿಗೆ ಖಡಕ್ ಸೂಚನೆಯನ್ನು ನೀಡಿದೆ. ಕೇದಾರನಾಥ ಹಿಂದೂಗಳು ಆರಾಧಿಸುವ ಪವಿತ್ರ ಸ್ಥಳ. ಇಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವಂತ ನಡವಳಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಇಬ್ಬರು ಪ್ರೇಮಿಗಳ ಮಾಡಿದ ತಪ್ಪಿನಿಂದಾಗಿ ಇನ್ಮುಂದೆ ಕೇದಾರನಾಥದಲ್ಲಿ ಯಾರು ಮೊಬೈಲ್ ಬಳಸುವಂತಿಲ್ಲ. ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆ ಭಕ್ತರಿಗೆ ಮೊಬೈಲ್ ಫೋನ್‌ಗಳನ್ನು ಸ್ವಿಚ್‌ ಆಫ್ ಮಾಡಲು ಹೇಳಲಾಗುತ್ತಿದೆ. ಶೀಘ್ರದಲ್ಲೇ ಕೇದಾರನಾಥದಲ್ಲಿ ಮೊಬೈಲ್‌ ಫೋನ್‌ಗಳನ್ನು ಬ್ಯಾನ್‌ ಮಾಡಲು ಕ್ರಮಕೈಗೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹಳದಿ ಸೀರೆಯ ನಾರಿಯಿಂದ ಕೇದಾರನಾಥದಲ್ಲಿ ಹೊಸ ರೂಲ್ಸ್‌ ಜಾರಿ; ದೇವರನಾಡಲ್ಲಿ ಯುವಪ್ರೇಮಿಗಳಿಂದ ಫಜೀತಿ!

https://newsfirstlive.com/wp-content/uploads/2023/07/Kedarnath-Tempel-Love.jpg

Load More