ಇತ್ತೀಚೆಗೆ ಹೆಚ್ಚಾಗುತ್ತಿರೋ ಹಾರ್ಟ್ ಅಟ್ಯಾಕ್ ಪ್ರಕರಣಗಳು
ಹಾರ್ಟ್ ಅಟ್ಯಾಕ್ ತಡೆಗೆ ಸರ್ಕಾರದಿಂದ ಮಾಸ್ಟರ್ ಪ್ಲಾನ್..!
ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಹೆಸರಲ್ಲಿ ಹೊಸ ಸ್ಕೀಮ್
ಬೆಂಗಳೂರು: ನಗರದಲ್ಲಿ ಹಾರ್ಟ್ ಅಟ್ಯಾಕ್ಗೆ ಒಳಗಾಗುವವರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಕಾಮನ್ ಮ್ಯಾನ್ವರೆಗೂ ಕೂಡ ಹೃದಯ ಸಂಬಂಧಿ ಕಾಯಿಲೆ ಕಾಡುತ್ತಿದೆ. ಇದನ್ನ ತಪ್ಪಿಸಲು ಈಗ ಆರೋಗ್ಯ ಇಲಾಖೆ ನಟ ಪುನೀತ್ ಹೆಸರಿನ ಅಪ್ಪು ಯೋಜನೆ ಜಾರಿಗೆ ಮುಂದಾಗಿದೆ. ಅಷ್ಟೇ ಅಲ್ಲ ಅಪ್ಪು ಯೋಜನೆ ವಿಸ್ತರಿಸುವ ಪ್ಲಾನ್ ಕೂಡ ಹಾಕಿಕೊಂಡಿದೆ.
ಯಾವುದೇ ವ್ಯಕ್ತಿಗೆ ಹಾರ್ಟ್ ಅಟ್ಟ್ಯಾಕ್ ಆದ ಸಂದರ್ಭದಲ್ಲಿ ಮೊದಲ ಒಂದು ಗಂಟೆ ಬಹಳ ಮುಖ್ಯವಾಗಿರುತ್ತೆ. ಇದನ್ನ ಗೋಲ್ಡನ್ ಹವರ್ ಎನ್ನುತ್ತಾರೆ. ಆ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೋದಾಗ ವ್ಯಕ್ತಿ ಸಾಯುವ ಪರಿಸ್ಥಿತಿ ಬಂದುಬಿಡುತ್ತೆ. ಇಂತಹ ಸಂದರ್ಭಗಳಿಗೆ ಕಡಿವಾಣ ಹಾಕಿ ಸಾರ್ವಜನಿಕ ಸ್ಥಳಗಳಲ್ಲೇ ಹಾರ್ಟ್ ಅಟ್ಯಾಕ್ ಆದವ್ರಿಗೆ ಚಿಕಿತ್ಸೆ ಕೊಡೋ ಉದ್ದೇಶವೇ ಅಪ್ಪು ಯೋಜನೆ.
ಆಯುಕ್ತರು ಹೇಳ್ತಿರೋ ಸಾಧನದ ಹೆಸರು ಎಇಡಿ. ಅಂದ್ರೆ ಆಟೋಮೇಟೆಡ್ ಎಕ್ಸ್ಟರ್ನಲ್ ಡೆಫಿಬ್ರಿಲೇಟರ್. ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದ್ರ ಬಗ್ಗೆ ಆಯುಕ್ತರು ಹೇಳಿದ್ದಾರೆ. ಇದು ಹಾರ್ಟ್ ಅಟ್ಯಾಕ್ ಆಗೋವರ ಜೀವವನ್ನೂ ರಕ್ಷಿಸಲಿದೆ ಎಂದಿದ್ದಾರೆ.
ಶೀಘ್ರದಲ್ಲೇ ಟೆಂಡರ್ ಸಾಧ್ಯತೆ
ಒಟ್ಟಿನಲ್ಲಿ ಟೆಂಡರ್ ಕರೆದು ಅತೀ ಶೀಘ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ AED ಅಳವಡಿಕೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಒಳ್ಳೆ ಗುತ್ತಿಗೆದಾರರು ಸಿಕ್ರೆ ಜೀವ ರಕ್ಷಕಗಳು ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲೂ ಸಿಗಲಿದೆ. ಈ ಮೂಲಕ ಕೆಲವಷ್ಟು ಜೀವಗಳನ್ನಾದರೂ ಉಳಿಸುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ